ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ: ಭೀಕರ ರಸ್ತೆ ಅಪಘಾತಕ್ಕೆ ಮಹಿಳೆ ಸಾವು; ಇಬ್ಬರು ಗಂಭೀರ
07/06/2026, 17:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಆಟೋ ಮತ್ತು ವಿರಾಜಪೇಟೆ ಪಟ್ಟಣದ ಪುರಸಭೆ ಕಸ ಸಾಗಿಸುವ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಸಾವನಪ್ಪಿದ್ದು, ಮತೊರ್ವ ಮಹಿಳೆ ಮತ್ತು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.


ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪೆರಂಬಾಡಿ ನಿವಾಸಿ
ಸುಲೋಚನ (58) ಎಂಬವರು ಗಂಭೀರವಾದ ಸ್ಥಿತಿಯಲ್ಲಿದ್ದು ಮೈಸೂರಿನ ಆಸ್ಪತ್ರೆ ಗೆ ಸಾಗಿಸಲಾಗುವ ವೇಳೆ ಮೃತಪಟ್ಟಿದ್ದು, ಮತ್ತೊರ್ವ ಮಹಿಳೆ ಅಮೃತ ಅವರನ್ನು ಬೆಂಗಳೂರಿನ ಅಸ್ಪತ್ರೆಗೆ ಸಾಗಿಸಲಾಗಿದೆ ಹಾಗೂ ಪದ್ಮನಾಭ ಅವರಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುರಸಭೆ ತ್ಯಾಜ್ಯ ಸಾಗಿಸುವ ವಾಹನ ಚಾಲಕ ಸುರೇಶ್ ಅವರ ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ ಎಂದು ವಿರಾಜಪೇಟೆ ಪೋಲಿಸ್ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದು ಮುಂದಿನ ಕ್ರಮವನ್ನು ಕೈಗೊಂಡದ್ದಾರೆ.













