6:40 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

*ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!*

25/04/2026, 21:26

ಕೊಪ್ಪಳ(reporterkarnataka.com): ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿರುವ ಜಪಾನ್ ಮೂಲದ ಮಿಯಾ ಜಾಕಿ ಮಾವು ಕೊಪ್ಪಳದ ರೈತನೋರ್ವ ಬೆಳೆದಿದ್ದು, ಅದು ಈಗ ಬಂಪರ್ ಬೆಳೆ ಬಂದಿದೆ.
ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮಾರಾಟ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮಿಯಾಜಾಕಿ ಮಾವು ನೋಡಿ ಪ್ರೇರಣೆಗೊಂಡ ರೈತ ನಾಗಪ್ಪ ಬಗನಾಳ ಕೊಪ್ಪಳ ತಾಲೂಕಿನ ಕಲ್‌ ತಾವರಗೇರಾ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಬೆಳೆದಿದ್ದಾರೆ. ಜಪಾನ್ ಮೂಲದ ಮಾವು ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ಬೆಳೆದಿರುವ ವಿಚಾರ ತೋಟಗಾರಿಕಾ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬೇರೆ ಬೇರೆ ರೈತರು ನಾಗಪ್ಪ ಬಗನಾಳ ಅವರ ಹೊಲಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.

*ಒಂದು ಗಿಡಕ್ಕೆ ₹1300 ರೂ:*
ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ 200 ಮಿಯಾಜಾಕಿ ಮಾವು ಸಸಿಯನ್ನು ನಾಗಪ್ಪ ಬಗನಾಳ ತರಿಸಿದ್ದರು. ಪ್ರತಿ ಸಸಿಗೆ ₹1300 ನೀಡಿದ್ದಾರೆ. ನಾಟಿ ಮಾಡಿದ ಬಳಿಕ 20 ಸಸಿಗಳು ಸತ್ತವು. 180 ಮಿಯಾಜಾಕಿ ಮಾವಿನ ಗಿಡಗಳು ಭರ್ಜರಿಯಾಗಿ ಬೆಳೆದು ನಿಂತಿವೆ. ಈ ಪೈಕಿ ಈ ವರ್ಷ ಒಂದಷ್ಟು ಗಿಡಗಳು ಫಸಲು ನೀಡಿವೆ.
ಇದಕ್ಕೆ ಪ್ರತ್ಯೇಕ ಉಪಚಾರವೇನೂ ಮಾಡಿಲ್ಲ, ಆದರೆ, ಮಾವು ಬೆಳೆಯಲು ಅನುಸರಿಸುವ ಕ್ರಮ ಕೈಗೊಂಡಿದ್ದೇವೆ. ಸರಿಯಾದ ಗೊಬ್ಬರ ಬಳಕೆ ಮಾಡಿ, ನಿರ್ವಹಣೆ ಮಾಡಿದ್ದರಿಂದ ನಮ್ಮ ನಿರೀಕ್ಷೆ ಮೀರಿ ಮಿಯಾ ಜಾಕಿ ಮಾವು ಬೆಳೆದಿದೆ ಎನ್ನುತ್ತಾರೆ ಅವರು.

*ಮಾರುಕಟ್ಟೆ ಸವಾಲು:* ಮಾರುಕಟ್ಟೆಯದ್ದೆ ದೊಡ್ಡ ಸವಾಲು ಆಗಿದೆ. ಈ ವರ್ಷವಷ್ಟೇ ಬೆಳೆದಿರುವ ಮಿಯಾಜಾಕಿ ಮಾವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಇದನ್ನು ಮಾರಾಟ ಮಾಡಬೇಕಾಗಿದೆ. ರಫ್ತು ಮಾಡುವುದಕ್ಕಾಗಿ ರೈತ ದಾರಿ ಹುಡುಕುತ್ತಿದ್ದಾರೆ.

*ಏನಿದು ಮಿಯಾ ಜಾಕಿ ಮಾವು?:*
ಜಪಾನ್ ದೇಶದ ಕ್ಯುಶು ಪ್ರಾಂತದ ಮಿಯಾಜಾಕಿ ನಗರದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಮಿಯಾ ಜಾಕಿ ಮಾವು ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಜಪಾನ್ ಸುತ್ತಮುತ್ತಲ ಪ್ರದೇಶದಲ್ಲಿಯೇ ಬೆಳೆಯುವ ಈ ಮಾವು ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿದೆ. ಪ್ರತಿ ಕೆಜಿಗೆ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಇದು ಮಾರಾಟವಾಗುತ್ತದೆ.
ಕೊಪ್ಪಳ ಹಣ್ಣು ಮಾರಾಟ ಮತ್ತು ಪ್ರದರ್ಶನದ ವೇಳೆಯಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಕೊಪ್ಪಳದಲ್ಲಿ ಪ್ರದರ್ಶನ ಮಾಡಿ, ಪರಿಚಯ ಮಾಡಲಾಗಿತ್ತು. ಆದರಿಂದ ಪ್ರೇರಣೆಗೊಂಡು ರೈತನೋರ್ವ ಬೆಳೆದಿದ್ದು, ಯಶಸ್ವಿಯಾಗಿದೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆ ಜೆಡಿ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
ದುಬಾರಿ ಮಾವು ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು, ರಿಸ್ಕ್ ತೆಗೆದುಕೊಂಡು ಬೆಳೆದಿದ್ದೇವೆ. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಈಗ ಅದನ್ನು ಮಾರಾಟ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ರೈತ ನಾಗಪ್ಪ ಬಗನಾಳ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು