5:58 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

Kasaragodu | ಬದಿಯಡ್ಕ: ಕನ್ನಡದ ಕಟ್ಟಾಳು ಡಾ. ಕಯ್ಯಾರ ಕಿಂಞಣ್ಣ ರೈ ಅವರ 111ನೇ ಹುಟ್ಟುಹಬ್ಬ ಆಚರಣೆ

08/06/2026, 18:25

ಬದಿಯಡ್ಕ(reporterkarnataka.com): ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ನೇತೃತ್ವದಲ್ಲಿ ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 111ನೇ ಹುಟ್ಟುಹಬ್ಬವನ್ನು ಕವಿತಾ ಕುಟೀರದಲ್ಲಿ ಆಚರಿಸಲಾಯಿತು.

ಮಾಹಿನ್ ಪುಷ್ಪಾರ್ಚನೆ ನಡೆಸಿದರು. ಬದಿಯಡ್ಕ ಪಂಚಾಯಿತಿ ಅಧ್ಯಕ್ಷ ಶಂಕರ ಡಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚನಿಯಪ್ಪ ನಾಯ್ಕ, ಸೆಕ್ರೆಟರಿ ಅಖಿಲೇಶ್ ನಗುಮುಗಂ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಮಹೇಶ್ ವಳಕುಂಜ, ಅನ್ವರ್ , ನಿವೃತ್ತ ಪ್ರೊ. ಎ. ಶ್ರೀನಾಥ್, ಗಮಕ ಪರಿಷತ್ತಿನ ಶಂಕರನಾರಾಯಣ ಭಟ್, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕುಬ್ಡಾಜೆ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ಮವ್ವಾರು, ಕುಂಬ್ಡಾಜೆ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಜಯಪ್ರಕಾಶ್ ಶೆಟ್ಟಿ, ಕಿಂಞಣ್ಣರೈಯವರ ಮಕ್ಕಳಾದ ರವಿರಾಜ ರೈ, ದುರ್ಗಾಪ್ರಸಾದ್ ರೈ, ರಂಗನಾಥ ರೈ, ಪ್ರಸನ್ನ ರೈ, ದ.ಗ್ರಾ ಯೋಜನೆಯ ಜಯರಾಮ ಪಾಟಾಳಿ ಉಪಸ್ಥಿತರಿದ್ದರು.
ಇದೇ ವೇಳೆ ಕೇಂದ್ರೀಯ ವಿ.ವಿ.ಯಿಂದ ರ್ಯಾಂಕ್ ಪಡೆದ ಜ್ಯೋತಿಲಕ್ಷ್ಮಿ ಅವರನ್ನು ಶಾಸಕರು ಗೌರವಿಸಿದರು. ಗಾಯಕ ವಸಂತ ಬಾರಡ್ಕ ಕಯ್ಯಾರ ಕವಿತೆ ಹಾಡಿದರು. ಹರೀಶ್ ಗೋಸಾಡ ವಂದಿಸಿದರು.

ಕಯ್ಯಾರ ಸ್ಮಾರಕ ಭವನದ ದಾರಿಯನ್ನು ಅಗಲಗೊಳಿಸಿ ಉಧ್ಘಾಟನೆಗಾಗಿ ಸಿದ್ದಗೊಳಿಸಲು ಆಶ್ವಾಸನೆ ನೀಡಿದ್ದಾರೆ, ಅಲ್ಲದೆ ಗ್ರಾಮಾಧಿಕಾರಿ ಹಾಗೂ ಪಂಚಾಯತ್ ನಿಂದ ದೊರಕಬೇಕಾಗಿರುವ ಕಾನೂನಾತ್ಮಕ ತೊಡಕುಗಳ ಪರಿಹಾರೋಪಾಯ. ಪಂಚಾಯತ್ ಅಧ್ಯಕ್ಷರ ಜೊತೆ ಮಾತನಾಡಿ ನಿವಾರಣೆಗಳ ಬಗ್ಗೆ ಪರಿಶೀಲಿಸಿ ಸುಗಮಗೊಳಿಸುವುದಾಗಿಯೂ ತಿಳಿಸಿದರು.

–ಶಾಸಕ ಕಲ್ಲಟ್ರ ಮಾಹಿನ್

11 ವರುಷಗಳಿಂದ ಕಯ್ಯಾರ ಕುಟೀರದಲ್ಲಿ ಅಕಾಡೆಮಿಯು ಕೈಯಾರರ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದೇವೆ ಇದೀಗ ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ಕೈಯಾರ ಭವನ ತಲೆ ಎತ್ತಿ ನಿಂತಿದ್ದು ಆದಷ್ಟು ಬೇಗ ಅದು ಉದ್ಘಾಟನೆಗೊಳ್ಳುವಂತಾಗಲಿ ಈ ಉದ್ಘಾಟನೆಯನ್ನು ಕೇರಳ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಜೊತೆಯಾಗಿ ಲೋಕಾರ್ಪಣೆ ಗೊಳ್ಳಲಿ ಮತ್ತು ತದನಂತರ ನಿತ್ಯ ನಿರಂತರ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವಂತಾಗಲಿ ಎಂದು ಆಶಿಸುತಿದ್ದೇವೆ

ಅಖಿಲೇಶ್ ನಗುಮುಗಂ -ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ

ಇತ್ತೀಚಿನ ಸುದ್ದಿ

ಜಾಹೀರಾತು