3:38 PM Saturday8 - August 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ…

ಇತ್ತೀಚಿನ ಸುದ್ದಿ

ಗೋಪೂಜೆಯ ಶುಭ ದಿನದಂದು ಅಶಕ್ತ  ಕುಟುಂಬಗಳಿಗೆ ರವೀಂದ್ರ ಶೆಟ್ಟಿ ಬಜಗೋಳಿ ಅವರಿಂದ ‘ಗೋ ದಾನ’

06/11/2021, 16:22

ಕಾರ್ಕಳ(reporterkarnataka.com):

ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ಇತರ ಹಿಂದೂ ಮುಖಂಡರಿಗೆ ಮಾದರಿಯಾಗುವಂತಹ ಕಾರ್ಯಕ್ರಮ 
ಬಜಗೋಳಿಯಲ್ಲಿ ನಡೆಯಿತು.

ಸಂಘದ ಹಿರಿಯ ಮುಖಂಡರಾದ ಗುಣವಂತೇಶ್ ಭಟ್, ಊರಿನ ಗಣ್ಯರ ಮತ್ತು ಸಂಘ ಪರಿವಾರದ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂತು.

ಕರ್ನಾಟಕ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ
ಅವರು ಸ್ವಗೃಹದಲ್ಲಿ ಗೋಪೂಜೆ ನೆರವೇರಿಸಿದ ನಂತರ ಅಶಕ್ತ ಹಿಂದೂ ಕುಟುಂಬಗಳ ಮನೆ ಮನೆಗೆ ತೆರಳಿ ಉತ್ತಮ ತಳಿಯ, ಹೆಚ್ಚು ಹಾಲಿನ ಇಳುವರಿಯನ್ನು ಕೊಡುವ ಹಸುಗಳನ್ನು ಹಿಂದೂ ಸಾಂಪ್ರದಾಯಿಕ ವಿಧಿವಿಧಾನದ ಪ್ರಕಾರವೇ ದಾನ ಮಾಡಿದರು.

ಅನಾರೋಗ್ಯ ಪೀಡಿತರಾಗಿದ್ದ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿ ಇದ್ದ ಮನೆಗೆ ನುಗ್ಗಿ ಮೂರು ಹಸುಗಳನ್ನು ದರೋಡೆ ಮಾಡಿದ ಕೃತ್ಯ ನಡೆದ ನಂತರ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿ ಬದುಕು ದುಸ್ತರವಾಗಿದ್ದನ್ನು ಸುಸ್ಥಿರವಾಗಿ ಮಾಡುವ ನಿಟ್ಟಿನಲ್ಲಿ ಹಾಲು ಕೊಡುವ ಹಸು-ಕರುವನ್ನು ದಾನ ಮಾಡಲಾಯಿತು.

ದುರ್ಗ ಬೊಂಬೇದಡ್ಕ ಎಂಬಲ್ಲಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಗೊತ್ತಾದ ನಂತರ ಶ್ರಮಕೋರುವ ಕೆಲಸ ಮಾಡುವ ಶಿವು ಮೇರಾ ತನ್ನ ಮಡದಿ ಮತ್ತು ತನ್ನೆರಡು ಮಕ್ಕಳ ಜೀವನದ ಬಂಡಿ ಸಾಗಿಸೋದು ಹೇಗೇ ಎಂಬ ಚಿಂತೆಯಲ್ಲಿರುವಾಗಲೇ ರವೀಂದ್ರ ಶೆಟ್ಟರು ಮಾಡಿದ ಗೋ ದಾನವು ಅವರ ಮೊಗದಲ್ಲೂ ಸಂತಸದ ಕಳೆ ಮೂಡಿಸಿತು.


ಪೆರ್ವಾಜೆ ದೇವರಗುಡ್ಡೆ ಎಂಬಲ್ಲಿ ತನ್ನ ಇಳಿವಯಸ್ಸಿನಲ್ಲೂ ಬೀಡಿ ಕಟ್ಟಿ ತನ್ನ ಸಂಸಾರದ ನೌಕೆ ಸಾಗಿಸುತ್ತಿದ್ದ ಜಯಂತಿ ಮೊಗೇರ ಎಂಬ ಮಹಿಳೆಗೆ ರವೀಂದ್ರ ಶೆಟ್ರು ನೀಡಿದ ಗೋ ದಾನವು ಆಕೆಯ ಬದುಕಿಗೆ ಭದ್ರತೆಯ ಭರವಸೆ ನೀಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು