11:53 AM Saturday19 - September 2026
ಬ್ರೇಕಿಂಗ್ ನ್ಯೂಸ್
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:…

ಇತ್ತೀಚಿನ ಸುದ್ದಿ

ಕೂಡ್ಲಗಿ: ಕಾಡು ಪ್ರಾಣಿಗಳ ಹಾವಳಿಯಿಂದ ಮೆಕ್ಕೆಜೋಳ, ಶೇಂಗಾ ಬೆಳೆ ಮೊಳಕೆಗೆ ಮುನ್ನವೇ ನಾಶ; ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತರು

24/07/2022, 15:02

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳ ಹಿಂಡು ಕೃಷಿಕರ ಜಮೀನಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಗು ಶೇಂಗಾ ಬೆಳೆಗಳನ್ನು ನಾಶಮಾಡುತ್ತಿವೆ.


ಮೆಕ್ಕೆಜೋಳ ಬೆಳೆಯಲು 1 ಎಕರೆ ಜಮೀನಗೆ 2 ಪಾಕೇಟ್ ಬೀಜ,  2 ಚೀಲ ರಾಸಾಯನಿಕ ಗೊಬ್ಬರ, ಬಿತ್ತನೆ ಸೇರಿ ಸುಮಾರು 10 ಸಾವಿರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಆದೇರೀತಿ ಶೇಂಗಾ ಬೆಳೆಯಲು 1ಎಕರೆ ಜಮೀನಗೆ 50kg ಬೀಜ, 2 ಚೀಲ ರಾಸಾಯನಿಕ ಗೊಬ್ಬರ ಬಿತ್ತನೆ ಸೇರಿ ಸೂಮಾರು 12 ಸಾವಿರ ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡುತ್ತಾರೆ. ಬಿತ್ತನೆ ಮಾಡಿದ ಹೊಲದಲ್ಲಿ ಮೆಕ್ಕೆಜೋಳ ಹಾಗು ಶೇಂಗಾ ಬೀಜಗಳನ್ನು ಕಾಡುಹಂದಿಗಳು (ಮಿಕ) ನಾಶ (ಗೂರಿ) ಮಾಡಿ ರೈತರನ್ನು ಹೈರಾಣಗಿಸಿವೆ. ಬಹುತೇಕ ಕೃಷಿಕರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೀಜಗಳನ್ನು ಕಾಡು ಹಂದಿಗಳು ನಾಶ ಮಾಡಿವೆ. ಬಿತ್ತನೆ ಮಾಡಿದ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಕಾಡು ಪ್ರಾಣಿಗಳಾದ ಕರಡಿ ಚಿರತೆ ದಾಳಿಗಳ ಆತಂಕ ನಡುವೆ ಕಾಡುಂದಿಗಳಿಂದ ಬಿತ್ತನೆ ಮಾಡಿದ ದಿನದಿಂದ ಮೊಳಕೆ ಹೊಡೆಯುವತನಕ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಜಾಗರಣೆ ಮಾಡಿ, ಧ್ವನಿವರ್ಧಕ ಎಣ್ಣೆ ಡಬ್ಬಿಗಳ ಶಬ್ದಗಳ ಮೂಲಕ ಬೆದರಿಸಿ ಬೆಳೆಗಳನ್ನು ರಕ್ಷಣೆ  ಮಾಡಬೇಕಾಗಿದೆ.  ಮೊದಲೆಲ್ಲಾ ಅರಣ್ಯ ದಂಚಿನ ಕೃಷಿ ಜಮೀನುಗಳಲ್ಲಿ ಮಾತ್ರ ಕಾಡು ಪ್ರಾಣಿಗಳ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಆದರೆ ಈಗ ಎಲ್ಲಾ ಪ್ರದೇಶದ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಕಂಡುಬರುತ್ತದೆ.  ಬಿತ್ತನೆ  ಬೀಜದಿಂದ ಆಧಿಯಾಗಿ ಬೆಳೆಗಳ ಸಂರಕ್ಷಸಲು ಪರಿ ಪರಿಯಾದ ಸಮಸ್ಯೆಗಳು ಕೃಷಿಕರಿಗೆ ತಂದೊಡ್ಧಿದೆ. ಇದು ಬಹಳ ತೆಲೆನೋವಾಗಿ ಕಾಡುತ್ತಿದೆ. ನಾಶವಾದ ಬೆಳೆಗಳಿಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದ ಇನ್ನಿತರ ಸೌಲಭ್ಯ ಗಳು ಮಾಹಿತಿಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಕಾರಣ ಮಾಹಿತಿ ಕೊರತೆಯಿಂದ  ಸಂಕಷ್ಟಗಳು ತಪ್ಪಿದ್ದಲ್ಲ. ಅದ್ದರಿಂದ ಸಂಭಂದ ಪಟ್ಟ ಇಲಾಖಾಧಿಕರಿಗಳು, ರೈತರಿಗೆ ಮಾಹಿತಿ ತಿಳಿಸುವುದರ ಜೊತೆಗೆ  ರೈತರ ನೆರವುಗೆ ದಾವಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು