1:31 PM Wednesday29 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಮಂಗಳೂರು ಪಿ.ಎ. ಕಾಲೇಜಿನ ಬ್ಲಡ್ ಡೊನೇಶನ್ ಕ್ಯಾಂಪ್

10/05/2024, 13:29

ಮಂಗಳೂರು(reporterkarnataka.com): ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್
ಮಂಗಳೂರಿನ ಸರಕಾರಿ ಲೇಡಿಗೋಶನ್ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಬ್ಲಡ್ ಡೋನರ್ ದಿನದ ಅಂಗವಾಗಿ ಬ್ಲಡ್ ಡೊನೇಶನ್ ಕ್ಯಾಂಪ್ ಮೇ 7ರಂದು ಕಾಲೇಜಿನ ಈ-ಲಾರ್ನಿಂಗ್ ಸೆಂಟರಿನಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಳೆ ಶಸ್ತ್ರ ಚಿಕಿತ್ಸಕರು ಹಾಗೂ ದ.ಕ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಪಸಮಿತಿಯ ಅಧ್ಯಕ್ಷರಾದ ಡಾ. ಬಿ. ಸಚ್ಚಿದಾನಂದ ಮಾತನಾಡಿ “ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಆದರೂ ಅದು ಇನ್ನೊಂದು ಜೀವ ಉಳಿಸುವುದಲ್ಲದೆ ರಕ್ತದಾನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುವುದು” ಎಂದರು.


ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಅತಿಥಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆಯ ನಿರೂಪಕರಾದ ಪ್ರವೀಣ್ ಕುಮಾರ್, ಇಕೋಲಾಬ್ ಕೆ.ಎಸ್.ಎ. ಇದರ ಮಾಜಿ ಸೇಲ್ಸ್ ಎಂಡ್ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ಬಾಸ್ ಉಚ್ಚಿಲ, ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ.ರಮೀಝ್ ಎಂ. ಕೆ., ಪಿ.ಎ. ಫಾರ್ಮಸಿಯ ಪ್ರಾಂಶುಪಾಲರಾದ ಸಲೀಮುಲ್ಲಾ ಖಾನ್, ಪಿ.ಎ. ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿಯ ಉಪಪ್ರಾಂಶುಪಾಲರಾದ ಡಾ.ಆಯಿಶಾ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಯೂತ್ ರೆಡ್ ಕ್ರಾಸಿನ ನಿರ್ವಾಹಕ ಅಹ್ಮದ್ ಬಶೀರ್, ಎನ್.ಎಸ್.ಎಸ್. ನಿರ್ವಾಹಕರಾದ ಚೈತ್ರಾ ಎನ್.ವಿ. ಮತ್ತು ಇತಾಶ್ರೀ, ಹಾಗೂ ಐ.ಕ್ಯೂ.ಎ.ಸಿ ಯ ನಿರೂಪಕರಾದ ವಾಣಿಶ್ರೀ ವೇದಿಕೆಯಲ್ಲಿ ಆಸೀನರಾಗಿದ್ದರು.
ವಿದ್ಯಾರ್ಥಿಗಳಾದ ಶಫ್ನಾ ಶೆರೀನ್ ಸ್ವಾಗತಿಸಿದರೆ ಇಬ್ರಾಹಿಂ ಅರ್ಫಾನ್ ವಂದಿಸಿದರು. ಸಲ್ಮಾ ಐಪ್ನಾ ಕಾರ್ಯಕ್ರಮವನ್ನು ನಿರೂಪಿಸಿದರು.
167 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು