7:03 PM Sunday7 - June 2026
ಬ್ರೇಕಿಂಗ್ ನ್ಯೂಸ್
Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ

ಇತ್ತೀಚಿನ ಸುದ್ದಿ

ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು: ಸವಾರ ಮೃತ್ಯು

20/05/2024, 21:36

ಮಂಗಳೂರು(reporterkarnataka.com): ನಗರದ ಹೊರವಲಯದ ಪಡೀಲ್ ಸಮೀಪದ ಫಸ್ಟ್ ನ್ಯುರೋ ಆಸ್ಪತ್ರೆ ಸಮೀಪ ಬೈಕೊಂದಕ್ಕೆ ಡಸ್ಟರ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ನಡೆದಿದೆ.

ಸೋಮವಾರ ಮಧ್ಯಾಹ್ನ ಸುಮಾರು 13.10 ಗಂಟೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73 ರಸ್ತೆಯಲ್ಲಿ ಬಿ. ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಡಸ್ಟರ್ ಕಾರು ಬೈಕಿಗೆ ಡಿಕ್ಕಿ ಹೊಡೆದು ಸುಮಾರು ದೂರ ಎಳೆಯಲ್ಪಟ್ಟ ಪರಿಣಾಮ ಬೈಕ್ ಸವಾರ ಹರೀಶ್(46)ಎಂಬವರು ಮೃತಪಟ್ಟಿದ್ದಾರೆ. ಕಾರಿನ ಚಾಲಕಿ ಅನಿತಾ ಅವರು ದುಡುಕುತನ ಮತ್ತು ನಿರ್ಲಕ್ಷ ತನದಿಂದ ಕಾರು ಚಲಾಯಿಸಿಕೊಂಡು ಬಂದು ಫಸ್ಟ್ ನ್ಯೂರೋ ಆಸ್ಪತ್ರೆ ಸಮೀಪ ರಸ್ತೆಯ ತೀರ ಎಡ ಬದಿಯಲ್ಲಿ ಚಲಾಯಿಸಿಕೊಂಡು ಹೋಗಿ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಅದರ ಸವಾರ ಹರೀಶ್ ಮತ್ತು ಬೈಕ್ ನೊಂದಿಗೆ ಸುಮಾರು ದೂರ ರಸ್ತೆಯ ಎಡ ಬದಿಯಲ್ಲಿ ಎಳೆದೊಯ್ದಿತ್ತು.
ಅಪಘಾತದಲ್ಲಿ ಹರೀಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ಲಿಯ ವೈದ್ಯರು ಗಾಯಾಳು ಹರೀಶ್ ಅವರು ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು