1:54 PM Saturday2 - May 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್…

ಇತ್ತೀಚಿನ ಸುದ್ದಿ

ನಡುಗಡ್ಡೆ ಸಂತಸ್ತರಿಗೆ ಶಾಶ್ವತ ಪರಿಹಾರ ಆಗ್ರಹಿಸಿ  ಕೆಡಿಪಿ ಸಭೆಗೆ ಮುತ್ತಿಗೆ: ಅಧಿಕಾರಿಗಳ ನಿಯೋಗ ಜತೆ ಶಾಸಕ ಡಿ.ಎಸ್. ಸ್ಥಳಕ್ಕೆ ಭೇಟಿ !

02/08/2021, 09:13

ವರದಿ: ಅಮರೇಶ್ ಲಿಂಗಸುಗೂರು ರಾಯಚೂರು

info.reporterkarnataka@gmail.com

ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿ ನಡುಗಡ್ಡೆಗಳ ನಿವಾಸಿಗಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ 20 ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಪಂ ಸಭಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷ ತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲಾಯಿತು.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ಸಮಸ್ಯೆ ನನೆಗುದಿಗೆ ಬಿದ್ದಿದೆ. ಸರ್ವೆ 19ರಲ್ಲಿ 11 ಕುಟಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. ಆದರೆ ಅಲ್ಲಿ ಹಳ್ಳದ ಬಸಿ ನೀರು ಬರುತ್ತಿದ್ದರಿಂದ ವಾಸ ಮಾಡಲು ಯೋಗ್ಯವಲ್ಲದ ಕಾರಣ ಯಳಗುಂದಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಿವೇಶನಗಳನ್ನು ಒದಗಿಸಬೇಕು. ಈ ಪೈಕಿ ನಡುಗಡ್ಡೆಯಲ್ಲಿ ವಾಸವಿರದ ಮೂರು ನಾಯಕ ಸಮುದಾಯದ ಕುಟಂಬಗಳಿಗೆ ನಿವೇಶನ ಹಕ್ಕುಪತ್ರ ನೀಡುವ ಮೂಲಕ ತಹಶೀಲ್ದಾರರ ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಇದಲ್ಲದೆ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೆಲೆಗುದಿಗೆ ಬಿದ್ದಿದೆ. ಇದರಲ್ಲಿ ಇಲ್ಲಿನ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ,ಸಹಾಯಕ ಆಯುಕ್ತರು, ತಹಶೀಲ್ದಾರ ಇಚ್ಚಾಶಕ್ತಿ ಇಲ್ಲದಿರುವುದೇ ಇದಕ್ಕೆ ಮೂಲಕಾರಣ ವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತ್ರೈಮಾಸಿಕ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮನವಿ  ಸಲ್ಲಿಸಿದ್ದರು. ಇದನ್ನರಿತು ಎಚ್ಚೆತ್ತುಕೊಂಡ ಶಾಸಕರು ಅಧಿಕಾರಿಗಳ ನಿಯೋಗ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಧಿಕಾರಿಗಳು ಸಂತ್ರಸ್ತರಿಗೆ ನೀಡಬೇಕಾದ ಸರ್ಕಾರದ ಸೌಲಭ್ಯಗಳನ್ನು ನೀಡಲು ಮೀನಮೇಷ ಮಾಡುತ್ತಿರುವುದನ್ನು ಕಂಡ ಹನುಮಂತಪ್ಪ ವೆಂಕಟಾಪುರ ಹೋರಾಟಗಾರರು ತಾಲೂಕ ದಂಡಾಧಿಕಾರಿ ಜತೆ  ಮಾತಿನ ಚಕಮಕಿ ನಡೆಯಿತು.  ಆಗ ಸ್ಥಳದಲ್ಲಿದ್ದ ಶಾಸಕರು ಹಾಗೂ ಸಹಾಯಕ ಆಯುಕ್ತರು ಸಂಘಟಕರಿಗೆ ಸಮಜಾಯಿಸಿ ಅಧಿಕಾರಿಗಳಿಗೆ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಬೇಕೆಂದು ತಾಲೂಕ ದಂಡಾಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ವೆಂಕಟಾಪುರ್(ಜಿಲ್ಲಾ ಸಂಘಟನಾ ಸಂಚಾಲಕರು), ಮಹಾದೇವಪ್ಪ ಪರಂಪರ (ತಾಲೂಕ ಸಂಚಾಲಕರು), ಹಾಜಪ್ಪ ಕರಡಕಲ್, ಶರಣಪ್ಪ ಕಟ್ಟಿಮನಿ, ಬಸವರಾಜ್ ಬಂಕದ ಮನೆ, ಲಕ್ಕಪ್ಪ ನಾಗರಾಳ, ಹಾಗೂ ಸಂಘಟನೆ ಸದಸ್ಯರು, ನೆರೆ ಸಂತ್ರಸ್ತ ಫಲಾನುಭವಿಗಳು ಇನ್ನಿತರ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು