3:35 AM Tuesday23 - June 2026
ಬ್ರೇಕಿಂಗ್ ನ್ಯೂಸ್
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್…

ಇತ್ತೀಚಿನ ಸುದ್ದಿ

ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ

16/03/2026, 18:53

ಬೆಂಗಳೂರು(reporterkarnataka.com): ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷರೇ ಸಭಾತ್ಯಾಗ ಮಾಡುವಂಥ ಸನ್ನಿವೇಶವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ.

ವಿಧಾನಸಭೆಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಕೆಲ ಸಚಿವರು ಹಾಗೂ ಅಧಿಕಾರಿಗಳ ಉತ್ತರ ನೀಡದೇ ಇದಿದ್ದಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದದರು.ಅಲ್ಲದೆ, ಮೊದಲ ಬಾರಿಗೆ ಸದನವನ್ನೇ ಮುಂದೂಡಿಕೆ ಮಾಡಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಸರ್ಕಾರ ಸತತವಾಗಿ ವಿಧಾನಸಭೆಗೆ ಲಿಖಿತ ಮೂಲಕ ಒದಗಿಸಬೇಕಾದ ಉತ್ತರವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಇದೇ ಅಧಿವೇಶನದಲ್ಲಿ ಐದನೇ ಬಾರಿಗೆ ಸರ್ಕಾರ ಸಭಾಧ್ಯಕ್ಷರ ಸೂಚನೆಯನ್ನು ನಿರ್ಲಕ್ಷಿಸಿದೆ. ಇಂದು ಲಿಖಿತ ರೂಪದಲ್ಲಿ ಪೂರೈಕೆ ಮಾಡಬೇಕಾದ 230 ಪ್ರಶ್ನೆಗಳ ಪೈಕಿ 80ಕ್ಕೆ ಮಾತ್ರ ಗೃಹ ಸಚಿವ ಡಾ. ಪರಮೇಶ್ವರ್​ ಅವರು ಉತ್ತರ ನೀಡಿದರು.
ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, ಹೇಗೆ ಲೆಕ್ಕ ಹಾಕಿದರೂ ಶೇ. 50ರಷ್ಟು ಗಡಿ ದಾಟಿಲ್ಲ. ಈ ಹಿಂದೆ ಹೇಳಿದ ಸಭಾಧ್ಯಕ್ಷರ ಆದೇಶಗಳಿಗೆ ಈ ಸರ್ಕಾರ ಯಾವುದೇ ಬೆಲೆ ನೀಡಿಲ್ಲ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು, ಸಕಾರಣ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಕಲಾಪ ಮುಂದೂಡಿದ್ದಾರೆ.
ಈ ರಾಜ್ಯ ಸರ್ಕಾರಕ್ಕೆ ಕಲಾಪ ನಡೆಸುವುದಕ್ಕಾಗಲಿ, ಉತ್ತರ ನೀಡುವುದಕ್ಕಾಗಲಿ ಮನಸಿಲ್ಲ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂಬುದಕ್ಕೆ ಸಭಾಧ್ಯಕ್ಷರ ಸಾಭಾತ್ಯಾಗವೇ ಸಾಕ್ಷಿಯಾಗಿದೆ.
ಮನವೊಲಿಸಿದ ಸಿಎಂ ಸಭಾತ್ಯಾಗ ಮಾಡಿದ ಯು.ಟಿ. ಖಾದರ್​ ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾದರು. ಉತ್ತರ ನೀಡದ ಮೂರರಿಂದ ನಾಲ್ಕು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್​ ಜಾರಿ ಮಾಡಲು ಸೂಚನೆ ನೀಡಿದ ಸಿದ್ದರಾಮಯ್ಯ. ಅಲ್ಲದೆ, ಯು.ಟಿ. ಖಾದರ್​ ಸಿಟ್ಟಿಗೆ ಮೂವರು ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು