10:03 PM Sunday7 - June 2026
ಬ್ರೇಕಿಂಗ್ ನ್ಯೂಸ್
ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:…

ಇತ್ತೀಚಿನ ಸುದ್ದಿ

ಗಂಗಾವತಿ: ಆನ್ ಲೈನ್ ಗೇಮ್ ಆಡದಂತೆ ಬುದ್ಧಿಮಾತು ಹೇಳಿದ ಅಪ್ಪ, ಅಕ್ಕನನ್ನೇ ಹತ್ಯೆಗೈದ ಪಿಯು ವಿದ್ಯಾರ್ಥಿ

07/06/2026, 21:13

ಗಂಗಾವತಿ(reporterkarnataka.com): ಗಂಗಾವತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ಬುದ್ದಿವಾದ ಹೇಳಿದ ಪ್ರಕರಣ ಇಬ್ಬರ ಸಾವಿನಲ್ಲಿ ಅಂತ್ಯವಾದ ಘಟನೆ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ.
ಅಯೋಧ್ಯೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಘಟನೆ ಜರುಗಿದ್ದು ಗಂಗಾವತಿ ವಡ್ಡರಹಟ್ಟಿಯ ವಿದ್ಯಾನಿಕೇತನ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿರುವ ಸಾಯಿ ನಾಯ್ಡು (18) ಯಾವಾಗಲೂ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡುತ್ತಿದ್ದ. ಈ ಕುರಿತು ಶನಿವಾರ ರಾತ್ರಿ ಅಕ್ಕ ಪ್ರಗತಿ (20) ಬುದ್ಧಿ ಮಾತು ಹೇಳಿದ್ದು, ಇಬ್ಬರ ಮಧ್ಯೆ ತೀವ್ರ ಜಗಳವಾಗಿದ್ದು ಸಾಯಿ ನಾಯ್ಡು ಚಾಕುವಿನಿಂದ ಅಕ್ಕ ಪ್ರಗತಿಗೆ ಎಲ್ಲಂದರಲ್ಲಿ ಇರಿದ ಪರಿಣಾಮ ಸ್ಥಳದಲ್ಲೆ ಪ್ರಗತಿ ಮೃತಪಟ್ಟಿದ್ದಾಳೆ. ಜಗಳ ಬಿಡಿಸಲು ಬಂದ ತಂದೆ ಯಂಕಣ್ಣ ನಾಯ್ಡು (48) ತಾಯಿ ಸೌಜನ್ಯ (40) ಇವರ ಮೇಲೂ ಸಾಯಿ ನಾಯ್ಡು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯಂಕಣ್ಣ (48) ಮೃತ ಪಟ್ಟಿದ್ದು ತಾಯಿ ಸೌಜನ್ಯ ಹಾಗೂ ಆರೋಪಿ ಸಾಯಿ ನಾಯ್ಡುಗೆ ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಜಿಲ್ಲಾ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ‌ ಭಾನುವಾರ ಬೆಳಗಿನ ಜಾವ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗಂಗಾವತಿ ತಾಲೂಕಿನ ಹೊಸ ಅಯೋಧ್ಯ ಗ್ರಾಮದಲ್ಲಿ ಮನೆಯೊಂದರ ಕೊಠಡಿಯಲ್ಲಿ ಚಾಕುವಿನಿಂದ ಗಾಯಗೊಂಡು ಪ್ರಗತಿ ಎನ್ನುವ ಯುವತಿ ಮೃತಪಟ್ಟಿದ್ದು ಘಟನೆಯಲ್ಲಿ ಪ್ರಗತಿಯ ತಂದೆ ವೆಂಕಣ್ಣ ನಾಯ್ಡು ತಾಯಿ ಸೌಜನ್ಯ ನಾಯ್ಡು ತೀವ್ರವಾಗಿ ಗಾಯಗೊಂಡಿದ್ದಾರೆ. ಜತೆಗೆ ಇವರ ಮಗ ಸಾಯಿ ನಾಯ್ಡು ಅವರಿಗೂ ಗಾಯಗಳಾಗಿದ್ದು ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವ ವಿಷಯದಲ್ಲಿ ಜಗಳವಾಗಿದೆ ಯಾಕೆ ಕೊಲೆಯಾಗಿದೆ ಎನ್ನುವ ಕುರಿತು ತನಿಖೆ ಮಾಡಲಾಗುತ್ತಿದ್ದು ಈಗಾಗಲೇ ಮೃತ ಪ್ರಗತಿ ನಾಯ್ಡು ಹಾಗೂ ಅವರ ತಂದೆ ಯಂಕಣ್ಣ ನಾಯ್ಡು ಅವರ ಶವ ಪರೀಕ್ಷೆ ನಡೆಸಲಾಗುತ್ತಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಡಾ.ರಾಮ್ ಎಲ್ ಅರಸಿದ್ದಿ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು