5:37 AM Thursday7 - May 2026
ಬ್ರೇಕಿಂಗ್ ನ್ಯೂಸ್
ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ…

ಇತ್ತೀಚಿನ ಸುದ್ದಿ

ಮುಖಂಡರೊಬ್ಬರ ದರ್ಬಾರ್: ನಿಯಮ ಮೀರಿ ಕಾರಿನ ವಿನ್ಯಾಸ ಮಾರ್ಪಾಡು !!: ಅಧಿಕಾರಿಗಳು ಕ್ರಮ ಕೈಗೊಳ್ಳುವರೇ? ಇಲ್ಲ ಸೆಲ್ಯೂಟ್ ಹೊಡೆಯುವರೇ?

03/06/2022, 09:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

ಬಿಜೆಪಿ ಮುಖಂಡರೊಬ್ಬರು ತನಗೆ ಮನಸ್ಸಿಗೆ ಬಂದಂತೆ ಕಾರಿನ ಮೂಲ ಬಣ್ಣ ಸೇರಿದಂತೆ ಇತರ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಓಡಾಡುವ ಮೂಲಕ ಅಂಧ ದರ್ಬಾರ್ ಪ್ರದರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ .

ಇವತ ಹೆಸರು ಎಚ್ .ಸಿ .ತಿಮ್ಮೇಗೌಡ .ಊರು : ಬೆಂಗಳೂರಿನ ಬ್ಯಾಟರಾಯನಪುರ .

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ . ಜತೆಗೆ ಕೇಸರಿ ಫೌಂಡೇಷನ್ ನ ಸಂಸ್ಥಾಪಕ !!

ಕಾರಿಗೆ ಕಣ್ಣಿಗೆ ರಾಚುವಂಥ ಕೇಸರಿ ಬಣ್ಣ. ಹಿಂಬದಿ ಗಾಜಿನಲ್ಲಿ ಇವರ ಭಾವಚಿತ್ರದ ಜತೆಗೆ ಹುದ್ದೆಗಳ ಹೆಸರು .!!

(ಗಾಜುಗಳು ಮುಕ್ತವಾಗಿರಬೇಕು ಎಂಬ ನಿಯಮ ಇದೆ )ಬದಿಯ ಗಾಜುಗಳಿಗೂ ಬಣ್ಣ ಲೇಪನ .

ಬದಿಯ  ಭಾಗದಲ್ಲಿಯೂ ಈತನ ಭಾವಚಿತ್ರ ಜತೆಗೆ ಸಂಪರ್ಕ ಸಂಖ್ಯೆ .
ಹೀಗೆ ಅವಾಂತರಗಳ ಮೇಲೆ ಅವಾಂತರ.ಸಣ್ಣಪುಟ್ಟವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವ ಪೋಲಿಸರು , ಸಾರಿಗೆ ಇಲಾಖೆ ಅಧಿಕಾರಿಗಳು  ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿ ಯಾಗಿದ್ದು  5 ಬಸ್ಸುಗಳಲ್ಲಿ ಜನರನ್ನು ಶೃಂಗೇರಿ – ಹೊರನಾಡು ಇನ್ನಿತರ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆತಂದಿರುವುದು ವಿಶೇಷ .


ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಕ್ರಮ ಕೈಗೊಳ್ಳುವರೇ ಅಥವಾ ಸೆಲ್ಯೂಟ್ ಹೊಡೆದು ಹಾಗೆ ಕಳಿಸುವರೇ  ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು