5:15 PM Saturday19 - September 2026
ಬ್ರೇಕಿಂಗ್ ನ್ಯೂಸ್
*ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ…

ಇತ್ತೀಚಿನ ಸುದ್ದಿ

ಬಿಗ್‌ ಬಾಸ್ -8 ಸ್ಪರ್ಧೆ: ವಿನ್ನರ್  ಮಂಜು ಪಾವಗಡ; 17 ವಾರಗಳ ರಿಯಾಲಿಟಿ ಶೋ ಜರ್ನಿಗೆ ತೆರೆ 

09/08/2021, 08:00

ಬೆಂಗಳೂರು(reporterkarnataka.com) : ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆಯಲ್ಲಿ ಮಂಜು ಪಾವಗಡ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಗ್ ಬಾಸ್ 120 ದಿನಗಳ ಯಾನ ಮುಕ್ತಾಯಗೊಂಡಿದೆ.

ಹೆಸರಾಂತ ನಟ, ಬಿಗ್ ಬಾಸ್  ನಿರೂಪಕ ಸುದೀಪ್ ಅವರು ಬಿಗ್ ಬಾಸ್​ ಮನೆಯೊಳಗೆ ಹೋಗಿ ಇಬ್ಬರು ಫೈನಲಿಸ್ಟ್​ಗಳಾದ ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ.  ಅವರನ್ನು ಕೈ ಹಿಡಿದು ವೇದಿಕೆಗೆ ಕರೆ ತಂದರು.

ಫೈನಲಿಸ್ಟ್​ಗಳು ವೇದಿಕೆ ಕಾಲಿಡುತ್ತಿದ್ದಂತೆಯೇ ನೆರೆದಿದವರ ಚಪ್ಪಾಳೆ ಜೋರಾಯಿತು. ಫಲಿತಾಂಶ ಪ್ರಕಟಿಸುವ ಮುನ್ನ ಸುದೀಪ್ ಅವರು ಇತರೆ ಸ್ಪರ್ಧಿಗಳನ್ನು ಯಾರು ಜಯಗಳಿಸಬೇಕೆಂಬುದು ನಿಮ್ಮ ಇಷ್ಟ ಎನ್ನುತ್ತಾರೆ. ಆಗ ಶಮಂತ್ ಹಾಗೂ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಮಂಜು ಅವರೇ ಗೆಲ್ಲಬೇಕು ಎಂದು. ಅದರಲ್ಲೂ ಮಂಜು ಅವರ ಬಾರಿ ನಿಂದಕರಾದ ಚಕ್ರವರ್ತಿ ಹಾಗೂ ಪ್ರಶಾಂತ್​ ಅವರು ಕೂಡ ಮಂಜು ಗೆಲ್ಲಬೇಕು ಎಂದು ಹೇಳುತ್ತಾರೆ. ಕೊನೆಗೂ 17 ವಾರಗಳ ಕಾಲ ನಡೆದ ಜರ್ನಿಗೆ ನಿನ್ನೆ ಅದ್ದೂರಿಗೆ ತೆರೆ ಎಳೆಯಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು