ಇತ್ತೀಚಿನ ಸುದ್ದಿ
ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕರಸೇವೆ
29/12/2021, 11:21
ಪುತ್ತೂರು(reporterkarnataka.com): ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಳಶೋತ್ಸವದಲ್ಲಿ ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಂದ ಕರಸೇವೆ ನೆರವೇರಿತು.

ಇಲ್ಲಿನ ಎನ್ಎಸ್ಎಸ್ ಘಟಕವು ಸಮಾಜದಲ್ಲಿ ಸದಾ ಸಾಮಾಜಿಕ ಕಾರ್ಯಗಳಿಂದ ತೊಡಗಿಸಿಕೊಂಡಿತ್ತು.ಆದರೆ ಧಾರ್ಮಿಕ ಕ್ಷೇತ್ರದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಮೂರು ದಿನಗಳ ವರೆಗೆ ಶ್ರೀ ಮಹಿಷಮರ್ದಿನಿ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಪಾಲು ಪಡೆದ ಎನ್ಎಸ್ಎಸ್ ವಿದ್ಯಾರ್ಥಿಗಳು ಬಡಿಸುವುದು, ತರಕಾರಿ ಕಟ್ ಮಾಡುವುದು, ಹೂವು ಕಟ್ಟುವುದು ಹೀಗೆ ಹಲವಾರು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರೀದೇವರಿಗೆ ಭಕ್ತಿಯಿಂದ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರೀನಾಥ್, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಅಶೋಕ್ ರೈ, ಸ್ವಯಂಸೇವಕ ಸಮಿತಿಯ ಸಂಚಾಲಕ ವಿಕ್ರಂ ಮತ್ತು ಮತ್ತಿತರರು ಉಪಸ್ಥಿತರಿದ್ದರು.














