4:50 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಕೋಸ್ಟಲ್ ಬರ್ತ್ ಕಾಮಗಾರಿ: ಬೆಂಗ್ರೆಯಲ್ಲಿ ಕೃತಕ ನೆರೆ; ಆತಂಕದಲ್ಲಿ ನಾಗರಿಕರು; ಜಿಲ್ಲಾಡಳಿತ ನೆರವಿಗೆ ಡಿವೈಎಫ್ಐ ಆಗ್ರಹ

19/07/2024, 14:35

ಮಂಗಳೂರು(reporterkarnataka.com): ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯಿಂದ ಬೆಂಗ್ರೆಯಲ್ಲಿ ಕೃತಕ ನೆರೆ ಉಂಟಾಗಿದ್ದು, ನಾಗರಕರು ಮುಳುಗುವ ಆತಂಕಕ್ಕೀಡಾಗಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ನೆರವಿಗೆ ಡಿವೈಎಫ್ಐ ಆಗ್ರಹಿಸಿದೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಇನ್ನೊಂದೆಡೆ ಕೋಸ್ಟಲ್ ಬರ್ತ್ ಕಾಮಗಾರಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಅದೇ ರೀತಿ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಗಳಲ್ಲಿ ಮಳೆ ಹೆಚ್ಚು ಬಂದಾಗೆಲ್ಲಾ ಮಳೆ ನೀರು ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ಕಡೆಯಿಂದ ನೀರು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ಇನ್ನೂ ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆ ಮಾಡಿರುವುದಿಲ್ಲ. ಹಾಗೆಯೇ ಸದ್ಯಕ್ಕೆ ಎತ್ತರದಲ್ಲಿರುವ ಕಾಮಗಾರಿಯ ಪಕ್ಕ ನೀರು ಹೋಗಲು ಮಾಡಿರುವ ವ್ಯವಸ್ಥೆ ತಗ್ಗು ಪ್ರದೇಶದ ನೀರು ಸರಿಯಾಗಿ ಹೋಗದೆ ಅಲ್ಲಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ರೀತಿಯಲ್ಲಿ ನೀರು ಹೋಗಲು ವ್ಯವಸ್ಥೆ ಮಾಡದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.
ವಾರಗಳ ಹಿಂದೆ ಈ ಬಗ್ಗೆ ಪೋರ್ಟ್ ಸಹ ಕಾರ್ಯ ನಿರ್ವಾಹಕರಾದ ಪ್ರವೀಣ್ ಅವರ ಗಮನಕ್ಕೆ ನೀಡಿದ್ದು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತಿಳಿಸಲಾಗಿದೆ. ನೀರು ನಿಲ್ಲುವ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು ಮುಂದೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.
ಗುರುವಾರ ದಿನ ತುಂಬೆ ಅಣೆಕಟ್ಟಿನ ನೀರಿನ ಪ್ರಮಾಣ 6 ಮೀಟರ್ ಇದ್ದು ನಿನ್ನೆ ಬೆಳಿಗ್ಗೆ ಸುಮಾರು 27 ಗೇಟುಗಳು ತೆರೆದಿದ್ದು ನಂತರ ರಾತ್ರಿ ಸಮಯ ಎಲ್ಲಾ 30 ಗೇಟುಗಳು ತೆರೆದಿದೆ. ಅದೇ ರೀತಿ ಪಾವೂರು ಡ್ಯಾಮಿನ ಎಲ್ಲಾ ಗೇಟುಗಳನ್ನು ತೆರೆದಿದ್ದು ನದಿ ಭಾಗದ ಪ್ರದೇಶಗಳಲ್ಲಿ ನೀರು ಹೆಚ್ಚಾಗಿದೆ. ಸ್ವಾಭಾವಿಕವಾಗಿ ನೀರು ಹೆಚ್ಚು ಬಿಟ್ಟ ಸಂದರ್ಭಗಳಲ್ಲಿ ನದಿಭಾಗದ ಪ್ರದೇಶಗಳಲ್ಲಿ ನದಿನೀರಿನ ಪ್ರಮಾಣ ಹೆಚ್ಚಾಗಿ ಮೇಲೆ ಬಂದು ಕೆಲವು ತಗ್ಗು ಪ್ರದೇಶಕ್ಕೆ ಆವರಿಸುತ್ತದೆ.


ನದಿಭಾಗದ ದೋಣಿಗಳು ಒಂದೆಡೆ ವಿಪರೀತ ಮಳೆಯಿಂದಾಗಿ ಹಲವು ದಿನಗಳಿಂದ ಮೇಲ್ಬಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆಯಿಂದಾಗಿ ಡ್ಯಾಮ್ ನೀರು ಬರುವುದರಿಂದ ನೀರಿನ ರಭಸ ಮತ್ತು ಹೊರ ಹರಿವು ಜೋರಾಗಿರುವುದರಿಂದ ಕೆಲವು ದಿನಗಳಿಂದ ಹೊಸ ಬಲೆಗಳನ್ನು ಎಲ್ಲಾ ಮಾಡಿ ದುಡಿಯಲು ಸಾಧ್ಯವಾಗದೇ ಸರಿಯಾಗಿ ದುಡಿಮೆ ಇಲ್ಲದೆ ನದಿ ದೋಣಿಗಳನ್ನು ಕಟ್ಟಿ ಇಡುವ ಸ್ಥಿತಿ ಉಂಟಾಗಿದೆ.
ಈಗಾಗಲೇ ಮಳೆನೀರು ನಿಲ್ಲುವ ಜಾಗಗಳಿಗೆ ಅಣೆಕಟ್ಟಿನ ನೀರು ಬಿಟ್ಟ ನಂತರ ಇಂದು ನದಿ ಭಾಗದ ಬೆಂಗ್ರೆ ಪ್ರದೇಶ ಮುಳುಗುವ ಭೀತಿಯಲ್ಲಿದೆ ಈ ಹಿನ್ನೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿಯನ್ನು ತಡೆ ಹಿಡಿದು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಜನರ ನೆರವಿಗೆ ಬರಬೇಕಾಗಿ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ ಮತ್ತು ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಪ್ ಬೆಂಗ್ರೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು