3:54 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಮಾಡೆಲಿಂಗ್ ಜಗತ್ತಿಗೆ ಪ್ರಥಮ ಬಾರಿಗೆ ಸ್ಥಳೀಯ ಸುಂದರಿಯರ ನೂತನ ರೂಪದರ್ಶಿಗಳಾಗಿ ಪರಿಚಯಿಸುವ- ಫೇಸಸ್ ಆಫ್ ಮುಳಿಯ

03/09/2024, 19:40

ಪುತ್ತೂರು(reporterkarnataka.com): ಮುಳಿಯ ಚಿನ್ನಾಭರಣ ಮಳಿಗೆ ಕಳೆದ 80 ವರ್ಷಗಳಿಂದ ನಂಬಿಕೆಯ ಆಭರಣ ಮಳಿಗೆಯಾಗಿರುತ್ತದೆ.
ಹಾಗೆಯೇ ಸ್ಥಳೀಯರಿಗೆ ಅವಕಾಶಕ್ಕಾಗಿ ಗಾನರಥ ಗಾಯನ ಸ್ಪರ್ಧೆ, ಕೃಷಿಯನ್ನು ಉದ್ಯಮವಾಗಿ ನೋಡಬೇಕು ಅನ್ನುವ ಕೃಷಿಕೋದ್ಯಮ ಸೆಮಿನಾರ್, ಕಾಡುಬೆಳೆಸಲು ಲಕ್ಷಕ್ಕೂ ಮಿಕ್ಕಿ ಸೀಡ್ ಬಾಲ್ ಎಸೆತ, ದೇಶದಲ್ಲೇ ಮೊದಲ ಬಾರಿ ಸ್ವಚ್ಛ ಪುತ್ತೂರು ಕಾರ್ಯಕ್ರಮ ಹೀಗೆ ಸದಾ ಹಲವು ಹೊಸತನವನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ಹೊಸತನಕ್ಕೆ ಈಗ ಇನ್ನೊಂದು ಆಯಾಮವೇ *ಫೇಸಸ್ ಆಫ್ ಮುಳಿಯ*
ಮುಳಿಯ ಜುವೆಲ್ಲರ್ಸ್
ಶಾಖೆಗಳಿರುವ ಕೊಡಗು, ಪುತ್ತೂರು, ಬೆಳ್ತಂಗಡಿ, ಬೆಂಗಳೂರು ಸುತ್ತ ಇರುವ ಮಾಡೆಲಿಂಗ್ ಆಸಕ್ತ ರೂಪಸಿಯರನ್ನು ಆಯ್ಕೆ ಮಾಡಿ ,ಅವರಿಗೆ ನಮ್ಮ ವೈವಿಧ್ಯಮಯ ಆಭರಣಗಳನ್ನು ತೊಡಿಸಿ ವೃತ್ತಿಪರ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಶೂಟಿಂಗ್ ಮಾಡಿ ಅದರಲ್ಲಿ ಉತ್ತಮವಾದದ್ದನ್ನು ಮತ್ತೆ ಪುನಃ ಆಯ್ಕೆ ಮಾಡಿ ಮುಳಿಯ ಮಾಡೆಲ್ ಗಳಾಗಿ ಪರಿಚಯಿಸುವ ಮೂಲಕ ಮಾಡೆಲಿಂಗ್ ಉದ್ಯಮದಲ್ಲಿ ಅವರನ್ನು ಬೆಳೆಸುವುದು ಉದ್ದೇಶವಾಗಿದೆ.
ಈ ವಿನೂತನ ಕಾರ್ಯಕ್ರಮದಲ್ಲಿ 800 ಕೂ ಅಧಿಕ ಯುವಕ- ಯುವತಿಯರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 150 ಜನರನ್ನು ನಾವು ಈಗಾಗಲೇ ಆಯ್ಕೆ ಮಾಡಿ ಅವರ ಪ್ರೊಫೈಲ್ ಶೂಟ್ ಮಾಡಿ ಆಗಿರುತ್ತದೆ. ಇವು ನಮ್ಮ ಯೂಟ್ಯೂಬ್ ಚಾನೆಲ್ ಗಳಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಈಗಾಗಲೇ ಜನ ಮೆಚ್ಚುಗೆ ಪಡೆದಿದೆ.
ಇವರಲ್ಲಿ ಹಲವಾರು ರೂಪದರ್ಶಿಗಳು ನಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರೀಲ್ ಗಳ ಮೂಲಕ ಜನಪ್ರಿಯರಾಗಿ ಲೈಕ್ ಗಳನ್ನು ಪಡೆದಿದ್ದಾರೆ.
ಫೇಸಸ್ ಆಫ್ ಮುಳಿಯ ಬಗ್ಗೆ ಮಾತನಾಡಿದ ಶ್ರೀಮತಿ ಮಾನಸ ಮಾಡೆಲ್ ” ಇದು ನನಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಹೆಜ್ಜೆ ಇಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ” ಎನ್ನುತ್ತಾರೆ.
“ಮುಳಿಯದವರ ಈ ಕಾರ್ಯಕ್ರಮ ನನಗೆ ಮಾಡೆಲಿಂಗ್ ಮಾಡುವ ಕಾನ್ಫಿಡೆಂಟ್ ನೀಡಿದೆ” ಎನ್ನುತ್ತಾರೆ ಇನ್ನೋರ್ವ ರೂಪದರ್ಶಿ ಮಹಾಲಸ ಪೈ
“ನನ್ನ ಮಗಳು ಫೇಸಸ್ ಆಫ್ ಮುಳಿಯ ಚಿನ್ನಾಭರಣಗಳೊಂದಿಗೆ ತುಂಬಾ ಚೆನ್ನಾಗಿ ಕಾಣುತ್ತಾಳೆ” ಎನ್ನುತ್ತಾರೆ ಆಮೇಚೂರ್ ಮಾಡೆಲ್ ಅಮ್ಮ ಶ್ರೀಮತಿ, ಅನುರಾಧ ಪುತ್ತೂರು.
ಫೇಸಸ್ ಆಫ್ ಮುಳಿಯ ಒಂದು ವಿನೂತನ ಪ್ರಯೋಗವಾಗಿದ್ದು ಮಹಿಳೆಯರ ಸೌಂದರ್ಯ ಪ್ರಜ್ಞೆಯನ್ನು ಆಭರಣಗಳೊಂದಿಗೆ ಸಂಭ್ರಮಿಸುವ ಉದ್ದೇಶದಾಗಿದೆ. ಇದು ಈಗಾಗಲೇ ಜನಪ್ರಿಯವೂ ಆಗಿದೆ. ಇಲ್ಲಿ ಆಯ್ಕೆಯಾದ 15- 20 ಮಾಡೆಲ್ ಗಳನ್ನ ಸಿನಿಮಾ ಪತ್ರಿಕೆಗಳ ಮೂಲಕ ,ನಮ್ಮ ಜಾಹೀರಾತು ಮೂಲಕ, ಮುಳಿಯ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯಿಸಲಾಗುವುದು. ಇದರಿಂದಾಗಿ ಅವರ ಮುಂದಿನ ಮೋಡಲಿಂಗ್ ಅವಕಾಶ ಉಜ್ವಲ ಹೊಸ ಅವಕಾಶದ ಕಡೆಗೆ ಮುಂದುವರೆಯಲಿ ಎನ್ನುವುದೇ ನಮ್ಮ ಉದ್ದೇಶ ಇದರಲ್ಲಿ ಭಾಗವಹಿಸಿದ ಹೆಚ್ಚಿನವರ ಭಾವಚಿತ್ರಗಳು ಅತ್ಯುತ್ತಮವಾಗಿ ಮೂಡಿಬಂದಿದೆ .

ಮುಂದಿನ ಸಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಮುಳಿಯ ಮಳಿಗೆಯಲ್ಲಿ ನಡೆಯುವ ಡೈಮಂಡ್ ಫೆಸ್ಟ್ ಮತ್ತು ಚಿನ್ನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಫೇಸಸ್ ಆಫ್ ಮುಳಿಯ ದಲ್ಲಿ ಆಯ್ಕೆಯಾದವರನ್ನು ಆಹ್ವಾನಿಸಿ ಫ್ಯಾಶನ್ ಶೋ ಮಾಡಲಾಗುವುದು
“ಒಟ್ಟು 150 ಫೋಟೋಗಳಲ್ಲಿ 20 ಜನರನ್ನು ಆಯ್ಕೆ ಮಾಡಲಾಗುವುದು. ಈ ಆಯ್ಕೆಯನ್ನು ಮಾಡೆಲ್ ಕ್ಷೇತ್ರದ ನುರಿತ ಅನುಭವಿಗಳ ತಂಡವನ್ನು ರಚಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು