4:29 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕೊನೆಗೂ ನನಸಾಯಿತು ಅಪ್ಪಣ್ಣನ ಮನೆ ಕನಸು: ಸ್ಥಳೀಯ ದಾನಿಗಳ ಸಹಕಾರದಿಂದ ಗೃಹ ನಿರ್ಮಾಣ

20/06/2022, 22:07

ಮಂಗಳೂರು(reporterkarnataka.com): ಸುಮಾರು 12 ವರ್ಷಗಳ ಹಿಂದೆ ಮಾಡಿನಿಂದ ಬಿದ್ದು ಆದ ಏಟಿನಿಂದ ಉಳಿ ಹಿಡಿಯಲಾರದೆ ಮರದ ಕೆತ್ತನೆಯ ಕೆಲಸ ಕೈ ಬಿಟ್ಟು ಜೀವನ ನಿರ್ವಹಣೆಗಾಗಿ ಮೂಡೆ ಹೆಣೆದು ಮಾರಾಟ ಮಾಡಿ ಬರುವ ಅಲ್ಪ ಆದಾಯದಿಂದ ಬದುಕು ಕಟ್ಟಿಕೊಂಡಿದ್ದ ಪಂಜಿಮೊಗರು ವಿದ್ಯಾನಗರದ ಮಂಜುನಾಥ ಆಚಾರ್ಯ (ಅಪ್ಪಣ್ಣ) -ರತ್ನಾವತಿ ದಂಪತಿಯ ಮನೆ ನಿರ್ಮಾಣದ ಕನಸು ಈಡೇರಿದೆ.

ಮಂಜುನಾಥ ಆಚಾರ್ಯ -ರತ್ನಾವತಿ ದಂಪತಿ ಮೂಡೆ ಮಾಡಿ ತಿಂಗಳಿಗೆ 6-7 ಸಾವಿರ ರೂ. ಸಂಪಾದನೆ ಮಾಡಿ ಅದರ ಅರ್ಧ ಭಾಗ ಬಾಡಿಗೆ ಮನೆಗೆ ಕೊಟ್ಟು ಉಳಿದ ಅಲ್ಪ ಹಣದಲ್ಲೇ ಜೀವನ ಸಾಗಿಸುತ್ತಿದ್ದರು. ಇವೆಲ್ಲದರ ಮಧ್ಯೆ ಏಕೈಕ ಪುತ್ರಿ ದೀಕ್ಷಾ ವಿಶೇಷ ಚೇತನ ಎಂಬ ಕೊರಗು ಬೇರೆ! ಈ ನಡುವೆ ಎರಡು ವರ್ಷಗಳ ಹಿಂದೆ ಸ್ವಂತ ಮನೆ ನಿರ್ಮಿಸಬೇಕೆಂದು ಪಂಚಾಂಗ ಹಾಕಿ ಗೋಡೆ ತನಕ ಆದ ಕೆಲಸ ಮತ್ತೆ ಮುಂದುವರಿಯಲೇ ಇಲ್ಲ. ಅರ್ಧದಲ್ಲೇ ಭಾಕಿಯಾದ ಮನೆ ಯಾವಾಗ ಪೂರ್ತಿಯಾಗುವುದೋ ಎಂಬ ಹತಾಶ ಭಾವದಲ್ಲಿದ್ದಾಗಲೇ ರಮೇಶ್ ಶೆಟ್ಟಿ ವಿವೇಕನಗರ ನೇತೃತ್ವದಲ್ಲಿ ಸ್ಥಳೀಯ ಯುವಕರು ಅವರ ಮನೆ ಪೂರ್ಣಗೊಳಿಸುವ ಕನಸಿಗೆ ಜೀವ ತುಂಬಿದರು.

ಅರ್ಧದಲ್ಲೇ ನಿಂತ ಮನೆ ಪೂರ್ಣ ಮಾಡುವ ಬಗ್ಗೆ ವಿದ್ಯಾನಗರದ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್, ಶ್ರೀಕೃಷ್ಣ ಭಜನಾ ಮಂದಿರ ಹಾಗೂ ಹಿಂದು ಯುವಸೇನೆಯ ತಂಡ ರಮೇಶ್ ಶೆಟ್ಟಿ ಮತ್ತು ಪತ್ರಕರ್ತ ಮೋಹನದಾಸ್ ಮರಕಡ ನೇತೃತ್ವದಲ್ಲಿ ಯೋಜನೆ ರೂಪಿಸಿದರು. ಅಪ್ಪಣ್ಣನ ಮನೆಯ ನೈಜ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ದಾನಿಗಳ ನೆರವು ಕೋರಲಾಯಿತು. ಬಂಟ್ವಾಳದ ಉದ್ಯಮಿಯೊಬ್ಬರು 100 ಚೀಲ ಸಿಮೆಂಟ್, ಗುರುಸೇವಾ ಪರಿಷತ್ -ಆನೆಗುಂದಿ ಸಂಸ್ಥಾನ ಮನೆಯ ಸ್ಲಾಬ್‌ಗೆ ಬೇಕಾದ ಕಬ್ಬಿಣಕ್ಕೆ ಆರ್ಥಿಕ ನೆರವು, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಲ್ಪಸಂಖ್ಯಾತ ಮೋರ್ಚಾ ತಂಡ ಆರ್ಥಿಕ ನೆರವು ನೀಡಿತು. ಗುತ್ತಿಗೆದಾರ ಸಂದೀಪ್ ಪೂಜಾರಿ ನೇತೃತ್ವದಲ್ಲಿ ಕೆಲಸ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲಾ ಟಿಟಿ ಚಾಲಕ ಮತ್ತು ಮಾಲೀಕ ಸಂಘದಿಂದ ಆರ್ಥಿಕ ನೆರವು ಬಂತು. ಸ್ಥಳೀಯ ದಾನಿಗಳು, ಮರಳು, ಜಲ್ಲಿ ಟೈಲ್ಸ್ ಇತ್ಯಾದಿ ಅಗತ್ಯ ವಸ್ತು ಪೂರೈಸಿದರು. ನಾಲ್ಕೇ ತಿಂಗಳಲ್ಲಿ ಸುಂದರ ಮನೆ ಎದ್ದು ನಿಂತಿತು.


ಜೂ. 22ರಂದು ಗೃಹಪ್ರವೇಶ: ಅಪ್ಪಣ್ಣನ ಮನೆಯ ಗೃಹ ಪ್ರವೇಶ ಜೂನ್ 22ರಂದು ನಡೆಯಲಿದೆ. ಉದ್ಯಮಿ ಗೋಪಾಲಕೃಷ್ಣ ಆಚಾರ್ಯ ಉದ್ಘಾಟಿಸಲಿದ್ದು, ಶಾಸಕ ಡಾ.ವೈ ಭರತ್ ಶೆಟ್ಟಿ, ಹಿರಿಯ ಪತ್ರಕರ್ತ ಸುರೇಂದ್ರ ಎಸ್.ವಾಗ್ಳೆ, ಕಾರ್ಪೊರೇಟರ್ ಅನಿಲ್ ಕುಮಾರ್, ಶಾರದೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಪೂಜಾರಿ, ಉದ್ಯಮಿ ಜಗದೀಶ್ ರಾಮ, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶಾನವಾಜ್, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಹರೀಶ್ ಆಚಾರ್ಯ, ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ವಾಮನ ಪೂಜಾರಿ, ಉದ್ಯಮಿ ಉಮೇಶ್ ಮಲರಾಯಸಾನ ಮೊದಲಾದವರು ಭಾಗವಹಿಸುವರು. ಆರ್ಥಿಕ ನೆರವು ನೀಡಿದ ದಾನಿಗಳನ್ನು ಗೌರವಿಸಲಾಗುವುದು.

ಇತ್ತೀಚಿನ ಸುದ್ದಿ

ಜಾಹೀರಾತು