5:30 PM Sunday19 - April 2026
ಬ್ರೇಕಿಂಗ್ ನ್ಯೂಸ್
ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ…

ಇತ್ತೀಚಿನ ಸುದ್ದಿ

ಕುಕ್ಕೆ ಮಹಾವಿದ್ಯಾಲಯ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿ

25/03/2022, 22:55

ಸುಬ್ರಹ್ಮಣ್ಯ(reporterkarnataka.com): ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ವಿಕಾಸ ಜನ ಸೇವಾ ಟ್ರಸ್ಟ್ ಕೊಡಗಿನ ಕುಶಾಲನಗರ ತಾಲೂಕು ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿಯನ್ನು ಹಮ್ಮಿಕೊಳ್ಳಲಾಯಿತು. 

ಈ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಎಚ್. ಕೆ. ಆಶ್ರಮದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರಥಮ ದ್ವಿತೀಯ ಹಾಗೂ ತೃತೀಯ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಈ ಅಧ್ಯಯನ ಭೇಟಿಯ ಪ್ರಯೋಜನವನ್ನು ಪಡೆದುಕೊಂಡು ಆಶ್ರಮವಾಸಿಗಳಿಗೆ ಹಣಕಾಸು ಹಣ್ಣು-ಹಂಪಲು ತರಕಾರಿ ಇತ್ಯಾದಿಗಳನ್ನು ನೀಡಿ ಸಹಕರಿಸಿದರು. 


ವಿದ್ಯಾರ್ಥಿಗಳು ಪ್ರಜ್ಞಾ  ಅವರ ನಾಯಕತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಶ್ರಮವಾಸಿಗಳಿಗೆ ಏರ್ಪಡಿಸಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಮನೋಹರ ಹಾಗೂ ಉಪನ್ಯಾಸಕಿ ಆರತಿ.ಕೆ ಮಾರ್ಗದರ್ಶನವನ್ನು ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು