3:37 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟ್ ನಲ್ಲಿ ಶವ ಶೋಧಕ್ಕೆ ತೆರೆ: ಬರಿಗೈಯಲ್ಲಿ ವಾಪಸಾದ ಬೆಂಗಳೂರು ಪೊಲೀಸ್ ತಂಡ

05/01/2023, 21:33

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಎಚ್.ಶರತ್ ಅವರ ಶವದ ಶೋಧವನ್ನು ಮುಂದುವರೆಸಿದ್ದ ಪೊಲೀಸರು ಗುರುವಾರವೂ ಶೋಧ ಕಾರ್ಯ ನಡೆಸಿ ಶವ ಸಿಗದೇ ಶೋಧ ಕಾರ್ಯಕ್ಕೆ ತೆರೆ ಎಳೆದು ಕರೆ ತಂದಿದ್ದ ಆರೋಪಿಗಳ ಜತೆ ಬೆಂಗಳೂರಿಗೆ ರಾತ್ರಿ ಪ್ರಯಾಣ ಬೆಳೆಸಿದರು.

ಆರೋಪಿಗಳು ಶವ ಎಸೆದ ಜಾಗವನ್ನು ಗುರುತು ಹಚ್ಚದೇ ಇರುವುದೇ ಶವ ಶೋಧ ಕಾರ್ಯ ವಿಳಂಬವಾಗಲು ಕಾರಣವಾಯಿತು. ಮೂರು ದಿನ ಕಬ್ಬನ್ ಪಾರ್ಕ್ ಮತ್ತು ಅಶೋಕ ನಗರ ಪೊಲೀಸರು ಮೂಡಿಗೆರೆಯ ಸಾಮಾಜಿಕ ಸಕ್ರೀಯ ಕಾರ್ಯಕರ್ತರು, ಸಮಾಜ ಸೇವಕ ಮೊಹಮ್ಮದ್ ಆರೀಪ್ ಹಾಗೂ ಸ್ಥಳೀಯರ ಸಹಕಾರದಿಂದ ಚಾರ್ಮಾಡಿ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಮುಂದಿನ ಪ್ರಪಾತ, ಸೋಮನಕಾಡು ಹಾಗೂ ದಕ್ಷಿಣ ಕನ್ನಡ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಲವೆಡೆ ಇಂಚಿಂಚು ಶೋಧ ಕಾರ್ಯಾಚರಣೆ ನಡೆಸಿ ಶವ ಹಾಕಿದ್ದ ಗೋಣಿಚೀಲ ಶೋಧಿಸಿದರೂ ಶವ ಸಿಗದೇ ಕರೆ ತಂದಿದ್ದ ಇಬ್ಬರು ಆರೋಪಿಗಳನ್ನು ವಾಪಾಸ್ ಕರೆದುಕೊಂಡು ಹೋಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯದಲ್ಲಿ ಸ್ಥಳೀಯ ಎರಡು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರು ಕೈಜೋಡಿಸಿದ್ದರು.ಅವರೆಲ್ಲರ ಸಹಕಾರವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಸಿಪಿ ರಾಜೇಂದ್ರ ಹಾಗೂ ಅವರ ವಿಶೇಷ ಪೊಲೀಸ್ ತಂಡದವರು ಅಭಿನಂದಿಸಿದರು.
ಶವ ಶೋಧ ಕಾರ್ಯಾಚರಣೆಯಲ್ಲಿ ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರ,ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಚೈತನ್ಯ,ಅಶೋಕನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಜಿ.ಎ.ಅಶ್ವಿನಿ, ಸಹಾಯಕ ಇನ್ ಸ್ಪೆಕ್ಟರ್ ಹರಿಚಂದ್ರ, ಎಎಸೈಐ ರೇಣುಕಾ, ಪೊಲೀಸ್ ಸಿಬ್ಬಂದಿಗಳಾದ ನಂದೀಶ್, ವಸಂತ, ಜಾಕೀರ್, ಲೋಕೇಶ್, ಸೋಮು ಲಮಾಣಿ, ಪ್ರಮೋದ್ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು