5:23 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಮಗು ಅದಲು-ಬದಲು ಪ್ರಕರಣ ಸುಖಾಂತ್ಯ: ದೂರುದಾರರೇ ಮಗುವಿನ ತಂದೆ ಎಂದ ಡಿಎನ್ ಎ ಪರೀಕ್ಷಾ ವರದಿ

18/03/2022, 16:19

ಮಂಗಳೂರು(reporterkarnataka.com): ನಗರದ ಲೇಡಿಗೋಶನ್ ಸರಕಾರಿ ಆಸ್ಪತ್ರೆಯಲ್ಲಿ 

ನಡೆದಿದೆ ಎನ್ನಲಾದ ಮಗು ಅದಲು -ಬದಲು ಪ್ರಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಹೈದರಾಬಾದ್‌ನ ‍ಪ್ರಯೋಗಾಲಯದಲ್ಲಿ ನಡೆಸಲಾಗಿದ್ದ ಮಗು ಮತ್ತು ಮಗುವಿನ ತಂದೆಯ ಡಿಎನ್‌ಎ ಪರೀಕ್ಷೆಯ ವರದಿಯಲ್ಲಿ ಮಗು ದೂರುದಾರರದ್ದೇ ಎನ್ನುವುದು ಖಚಿತವಾಗಿದೆ.

ತನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ಬದಲಿಸಿ, ಆಸ್ಪತ್ರೆಯ ಸಿಬ್ಬಂದಿ ಅನಾರೋಗ್ಯ ಪೀಡಿತ ಗಂಡು ಮಗುವನ್ನು ನೀಡಿದ್ದಾರೆ ಎಂದು ಆರೋಪಿಸಿ ಮಗುವಿನ ತಂದೆ ಮುಸ್ತಾಫಾ ಅವರು ಮಂಗಳೂರು ಉತ್ತರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ನ್ಯಾಯಾಲಯವು ಮಗು ಮತ್ತು ಹೆತ್ತವರ ಡಿಎನ್ ಎ ಪರೀಕ್ಷೆಗೆ ಒಪ್ಪಿಗೆ ನೀಡಿತ್ತು. ಡಿಎನ್ ಎ ಪರೀಕ್ಷೆ ನಡೆದ ಬಳಿಕ ಸ್ಯಾಂಪಲನ್ನು ಹೈದರಾಬಾದ್ ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ತನಿಖಾಧಿಕಾರಿಯ ಕೈ ಸೇರಿದ್ದು, ಮಗು ದೂರು ನೀಡಿದ ಮುಸ್ತಾಫ ಅವರದ್ದೇ ಎಂದು ಸಾಬೀತಾಗಿದೆ.ಈ ವರದಿಯ ಆಧಾರದಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮುಸ್ತಫಾ ಅವರ ಪತ್ನಿ 2021ರ ಸೆಪ್ಟೆಂಬರ್‌ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಯ ಅಚಾತುರ್ಯದಿಂದ

ಜನ್ಮ ದಾಖಲೆ ಪತ್ರದ ಲಿಂಗ ಕಾಲಂನಲ್ಲಿ ’ಗಂಡು ಮಗು’ ಬದಲು ’ಹೆಣ್ಣು ಮಗು’ ಎಂಬುದಾಗಿ ದಾಖಲಿಸಲಾಗಿತ್ತು. ಮಗುವಿನ ತೂಕ ಕೇವಲ 1.4 ಕೆ.ಜಿ. ಯಷ್ಟಿತ್ತು. ಅಲ್ಲದೆ, ಮಗುವಿನಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ಕೂಡಲೇ ಅದನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ದಾಖಲೆಯಲ್ಲಿ ಹೆಣ್ಣು ಮಗು ಇದ್ದು, ಕೈಗೆ ಗಂಡು ಮಗುವನ್ನು ನೀಡಿದ್ದಾರೆ ಎಂದು ಆರೋಪಿಸಿ ಮುಸ್ತಫಾ ಅವರು ಆಸ್ಪತ್ರೆಯ ವಿರುದ್ದ ಉತ್ತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮುಸ್ತಫಾ ಅವರ ದೂರಿನ ಆಧಾರದಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು