7:38 AM Monday11 - May 2026
ಬ್ರೇಕಿಂಗ್ ನ್ಯೂಸ್
ತಿರುಚಿ ಪೂರ್ವ ಕ್ಷೇತ್ರಕ್ಕೆ ತಮಿಳುನಾಡು ಸಿಎಂ ವಿಜಯ್ ರಾಜೀನಾಮೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಇನ್ನಿಲ್ಲ: ಅನಾರೋಗ್ಯದಿಂದ ನಿಧನ ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ

ಇತ್ತೀಚಿನ ಸುದ್ದಿ

ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಮೊದಲ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಜಯ

25/11/2024, 16:11

ಪರ್ತ್(reporterkarnataka.com): ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಜಯಗಳಿಸಿದೆ.
ಪರ್ತ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 295 ರನ್​ಗಳಿಂದ ಗೆಲುವು ಕಂಡಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​ಗಳಿಸಿತು. ಆದರೆ ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕಾಂಗರೂ ಪಡೆಯನ್ನು 104 ರನ್​ಗಳಿಗೆ ಕಟ್ಟಿ ಹಾಕಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಬಾಟ್ಸ್ ಮೆನ್ ಗಳು ಭಾರೀ ರೈನ್ ಬಾರಿದರು.
ಜೈಸ್ವಾಲ್​ (161), ಕೆ.ಎಲ್.ರಾಹುಲ್​ (77) ರನ್​ ಗಳಿಸಿದರು. ಬಳಿಕ ವಿರಾಟ್​ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಭಾರತ 487/6 ರನ್‌ಗಳಿಗೆ ಡಿಕ್ಲೇರ್​ ಮಾಡಿಕೊಂಡಿತ್ತು. ಇದರೊಂದಿಗೆ ಭಾರತ 534 ರನ್‌ಗಳ ಬೃಹತ್​ ಗುರಿ ನೀಡಿತು. ಆಸೀಸ್​ ಪಡೆ 17 ರನ್​ಗಳಿಗೆ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡಿತು. ಆರಂಭಿಕ​ ಬ್ಯಾಟ್ಸ್ ಮೆನ್ ಮೆಕ್​ಸ್ವೀನಿ ಶೂನ್ಯಕ್ಕೆ ನಿರ್ಗಮಿಸಿದರೆ, ಪ್ಯಾಟ್​ ಕಮಿನ್ಸ್​ 2, ಲಬೋಶ್ಚಗೇನೆ 3 ರನ್‌ಗಳಿಗೆ ನಿರ್ಗಮಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ 3ನೇ ದಿನದಾಟಕ್ಕೆ 12 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತು. ನಾಲ್ಕನೇ ದಿನ ಕೂಡಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ ಕಾಂಗರೂ ಪಡೆ ಉಳಿದ 7 ವಿಕೆಟ್​ಗಳನ್ನು ಕಳೆದುಕೊಂಡು ಹೀನಾಯ ಪರಾಭವ ಕಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು