1:55 PM Friday15 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ಪ್ರತಿಷ್ಠಿತ ‘ಪುವೆಂಪು ಸನ್ಮಾನ್’ ಗೆ ರಾಷ್ಟ ಪ್ರಶಸ್ತಿ ವಿಜೇತ ಗಾಯಕ ಡಾ. ರಮೇಶ್ಚಂದ್ರ ಆಯ್ಕೆ

23/09/2022, 20:00

ಕುಂಬಳೆ(reporterkarnataka.com): ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜಯಂತಿ ಪ್ರಯುಕ್ತ ತುಳುವರ್ಲ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪುವೆಂಪು ಅಭಿಮಾನಿಗಳು ಆಯೋಜಿಸುವ ‘ಪುವೆಂಪು ನೆಂಪು 2022’ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “ಪುವೆಂಪು ಸಮ್ಮಾನ್‌”ಗೆ ಖ್ಯಾತ ಹಿನ್ನಲೆ ಗಾಯಕ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ರಮೇಶ್ಚಂದ್ರ ಆವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಸಮಿತಿ ತಿಳಿಸಿದೆ.

10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಸನ್ಮಾನವನ್ನು  ಅಕ್ಟೋಬರ್ 10ಕ್ಕೆ ಅನಂತಪುರದಲ್ಲಿ ಜರಗುವ “ಪುವೆಂಪು- ನೆಂಪು”  ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಹಾಗೂ ವಿವಿಧ ಜನಪ್ರತಿನಿದಿಗಳು, ಸಾಹಿತ್ಯ, ಸಾಂಸ್ಕೃತಿಕ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುತ್ತದೆ.

ವರ್ಷಂಪ್ರತಿ ನಡೆಯುವ “ಪುವೆಂಪು ನೆಂಪು” ಕಾರ್ಯಕ್ರಮದಲ್ಲಿ ಪುವೆಂಪು ಸಮ್ಮಾನ್ ಪ್ರದಾನಿಸಲಾಗುತ್ತಿದ್ದು, ಕಳೆದ ಬಾರಿ ಗಾಯಕ ಕೃಷ್ಣ ಕಾರಂತ್ ಅವರಿಗೆ ನೀಡಲಾಗಿತ್ತು.

ಪುಣಿಂಚಿತ್ತಾಯರ ಬದುಕು ಬರಹಗಳನ್ನು ಅನಾವರಣಗೊಳಿಸುವುದರೊಂದಿಗೆ ಹೊಸ ತಲೆಮಾರಿಗೆ ಇದನ್ನು ತಿಳಿಯಪಡಿಸುವಲ್ಲಿ ಸಫಲರಾಗುತ್ತಿರುವವರನ್ನು ಪ್ರೋತ್ಸಾಹಿಸಲು ಪುವೆಂಪು ಸಮ್ಮಾನ್ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಖ್ಯಾತ  ಗಾಯಕ, ಮೂರು ಬಾರಿ ರಾಜ್ಯ ಪ್ರಶಸ್ತಿ ವಿಜೇತ ಡಾ.ರಮೇಶ್ಚಂದ್ರ 

ಅವರಿಗೆ ನೀಡಲಾಗುತ್ತಿದೆ. ಮೂಲತಃ ಕಾಸರಗೋಡಿನವರಾಗಿದ್ದ ಅವರು ಇದೀಗ ಬೆಂಗಳೂರಿನಲ್ಲಿ ಚಲನಚಿತ್ರ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಕಳೆದ ಬಾರಿ ಮಂಗಳೂರಿನಲ್ಲಿ 101 ಕವಿಗಳ ತುಳು ಕವನ ಪ್ರಕಟಿಸಿ ವೆಂಕಟರಾಜ ಪುಣಿಂಚಿತ್ತಾಯರಿಗೆ ಸಮರ್ಪಿಸಿ ಬರೆಯಲು ಅವಕಾಶ ನೀಡಿದ್ದಲ್ಲದೆ  ರಾಗ ಸಂಯೋಜಿಸಿ ತುಳುವರಿಗೆ ಉತ್ತಮ  ಹಾಡುಗಳ ಕೊರತೆಯನ್ನು ನೀಗಿಸಿ ಈ ಹಾಡುಗಳನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ರಮೇಶ್ಚಂದ್ರ ಅವರು ‘ಪುವೆಂಪು ನೂತೊಂಜಿ ನೆಂಪು” ಎಂಬ ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಪುಸ್ತಕ  ಬಿಡುಗಡೆಗೊಳಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ನಾಡಿನ ನಾನಾ ತುಳು ಕನ್ನಡ ಸಾಹಿತಿಗಳಿಗೆ, ಗಾಯಕರಿಗೆ, ಸಂಘಟಕರಿಗೆ,   ಅವಕಾಶ ನೀಡಿದ್ದಲ್ಲದೆ. ತನ್ನ “ಟೀಮ್ ಐಲೇಸಾ” ಎಂಬ ತಂಡದ ಮೂಲಕ ದೇಶ -ವಿದೇಶದಲ್ಲಿ ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಸಾಹಿತ್ಯಗಳನ್ನು ಪ್ರಸ್ತುತಪಡಿಸುವಲ್ಲಿ ರಮೇಶ್ಚಂದ್ರ ಪ್ರಧಾನ ಪಾತ್ರವಹಿಸಿರುವುದಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಕಾರ್ಯಕ್ರಮ ಸಂಘಟಕರು ಜಂಟಿಯಾಗಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು