3:12 PM Sunday31 - May 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಳಿಸಿ ಅಪಮಾನ: ಮಂಗಳೂರಿನಲ್ಲಿ ಕೇಂದ್ರ… Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..! ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ

ಇತ್ತೀಚಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ರೇಸಲ್ಲಿ ನಾಲ್ವರು; ದಿಲ್ಲಿ ಮಟ್ಟದಲ್ಲಿ ಲಾಬಿ ಶುರು

31/05/2026, 15:11

ಬೆಂಗಳೂರು(reporterkarnataka.com): ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಬೆನ್ನಲ್ಲೇ ಬಿಜೆಪಿಯಲ್ಲೂ ದಿಢೀರ್ ಬೆಳವಣಿಗೆಗಳು ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಸೇರಿದಂತೆ ನಾಲ್ವರು ಪ್ರಭಾವಿಗಳು ದೆಹಲಿ ಮಟ್ಟದಲ್ಲಿ ಲಾಬಿ ಪ್ರಾರಂಭಿಸಿದ್ದಾರೆ.
ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಮಹೇಶ್‌ ಟೆಂಗಿನಕಾಯಿ ಹೆಸರು ಈಗ ಮುಂಚೂಣಿಗೆ ಬಂದಿದೆ. ಇದರ ಜತೆಗೆ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯೂ ಪರಿಷ್ಕರಣೆಗೊಳ್ಳುತ್ತಿದ್ದು, ರಾಜ್ಯದ ಕೆಲ ನಾಯಕರಿಗೆ ಸ್ಥಾನ ಲಭಿಸಬಹುದೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಹಾಗೂ ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಶುಕ್ರವಾರ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಜತೆಗೆ ಕೇಂದ್ರ ಸಂಪುಟ ಪುನಾರಚನೆ ಗುಸುಗುಸು ಕೂಡ ಪ್ರಾರಂಭವಾಗಿದೆ. ಅಲ್ಲದೆ, ವಿ.ಸೋಮಣ್ಣ ಅಥವಾ ಶೋಭಾ ಕರಂದ್ಲಾಜೆ ಪೈಕಿ ಒಬ್ಬರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಆಗ ರಾಜ್ಯ ರಾಜಕಾರಣದ ಸಮೀಕರಣ ಬದಲಾಗುವುದು ನಿಶ್ಚಿತ.

*ಅಭ್ಯರ್ಥಿ ಚರ್ಚೆ:*
ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಅವರ ಆಪ್ತ ವಲಯ ಬೇರೆಯದೆ ಆದ ಮಾಹಿತಿ ನೀಡುತ್ತಿದೆ. ಕಳೆದ 2 ದಿನಗಳಿಂದ ಅವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ವರಿಷ್ಠರ ಜತೆ ಚರ್ಚೆ ನಡೆಸುವುದಕ್ಕಾಗಿ ತೆರಳಿದ್ದಾರೆ ಎನ್ನಲಾಗುತ್ತಿದೆ.
ವಿಜಯೇಂದ್ರ ದೆಹಲಿಯಲ್ಲಿ ಯಾರನ್ನು ಭೇಟಿಯಾಗಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ರಾಜ್ಯ ಉಸ್ತುವಾರಿ ರಾಧಾಮೋಹನ್‌ ದಾಸ್ ಅಗರ್ವಾಲಾ ಅವರನ್ನು ಸಂಪರ್ಕಿಸಿರಬಹುದೆಂದು ಹೇಳಲಾಗುತ್ತಿದೆ. ಭಾನುವಾರ ಬೆಳಗ್ಗೆ ಅವರು ಬೆಂಗಳೂರಿಗೆ ವಾಪಸ್‌ ಆಗುವ ನಿರೀಕ್ಷೆ ಇದೆ.
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬೆನ್ನಲ್ಲೇ ಬಿಜೆಪಿಯಲ್ಲೂ ಜಾತಿ ಸಮೀಕರಣಗಳು ಬದಲಾಗಬೇಕೆಂಬ ಚರ್ಚೆ ಪ್ರಾರಂಭವಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಮುಂದುವರಿಕೆ ಸುತ್ತ ಒಂದಿಷ್ಟು ವ್ಯಾಖ್ಯಾನಗಳು ನಡೆಯುತ್ತಿದೆ. ಇದೆಲ್ಲದರ ಮಧ್ಯೆ ವಿಜಯೇಂದ್ರ ಬದಲಾವಣೆಗೂ ಒಂದು ಬಣ ಆಗ್ರಹಿಸುತ್ತಿದೆ. ರಾಜ್ಯ ನಾಯಕತ್ವಕ್ಕೆ ಸಂಬಂಧಪಟ್ಟಂತೆ 30 ಪ್ರಮುಖರಿಂದ ಹೈಕಮಾಂಡ್‌ ಅಭಿಪ್ರಾಯವನ್ನೂ ಸಂಗ್ರಹಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು