8:05 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

‘ಡೊಳ್ಳು’ ಸಿನಿಮಾಗೆ ಪನೋರಮಾ ಸಮ್ಮಾನ: ನಿರ್ದೇಶಕ ಪವನ್ ಒಡೆಯರ್ ಸಂತಸ

24/11/2021, 15:36

ಪಣಜಿ(reporterkarnataka.com): ಡೊಳ್ಳು ಸಿನಿಮಾ ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಡಿಸೆಂಬರ್‌ನಲ್ಲಿ ಅಂತ್ಯದೊಳಗೆ ತೆರೆಗೆ ಬರುವ ಹುಮ್ಮಸ್ಸಿನಲ್ಲಿದೆ. ಇದರ ಜೊತೆಗೆ ಒಂದು ಶುಭ ಸುದ್ದಿಯನ್ನು ನೀಡಿದ್ದು, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಪವನ್ ಒಡೆಯರ್ ಅವರ  ಚೊಚ್ಚಲ ಚಿತ್ರ “ಡೊಳ್ಳು” ಭಾರತೀಯ ಪನೊರಾಮದಿಂದ ಸನ್ಮಾನಿತಗೊಂಡಿದೆ.

ಚಿತ್ರ ಭೂಮಿಕೆಯಲ್ಲಿ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೊತೆ ಹೆಜ್ಜೆ ಹಾಕಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್   


ಗೋವಿಂದಾಯ ನಮಹ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ  ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್  ಬ್ಯಾನರ್ ನಡಿ ಡೊಳ್ಳು  ಸಿನಿಮಾ ನಿರ್ಮಾಣ ಮಾಡಿದೆ.

ಡೊಳ್ಳು  ಹಳ್ಳಿಯ ಜನಪದ ಬಿಂಬಿಸುವ ಚಿತ್ರವಾಗಿದೆ. ಕುತೂಹಲ ಭರಿತ ಚಿತ್ರವಾಗಿದ್ದು . ಕಥಾಹಂದರವನ್ನು ಹೊಂದಿದೆ. ಅನಂತ್ ಕಾಮತ್ ಸಂಗೀತ ಸಂಯೋಜನೆ ಮಾಡಿದ್ದು ಶ್ರಿನಿಧಿ ಡಿ.ಎಸ್. ಚಿತ್ರಕಥೆ ಬರೆದಿದ್ದಾರೆ,ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ.ಅಭಿಲಾಸ್ ಕಲಾಥಿ ಅವರ ಛಾಯಾಗ್ರಹಣವಿದೆ. 

ಡೊಳ್ಳು ಭಾರತಿಯ ಪನೊರಮದೊಂದಿಗೆ ಆಯ್ಕೆಯಾದ ಬಗ್ಗೆ ರಿಪೋರ್ಟರ್ ಕರ್ನಾಟಕ ದೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ ಪವನ್ ಒಡೆಯರ್.

ಇತ್ತೀಚಿನ ಸುದ್ದಿ

ಜಾಹೀರಾತು