1:46 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ ಬಸವರಾಜ್ ಹೊರಟ್ಟಿ

25/12/2024, 16:58

ಹುಬ್ಬಳ್ಳಿ(reporterkarnataka.com): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಈಗಾಗಲೇ 7 ಪೇಜ್ ಗಳ ಪತ್ರವನ್ನು ಬರೆದಿದ್ದಾರೆ. ಆದರೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರಿಂದ ಇದುವರೆಗೆ ಯಾವುದೇ ಪತ್ರ ಬಂದಿಲ್ಲ‌ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಈ ಕುರಿತು ನಗರದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷತ್ ಸದಸ್ಯರಾದ ಸಿ.ಟಿ. ರವಿಯವರು ಪತ್ರದಲ್ಲಿ ಪೊಲೀಸರು ನಡೆಸಿಕೊಂಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿ.ಟಿ. ರವಿಯವರು ಸ್ಟ್ರೈಕ್ ಮಾಡುವ ವೇಳೆ ಸಂಜೆ 6 ಗಂಟೆಗೆ ಪೊಲೀಸರ ವಶಕ್ಕೆ ಪಡೆದಿರುವುದು ಹೇಳಿಕೊಂಡಿದ್ದಾರೆ.‌ ರವಿಯವರು ನಮ್ಮ ಸದನದ ಸದಸ್ಯರಾಗಿದ್ದು, ಹಾಗಾಗಿ‌ ಅವರ ಹಕ್ಕುಚ್ಯುತಿ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಜತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಇನ್ನೂ
ಬಂದಿಲ್ಲ. ಘಟನಾ ದಿನ ಲಕ್ಷ್ಮೀ ‌ಅವರು ನೋವಿನಲ್ಲಿದ್ದರು, ಇತ್ತೀಚಿನ ಎರಡು ದಿನಗಳಿಂದ ಮಾಧ್ಯಮಗಳಲ್ಲಿ‌ ಅವರ ಹೇಳಿಕೆ ಗಮನಿಸಿದ್ದೇವೆ. ಅವರ ಹೇಳಿಕೆ ನೋಡಿದ್ದಾಗ‌ ಅವರು ನೊಂದಿರುವುದು ಗೊತ್ತಾಗುತ್ತೆ. ಕಾನೂನು ತನಿಖೆ ಹೊರತುಪಡಿಸಿ ಹೆಣ್ಮಕ್ಕಳಿಗೆ‌ ಗೌರವ ನೀಡುವುದು ನಮ್ಮ‌ ಧರ್ಮ. ನಮ್ಮಗೂ ಹೆಣ್ಮಕ್ಕಳು ಇದ್ದಾರೆ. ಲಕ್ಷ್ಮೀ ಅವರು ನಮ್ಮಗೆ ಮಗಳೆ ಅಂತಾ ತಿಳ್ಕೊಂಡಿದ್ದೇವೆ.‌ ಸಿಎಂ ಅವರೊಂದಿಗೆ ಮಾತಾಡಿ ಸದ್ಯ ಈ ವಾತಾವರಣ ತಿಳಿ ಮಾಡೋ ಪ್ರಯತ್ನದಲ್ಲಿದ್ದೇನಿ. ನನ್ನ ತೀರ್ಮಾನ ತೆಗೆದುಕೊಂಡಿದ್ದೇನೆ, ಅದಕ್ಕೆ ಬಹುತೇಕರು ಒಳ್ಳೆಯ ತೀರ್ಮಾನ ಅಂತಿದ್ದಾರೆ.‌ ಯಾರಿಗೂ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಿದ್ದೇನಿ. ಪರಿಷತ್ ಸದನದ ಘಟನೆಯ ಕುರಿತು ರಾಜ್ಯಪಾಲರ ಮಾಹಿತಿ ಕೇಳಿರುವ ವಿಚಾರ ಮಾತನಾಡಿ, ರಾಜ್ಯಪಾಲರು ಮಾಹಿತಿ ಕೇಳಿರುವುದು ನಿಜ. 19 ದಿನಾಂಕದಂದು ಆಗಿರುವ ಘಟನೆ ವಿವರಣೆ ಕೇಳಿದರು, ರಾಜ್ಯಪಾಲರಿಗೆ ವಿವರಣೆ ನೀಡಿದ್ದೇನಿ. ಡಿಸೆಂಬರ್ 27 ರಂದು ಬೆಳಗಾವಿಗೆ ತೆರಳಲಿದ್ದೇನಿ ಸಿಕ್ಕರೆ ಮಾತಾಡುತ್ತೇನೆ, ಇಲ್ವಾದಲ್ಲಿ ಬೆಂಗಳೂರಿನಲ್ಲಿ ಮಾತಾಡುತ್ತೇನೆ. ಈ ಪ್ರಕರಣ ಸಾಮಾಧಾನ ಮಾಡೋ ಜವಾಬ್ದಾರಿ ಎಲ್ಲರ ಮೇಲೂ ಇದೆ, ಸಮಾಧಾನ ಮಾಡೋವುದು ಎಲ್ಲರಿಗೂ ಒಳ್ಳೆಯದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು