2:21 PM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕಾರ್ಯಕರ್ತನ ತಲೆಗೆ ಹೊಡೆದ ಡಿಕೆಶಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಏನು ಹೇಳಿದ್ರು ಗೊತ್ತೇ?

11/07/2021, 17:16

ಮಂಗಳೂರು(reporterkarnataka news): ಕಾರ್ಯಕರ್ತನ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡತೆ ಸರಿಯಲ್ಲ. ಕಾಂಗ್ರೆಸ್ ಸಂಸ್ಕೃತಿ ಏನು ಅನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರುಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ರೌಡಿಗಳ ಪಕ್ಷ ಅಲ್ಲ ಅಂತ ಯಾರೂ ಹೇಳಲ್ಲ, ಅವರ ವ್ಯಕ್ತಿತ್ವದಲ್ಲೇ ಅದು ಕಾಣುತ್ತದೆ. ಅವರ ಇತಿಹಾಸ ತೆಗೆದು ನೋಡಿದ್ರೆ ರೌಡಿ ಮಾತ್ರವಲ್ಲ, ಈ ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಪ್ರೇರಣೆ ಅವರೇ ಎಂದರು.

ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು, ಯಾರ ಬಗ್ಗೆಯೂ ವೈಯಕ್ತಿಯವಾಗಿ ಮಾತನಾಡಲ್ಲ. ಆದ್ರೆ ಸಮಾಜ ನಮ್ಮನ್ನ ಗಮನಿಸುತ್ತಿರುತ್ತದೆ. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ. ಆಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರೋದು ನಮ್ಮ ಸಂಸ್ಕೃತಿ. ಯಾರೇ ರಾಜಕಾರಣಿ ಆದ್ರೂ ಎಲ್ಲೆ ಮೀರಿ ವರ್ತಿಸಬಾರದು ಎಂದು ಅವರು ನುಡಿದರು.

ಇನ್ನು ವಿಧಾನಸೌಧದ ಒಳಗೆ ಸಿದ್ದರಾಮಯ್ಯ ಅವರು ತೊಡೆ ತಟ್ಟಿ ಯುದ್ದಕ್ಕೆ ಕರೆದು ಒಳಹೊಕ್ಕಿದವರು. ದೇವಸ್ಥಾನದ ಆಗಿರುವ ವಿಧಾನಸೌಧಕ್ಕೆ ಅಗೌರವ ತೋರಿದವರು ಕಾರ್ಯಕರ್ತರಿಗೆ ಗೌರವ ತೋರಿಸ್ತಾರಾ..? ಎಂದು ನಳಿನ್ ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು