12:53 AM Tuesday12 - May 2026
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ… ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಶೇ. 1.50ರಷ್ಟು ಹೆಚ್ಚಳ: ಸರ್ಕಾರದ… ಸುವೇಂದು ಪಿಎ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ಸಿಐಡಿ ತನಿಖೆ

ಇತ್ತೀಚಿನ ಸುದ್ದಿ

ಮುಖ್ಯಮಂತ್ರಿ ಬೊಮ್ಮಾಯಿ ಇಂದು ಮಂಗಳೂರಿಗೆ: ಯಾವುದೆಲ್ಲ ಕಾರ್ಯಕ್ರಮಗಳಲ್ಲಿ ಸಿಎಂ ಪಾಲ್ಗೊಳ್ಳುವರು? ಮುಂದಕ್ಕೆ ಓದಿ

12/08/2021, 08:32

ಮಂಗಳೂರು(reporterkarnataka.com): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 12ರಂದು ಮಂಗಳೂರಿಗೆ ಆಗಮಿಸುವರು. ಸಿಎಂ ಆದ ಬಳಿಕ ಇದು ಅವರ ಮೊದಲ ಭೇಟಿಯಾಗಿದೆ.

ಮುಖ್ಯಮಂತ್ರಿಯವರು 12ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಮಂಗಳೂರಿಗೆ 10.50ಕ್ಕೆ ಆಗಮಿಸುವರು. ರಸ್ತೆಯ ಮೂಲಕ 11.20ಕ್ಕೆ ಜಿಲ್ಲಾ ಪಂಚಾಯಿತಿ ಕಚೇರಿಗೆ ತಲುಪುವರು. 11.30ಕ್ಕೆ ಕೋವಿಡ್ 19 ಕುರಿತಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸುವರು. ಈ ಮಧ್ಯೆ ವೆನ್ಲಾಕ್ ನಲ್ಲಿ 36 ಬೆಡ್ ನ ಐಸಿಯು ವಿಭಾಗವನ್ನು ಉದ್ಘಾಟಿಸುವರು. ಉರ್ವ ಸಮೀಪದ ಅಂಬೇಡ್ಕರ್ ಭವನವನ್ನು ಕೂಡ ಉದ್ಘಾಟಿಸುವ ಕಾರ್ಯಕ್ರಮವಿದೆ.

ಮಧ್ಯಾಹ್ನ 2.30ಕ್ಕೆ ರಸ್ತೆ ಮೂಲಕ ಉಡುಪಿಗೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಉಡುಪಿ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ಉಡುಪಿ ಜಿಪಂ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸುವರು. ರಾತ್ರಿ 8 ಗಂಟೆಗೆ ಮಂಗಳೂರಿಗೆ ಆಗಮುಸಿ ವಾಸ್ತವ್ಯ ಹೂಡುವರು.

ಇತ್ತೀಚಿನ ಸುದ್ದಿ

ಜಾಹೀರಾತು