1:05 PM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಕೃಷ್ಣರಾಜಪೇಟೆ: ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ- ದೊಡ್ಡಯ್ಯ ಜೋಡಿ ರಥೋತ್ಸವದ ವೈಭವ

19/03/2022, 08:49

ಮಂಡ್ಯ(reporterkarnataka.com): ಕೃಷ್ಣರಾಜಪೇಟೆ ತಾಲ್ಲೂಕಿನ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ- ದೊಡ್ಡಯ್ಯ ಜೋಡಿರಥಗಳ ವೈಭವದ ಬ್ರಹ್ಮರಥೋತ್ಸವ ನಡೆಯಿತು. ಭಕ್ತಾದಿಗಳು ಜಯಘೋಷ ಮುಗಿಲು ಮುಟ್ಟಿ ಸಂಭ್ರಮಿಸಿತು.

ನಗರೂರು-ಮಾರ್ಗೋನಹಳ್ಳಿ ಅವಳಿ ಗ್ರಾಮಗಳ ಸಮೀಪದಲ್ಲಿರುವ ಹಾಲುಮತ ಕುರುಬ ಸಮಾಜದ ಆರಾಧ್ಯದೈವ  ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ-ದೊಡ್ಡಯ್ಯ ಜೋಡಿ ರಥದ ಸಂಭ್ರಮ ನಡೆಯಿತು.ಸಚಿವ ನಾರಾಯಣಗೌಡ ರಥೋತ್ಸವದಲ್ಲಿ ಭಾಗವಹಿಸಿದರು. ಕುರಿಗಳಿಂದ ಮರಡಿಲಿಂಗೇಶ್ವರ ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಯ ಸಮರ್ಪಣೆ ಮಾಡಲಾಯಿತು.

ಉಘೇ ದೊಡ್ಡಯ್ಯ..ಉಘೇ ಚಿಕ್ಕಯ್ಯ…ಎಂದು ಜಯಘೋಷ ಮುಗಿಲು ಮುಟ್ಟಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚಿನ ಭಕ್ತರು ಜೋಡಿ ರಥೋತ್ಸವದಲ್ಲಿ ಪಾಲ್ಗೊಂಡರು.

ಹಾಲುಮತ ಕುರುಬ ಸಮಾಜದ ಮುಖಂಡರು ಹಾಗೂ ಮರಡಿಲಿಂಗೇಶ್ವರ ಸ್ವಾಮಿಯ ಒಕ್ಕಲಿಗೆ ಸೇರಿದ ಹೆಗಡಿ ಕೆ.ಎನ್.ಕೃಷ್ಣ, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಕೆ.ಶ್ರೀನಿವಾಸ್, ಎಪಿಎಂಸಿ ಮಾಜಿನಿರ್ದೇಶಕ ಕೆ.ವೇಣುಗೋಪಾಲ, ಕೆ.ಪುರುಷೋತ್ತಮ, ಮಾರ್ಗೋನಹಳ್ಳಿ ತಮ್ಮಯ್ಯ, ನಂಜೇಗೌಡ, ಆದಿಹಳ್ಳಿ ಮೀನಾಕ್ಷಿ, ಕಾರಿಗನಹಳ್ಳಿ ಕುಮಾರ್ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು