7:56 PM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ರಾಜ್ಯ ಸರಕಾರದ ಹೊಸ ಆದೇಶ: ವಿವಿಧೋದ್ದೇಶ ಸಹಕಾರಿ ಸಂಘಗಳು, ಪಿಗ್ಮಿ ಸಂಗ್ರಾಹಕರು ಸಂಕಷ್ಟದಲ್ಲಿ

27/03/2024, 16:14

ಮಂಗಳೂರು(reporterkarnataka.com): ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿದ ಆದೇಶ ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿಧೋದ್ದೇಶ ಸಹಕಾರಿ ಸಂಘಗಳು ಹಾಗೂ ಪಿಗ್ಮಿ ಸಂಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ರ ಕಲಂ 30ಬಿ ಅಡಿಯಲ್ಲಿ ಸರಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿರ್ದೇಶನ ಹೊರಡಿಸಿದೆ. ಇದರ ಪ್ರಕಾರ ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿಧೋದ್ದೇಶ ಸಹಕಾರಿ ಸಂಘಗಳು ಭಾರತೀಯ ಸ್ಟೇಟ್ ಬ್ಯಾಂಕ್ ವಿವಿಧ ಠೇವಣಿ ಮೇಲೆ ವಿವಿಧ ಅವಧಿಗೆ ನಿಗದಿಪಡಿಸಿದ ಬಡ್ಡಿದರ ಅಥವಾ ಅದರ ಮೇಲೆ ಶೇ. 2ರಷ್ಟು ಅಧಿಕ ಬಡ್ಡಿ ಮಾತ್ರವೇ ನಿಗದಿ ಪಡಿಸಬೇಕು. ಸಾಮಾನ್ಯವಾಗಿ ಸಹಕಾರಿ ಸಂಘಗಳು ಶೇ. 10ರಷ್ಟು ಬಡ್ಡಿದರ ನೀಡುತ್ತಿದ್ದು, ಇನ್ನು ಹಾಗೆ ನೀಡುವಂತಿಲ್ಲ. ಇದು ಸಹಕಾರಿ ಸಂಘಗಳಿಗೆ ಬರುವ ಗ್ರಾಹಕರಿಗೆ ನಷ್ಟವಾಗಲಿದೆ. ಹಾಗೆ ಸಾಮಾನ್ಯವಾಗಿ ಪಿಗ್ಮಿಏಜೆಂಟರಿಗೆ ಅವರು ಸಂಗ್ರಹಿಸುವ ಠೇವಣಿಗೆ ಶೇ. 3.5ರಿಂದ 4.5ರ ವರೆಗೆ ಕಮಿಷನ್ ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಇದು ಶೇ. 3 ಮೀರುವಂತಿಲ್ಲ. ಇದರಿಂದ ಪಿಗ್ಮಿ ಸಂಗ್ರಹ ಮಾಡಿ ಬದುಕು ನಡೆಸುತ್ತಿರುವವರು ಸಂಕಷ್ಟಕ್ಕೆ ಎದುರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು