2:19 AM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಗಣೇಶೋತ್ಸವ: ಬೆಂಗಳೂರು ಶ್ರೀ ಕಾಶಿ ಮಠದಲ್ಲಿ ಗಣಪನಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ

03/09/2022, 22:33

ಚಿತ್ರ: ಕೀರ್ತಿ ಸಂತೋಷ್ ನಾಯಕ್
ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಪ್ರಯುಕ್ತ ಶ್ರೀದೇವರಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ ನಡೆಯಿತು.


ಇದಕ್ಕೆ ಮುನ್ನ ದೇಶದ 75ನೇ ಸ್ವಾತಂತ್ರ್ಯೊತ್ಸವ ಸವಿ ನೆನಪಿಗಾಗಿ ಗಣಪತಿ ದೇವರಿಗೆ ತಿರಂಗದ ಅಲಂಕಾರ ಸೇವೆ ಮಾಡಲಾಯಿತು. ಮಧ್ಯಾಹ್ನದಲ್ಲಿ 12.15ಕ್ಕೆ ಸಹಸ್ರ ಮೋದಕ ಹವನ ನಡೆಯಿತು. ಮಧ್ಯಾಹ್ನ 1.30ರಿಂದ ಗೌಡ ಸಾರಸ್ವತ ಮಹಿಳಾ ವೃಂದದ ಭಜನಾ ಮಂಡಳಿಯಿಂದ
ಭಜನಾ ಕಾರ್ಯಕ್ರಮ ಮೇಳೈಸಿತು. 1.45ಕ್ಕೆ ಮಹಾ ನೈವೇದ್ಯ ಹಾಗೂ ಮಧ್ಯಾಹ್ನ 2 ಗಂಟೆಗೆ ಮಹಾಪೂಜೆ ನೆರವೇರಿತು. ಸಂಜೆ 6.15ಕ್ಕೆ ದೀಪ ನಮಸ್ಕಾರ, 7ಗಂಟೆಗೆ ಪಾರ್ಥಸಾರಥಿ ದೇವರಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ ನೆರವೇರಿತು. 8 ಗಂಟೆಗೆ ಮಹಾಪೂಜೆ ನಡೆಯಿತು.
ಬೆಂಗಳೂರು ಕಾಶಿ ಮಠ ವ್ಯವಸ್ಥಾಪನ ಸಮಿತಿ ವತಿಯಿಂದ ಗಣೇಶೋತ್ಸವ ಆಗಸ್ಟ್ 31ರಂದು ಆರಂಭಗೊಂಡಿದ್ದು, ಸೆ.4ರ ವರೆಗೆ ನಡೆಯಲಿದೆ. ಗಣೇಶೋತ್ಸವ ಅಂಗವಾಗಿ ನಿನ್ನೆ ವಿಶೇಷ ಚೆಂಡೆ ವಾದನ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು