6:55 AM Saturday15 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ಪ್ರಧಾನಿ ನೋಡಲು ಬಂದವರೆಲ್ಲ ಬಿಜೆಪಿ ವೋಟರ್ಸ್ ಅಲ್ಲ; ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

15/04/2024, 23:56

ಮಂಗಳೂರು(reporterkarnataka.com):ಮೋದಿ ಅವರು ಈ ದೇಶದ ಪ್ರಧಾನಿ. ಅವರು ಮಂಗಳೂರಿಗೆ ಬಂದಿರೋದಕ್ಕೆ ಸ್ವಾಗತ. ಆದರೆ ಅವರು ಬಂದಿರೋ ಉದ್ದೇಶ ಸರಿಯಿಲ್ಲ. ಎಲ್ಲಾ ಕಡೆಯಿಂದ ಪ್ರಧಾನಿ ನೋಡಲು ಜನ ಬಂದಿದ್ದಾರೆ. ಹಾಗಂತ ಬಂದವರೆಲ್ಲ ಬಿಜೆಪಿ ವೋಟರ್ಸ್ ಎಂದು ಹೇಳಲು ಸಾಧ್ಯ ಇಲ್ಲ. ನಾನು ಆ ಸಂದರ್ಭದಲ್ಲಿ ಇರ್ಲಿಲ್ಲ ಇದ್ದಿದ್ದರೆ ನಾನು ನೋಡಲು ಹೋಗುತ್ತಿದೆ. ಯಾಕಂದ್ರೆ ಅವರು ನಮ್ಮ ಪ್ರಧಾನಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುರತ್ಕಲ್ ನಲ್ಲಿ ಇಂದು ಮತಯಾಚನೆ ಸಂದರ್ಭದಲ್ಲಿ ಮೋದಿ ರೋಡ್ ಶೋನಿಂದ ಪದ್ಮರಾಜ್ ಅವರಿಗೆ ಹಿನ್ನಡೆ ಯಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರಧಾನಿ ಮೋದಿ ಅವರು ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕಿದ್ದನ್ನು ಗೌರವಿಸುತ್ತೇನೆ. ಆದರೆ ಈ ಹಿಂದೆ ಹಲವಾರು ಬಾರಿ ಅವರು ಮಂಗಳೂರಿಗೆ ಬಂದಿದ್ದಾರೆ. ಅಗ ಯಾರೂ ನಿಮಗೆ ಗುರುಗಳನ್ನು ನೆನಪಿಸಲ್ಲವೇ? ಈ ಬಾರಿ ಅಪ್ಪಟ ಅನುಯಾಗಿ 27 ವರ್ಷಗಳಿಂದ ನಾರಾಯಣ ಗುರುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ಪದ್ಮರಾಜ್ ಚುನಾವಣೆ ನಿಂತಾಗ ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳ ನೆನಪಾಗುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ ಎಂದರು.
ಕಾಂಗ್ರೆಸ್ ಸಂಸದರು ಇರುವಾಗ 41 ವರ್ಷಗಳಿಂದ ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಬಿಜೆಪಿ ಎಂಪಿಗಳು 33 ವರ್ಷಗಳಿಂದ ಎಷ್ಟು
ಉದ್ಯೋಗ ಸೃಷ್ಟಿ ಮಾಡಿದ್ದಾರೆ? ಒಂದು ಯೋಜನೆಯನ್ನಾದರೂ ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದಿದಿದ್ದಾರೆಯೇ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನಿಸಿದರು .
ಮುಂಬೈ ನಗರದಲ್ಲಿ ದಿವಸದಲ್ಲಿ 20 ಗಂಟೆ ಲವಲವಿಕೆಯಿಂದ ಇರುತ್ತದೆ. ಹಾಗೆ ನಮ್ಮ ಮಂಗಳೂರು ಎಲ್ಲಾ ಅರ್ಹತೆ ಹೊಂದಿದೆ. ಆದರೆ ಮಂಗಳೂರು ಮಾತ್ರ 9 ಗಂಟೆ ಬಂದಾಗುತ್ತದೆ ಯಾಕೆ ?. ಮೆಡಿಕಲ್ ಹಬ್, ಕೈಗಾರಿಕೆ, ಉದ್ಯೋಗ ಸೃಷ್ಟಿಯಾಗದ ಕಾರಣ, ಮಕ್ಕಳು ವಿದೇಶಕ್ಕೆ ಹೋಗಿ ಅಪ್ಪ ಅಮ್ಮ ಅನಾಥ ವಾಗುತ್ತಿದ್ದಾರೆ. ಇದು ಬಿಜೆಪಿ ಎಂಪಿಗಳ 33 ವರ್ಷಗಳ ಸಾಧನೆ ಎಂದು ಪದ್ಮರಾಜ್ ಟೀಕಿಸಿದರು.
ಬಿಜೆಪಿಯು ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆದು ಹಾಕಿದ್ದಲ್ಲದೆ ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಕೊಡಲಿ ಏಟು ನೀಡಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಪ್ರಚೋದಿಸಿ, ಅವರಿಂದ ಕಾನೂನುಬಾಹಿರ ಕೆಲಸ ಮಾಡಿಸಿ ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಪಕ್ಷದ ಸಾಧನೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು