4:06 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಕಾರ್ಕಳ: ಟಿಪ್ಪರ್ ಲಾರಿ ಅಡ್ಡವಿಟ್ಟು ಜ್ಯುವೆಲ್ಲರಿಯಿಂದ ಬೆಳ್ಳಿ ಆಭರಣ ಕಳವು

28/02/2023, 10:34

ಕಾರ್ಕಳ( reporterkarnataka.com): ಟಿಪ್ಪರ್ ನಲ್ಲಿ ಆಗಮಿಸಿದ ಕಳ್ಳರು ಜ್ಯುವೆಲ್ಲರಿ ಶಾಪ್ ರಸ್ತೆಗೆ ಕಾಣದಂತೆ ಟಿಪ್ಪರ್ ಅಡ್ಡಯಿಟ್ಟು ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಕಳ್ಳತನ ಮಾಡಿ ಬಳಿಕ ಟಿಪ್ಪರ್ ಬಿಟ್ಟು ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಫಾರೆವರ್ ಹೋಟೇಲ್ ಬಳಿಯ ಅರಾದ್ಯ ಜ್ಯುವೆಲ್ಲರ್ ನಲ್ಲಿ ಫೆ.26 ರ ರಾತ್ರಿ ನಡೆದಿದೆ.

ಶೋಕೆಸ್ ನಲ್ಲಿದ್ದ ಸುಮಾರು 20,000/- ರೂ ಮೌಲ್ಯದ ಸುಮಾರು 260 ಗ್ರಾಂ ತೂಕದ ಬೆಳ್ಳಿಯ ಆಭರಣ ಕಳವು ಮಾಡಿಕೊಂಡು ಹೋಗಿ ಟಿಪ್ಪರ್ ನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ.ಕಳ್ಳತನಕ್ಕೆ ಮೊದಲು ಟಿಪ್ಪರ್ ಅಡ್ಡ ಇಟ್ಟು ಅನಂತರ, ಯಾವುದೇ ರೀತಿಯಲ್ಲಿ ಗುರುತು ಸಿಗದ ಹಾಗೆ, ಮುಖಕ್ಕೆ ಮುಸುಕು ಹಾಕಿಕೊಂಡು, ಅಂಗಡಿಯ ಬೀಗ ಒಡೆದು ಒಳಗೆ ನುಗ್ಗಿದ್ದಾರೆ.ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಹೋದಾಗ ಪಿಸ್ತುಲ್ ತೋರಿಸಿ, ಹೆದರಿಸಿ ಕಳಿಸಿದ್ದಾರೆ.ಕಳವುಗೈದ ಬಳಿಕ ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು