1:56 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಆಲಿಸ್ ಫೆರ್ನಾಂಡಿಸ್ ಆಯ್ಕೆ: ಫೆಬ್ರವರಿ 15ರಂದು ಪ್ರದಾನ

30/01/2025, 19:29

ಮಂಗಳೂರು(reporterkarnataka.com): 2025ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕಿ ಆಲಿಸ್ ಫೆರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಅವರು ಆಯ್ಕೆಗೊಂಡಿದ್ದಾರೆ.
ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.
ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಆಲಿಸ್ ಫೆರ್ನಾಂಡಿಸ್ ಅವರು
1965ರಲ್ಲಿ ತನ್ನ 16ನೇ ವಯಸ್ಸಿನಲ್ಲೇ ಲೇಖನಿ ಹಿಡಿದರು. 1965ರಿಂದ 1971 ರವರೆಗೆ ಮಿತ್ರ್, ಝೆಲೊ, ರಾಕ್ಣೊ, ಕಾಣಿಕ್, ವಾವ್ರಾಡ್ಯಾಂಚೊ ತಾಳೊ ಮುಂತಾದ ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ನಿರಂತರ ಬರೆದರು. ಸಾಹಿತ್ಯ ಸೇವೆಗೆ 30 ವರ್ಷದ ವಿರಾಮ ನೀಡಿ 2002ರ ನಂತರ ಪುನಃ ಲೇಖನಿಯನ್ನು ಕೈಗೆತ್ತಿಕೊಂಡ ಇವರು ಸತತ 22 ವರ್ಷಗಳಿಂದ ಝೆಲೊ, ದಿವೊ, ಕುಟ್ಮಾಚೊ ಸೆವಕ್, ರಾಕ್ಣೊ, ದರ‍್ವೆಂ, ನಮಾನ್ ಬಾಳಕ್ ಜೆಜು, ಮಿಲರ‍್ಚೆಂ ಮಿಲನ್ ಈ ಕೊಂಕಣಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಇವರ ಸರಿಸುಮಾರು 28 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 34 ಕವಿತೆಗಳು, 30 ಕಿರು ಕಥೆಗಳು, 200 ರಷ್ಟು ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಟವಾಗಿವೆ. “ಕೊಂಕ್ಣಿ ಲೇಖಕಾಂಚೊ ಎಕ್ವಟ್” ಎಂಬ ಕೊಂಕಣಿ ಲೇಖಕರ ಸಂಘಟನೆಯಲ್ಲಿ ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
“ಕೊಂಕ್ಣಿ ಲೇಖಕಾಂಚೊ ಎಕ್ವಟ್”, ರಾಕ್ಣೊ ಮತ್ತು ದರ‍್ವೆಂ ಪತ್ರಿಕೆಗಳಿಂದ ಸನ್ಮಾನ ಹಾಗೂ ರಾಕ್ಣೊ ಸಾಹಿತ್ಯ ಸ್ಪರ್ಧೆಯಲ್ಲಿ ಕಿರುಕಥೆಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 15, 2025ನೇ ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು.
*ಕಿರು ಪರಿಚಯ:*
ವಿದ್ಯಾಭ್ಯಾಸ : ಬಿ.ಎಸ್ಸಿ
ಕಾವ್ಯನಾಮ : ಶಾಲಿನಿ ವಲೆನ್ಸಿಯಾ ಮತ್ತು ಆ.ಶಾ. ಮಿಲಾರ್
ಸಾಹಿತ್ಯ ಸೇವೆ:
• 1965ರಲ್ಲಿ ತನ್ನ 16ನೇ ವಯಸ್ಸಿನಲ್ಲಿ “ಮಿತ್ರ್” ಮಾಸಿಕದ ಜುಲೈ ಅಂಕೆಗೆ ಪ್ರಶ್ನೆ ಉತ್ತರ ವಿಭಾಗಕ್ಕೆ ಪ್ರಶ್ನೆ ಕಳುಹಿಸುವುದರೊಂದಿಗೆ ಲೇಖನಿ ಹಿಡಿದರು.
• 1965ರಲ್ಲಿ “ಮಿತ್ರ್” ಮಾಸಿಕದ ಸಪ್ಟೆಂಬರ್ ಅಂಕೆಯಲ್ಲಿ ಪ್ರಥಮ ಕವಿತೆ ಪ್ರಕಟ
• 1966ರಲ್ಲಿ “ಝೆಲೊ” ಮಾಸಿಕದ ಮೇ ಅಂಕೆಯಲ್ಲಿ ಪ್ರಥಮ ಕಿರು ಕಥೆ ಪ್ರಕಟ
• 1965 ರಿಂದ 1971 ರವರೆಗೆ ಮಿತ್ರ್, ಝೆಲೊ, ರಾಕ್ಣೊ, ಕಾಣಿಕ್, ವಾವ್ರಾಡ್ಯಾಂಚೊ ತಾಳೊ ಮುಂತಾದ ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ನಿರಂತರ ಬರವಣಿಗೆ
• 1970ರಲ್ಲಿ “ತೊ ತಾಕಾ ಆಶೆಲೊ” ಮತ್ತು 1971ರಲ್ಲಿ “ತುಂ ಸುಖಿ ಜಾ” ಎಂಬ ಎರಡು ಕಾದಂಬರಿಗಳನ್ನು ಇಂಗ್ಲೀಷ್‌ನಿಂದ ಕೊಂಕಣಿಗೆ ಭಾಷಾಂತರಿಸಿ ‘ಸಾಳಕ್’ ಪ್ರಕಾಶನದ ಮೂಲಕ ಪ್ರಕಟಿಸಲಾಗಿದೆ.
• ಸಾಳಕ್ ಪ್ರಕಾಶನವು ಸಂಪಾದಿಸಿ ಪ್ರಕಟಿಸಿದ “ಫುಲಾಂ ಆನಿ ಪಾಕ್ಳೊö್ಯ”, “ಗುಲೊಬ್ ಆನಿ ಸಾಳ್ಕಾಂ”, “ಲ್ಹಾರಾಂ ಆನಿ ತಾರಾಂ” ಎಂಬ ಕಥಾ ಸಂಕಲನಗಳಲ್ಲಿ ಇವರ ತಲಾ ಒಂದೊAದು ಕಥೆಗಳು ಪ್ರಕಟವಾಗಿವೆ.
• ಸಾಹಿತ್ಯ ಸೇವೆಗೆ 30 ವರ್ಷದ ವಿರಾಮ ನೀಡಿ 2002ರ ನಂತರ ಪುನಃ ಲೇಖನಿಯನ್ನು ಕೈಗೆತ್ತಿಕೊಂಡ ಇವರು ಸತತ 22 ವರ್ಷಗಳಿಂದ ಝೆಲೊ, ದಿವೊ, ಕುಟ್ಮಾಚೊ ಸೆವಕ್, ರಾಕ್ಣೊ, ದರ‍್ವೆಂ, ನಮಾನ್ ಬಾಳಕ್ ಜೆಜು, ಮಿಲರ‍್ಚೆಂ ಮಿಲನ್ ಈ ಕೊಂಕಣಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ.
•ಇವರ ಸರಿಸುಮಾರು 28 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 34 ಕವಿತೆಗಳು, 30 ಕಿರು ಕಥೆಗಳು, 200 ರಷ್ಟು ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಟವಾಗಿವೆ.
•ರಾಕ್ಣೊ ಸಾಪ್ತಾಹಿಕದಲ್ಲಿ 2014-15 ರಲ್ಲಿ ನಿರಂತರವಾಗಿ ಸ್ತಿçÃಯರ ವಿಭಾಗಕ್ಕೆ ಬರಹಗಳನ್ನು ನೀಡಿದ್ದಾರೆ.
•ದರ‍್ವೆಂ ಪತ್ರಿಕೆಗೆ 2006 ರಿಂದ ಈ ವರೆಗೂ ಆ.ಶಾ. ಮಿಲಾರ್ ಎಂಬ ಕಾವ್ಯನಾಮದಿಂದ “ಇಂಟರ್‌ನೆಟ್ ಕಾಣಿಯೊ” ಎಂಬ ತಲೆಬರಹದೊಂದಿಗೆ ಇತರ ಭಾಷೆಗಳ ಕಥೆಗಳನ್ನು ಭಾಷಾಂತರಿಸಿ ಬರೆಯುತ್ತಿದ್ದಾರೆ.
•ಮಂಗಳೂರು ಆಕಾಶವಾಣಿಯಿಂದ ಇವರ ಮೂರು ಲೇಖನಗಳು ಸ್ವವಾಚನದೊಂದಿಗೆ ಪ್ರಸಾರಗೊಂಡಿವೆ.
•8 ವರ್ಷಗಳ ಅವಧಿಗೆ ಮಿಲಾಗ್ರಿಸ್ ಚರ್ಚ್ನ ಬುಲೆಟಿನ್ ಆಗಿರುವ “ಮಿಲರ‍್ಚೆಂ ಮಿಲನ್” ಸಂಪಾದಕೀಯ ಮಂಡಳಿಯ ಸದಸ್ಯರಾಗಿ ಸೇವೆ ನೀಡಿದ್ದಾರೆ.
•“ಕೊಂಕ್ಣಿ ಲೇಖಕಾಂಚೊ ಎಕ್ವಟ್” ಎಂಬ ಕೊಂಕಣಿ ಲೇಖಕರ ಸಂಘಟಣೆಯಲ್ಲಿ ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಪುರಸ್ಕಾರಗಳು: ಶಾಲಿನಿ ವಲೆನ್ಸಿಯಾರವರು ಪಡೆದ ಪುರಸ್ಕಾರಗಳು ಹೀಗಿವೆ:
•“ಕೊಂಕ್ಣಿ ಲೇಖಕಾಂಚೊ ಎಕ್ವಟ್” ಇದರ ದಶಮಾನೋತ್ಸವ ಸಂದರ್ಭದಲ್ಲಿ ಸನ್ಮಾನ
•ರಾಕ್ಣೊ ಪತ್ರಿಕೆಯಿಂದ ಇತರ ಲೇಖಕರ ಜೊತೆ ಸನ್ಮಾನ
•ದರ‍್ವೆಂ ಪತ್ರಿಕೆಯು ತನ್ನ ಐದು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸನ್ಮಾನ
•ರಾಕ್ಣೊ ಸಾಹಿತ್ಯ ಸ್ಪರ್ಧೆಯಲ್ಲಿ ಕಿರುಕಥೆಗೆ ಪ್ರೋತ್ಸಾಹಕ ಬಹುಮಾನ

ಇತ್ತೀಚಿನ ಸುದ್ದಿ

ಜಾಹೀರಾತು