10:59 PM Monday25 - May 2026
ಬ್ರೇಕಿಂಗ್ ನ್ಯೂಸ್
ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು

ಇತ್ತೀಚಿನ ಸುದ್ದಿ

ಬಂಟವಾಳ ಕಾಶೀ ಮಠದ ವೃನ್ದಾವನಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ

21/12/2021, 10:49

ಚಿತ್ರ : ಮಂಜು ನೀರೇಶ್ವಾಲ್ಯ                         ಮಂಗಳೂರು(reporterkarnataka.com) : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ  ಶ್ರೀ ಕಾಶೀ ಮಠ ಸಂಸ್ಥಾನದ 6ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃನ್ದಾವನದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಯು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಆದಿತ್ಯವಾರ ನೆರವೇರಿತು . 

ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಪ್ರಯುಕ್ತ ಶಾಖಾ ಮಠದಲ್ಲಿ 10 ದಿನಗಳ ಪರ್ಯಂತ 108 ನಾರೀಕೇಳ ಗಣಹೋಮ , ಶ್ರೀ ಭಾಗವತ ಸಪ್ತಾಹ , ಶ್ರೀ ಸುದರ್ಶನ ಹವನ , ಶ್ರೀ ಭೂ ವರಾಹ ಹವನ , ಶ್ರೀ ನರಸಿಂಹ ಹವನ , ಶ್ರೀ ವಾಯುಸ್ತುತಿ ಹವನ , ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ , ದುರ್ಗಾ ನಮಸ್ಕಾರ , ಚಂಡಿಕಾ ಹವನ , ದಶಮ ಸ್ಕಂದ ಹವನ , ಸುಂದರಕಾಂಡ ಹವನಗಳು ಶ್ರೀಗಳವರ ಮಾರ್ಗದರ್ಶನದಲ್ಲಿ ನೆರವೇರಿದವು , ಪುನಃ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿಖರ ಕಲಶ ಅಧಿವಾಸ ಕಾರ್ಯಕ್ರಮಗಳು ವೈದಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನಡೆದವು . 

ಆದಿತ್ಯವಾರ 10:46 ರ ಕುಂಭ ಲಗ್ನ ಮುಹೂರ್ತದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು ಬಳಿಕ ರಾತ್ರಿ ಶ್ರೀ ಮಾಧವೇಂದ್ರ ಸಭಾ ಸದನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು . ಶ್ರೀಗಳವರಿಂದ ದಾನಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಬಳಿಕ ಶ್ರೀಗಳವರ ಆಶೀರ್ವಚನ ನೆರವೇರಿತು . ಈ ಸಂದರ್ಭದಲ್ಲಿ ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಭಾಮಿ ನಾರಾಯಣ್ ಶೆಣೈ , ವೆಂಕಟ್ರಾಯ ಪೈ ,  ಜೆ . ಪುರುಷೋತ್ತಮ್  ಪೈ , ಬಿ . ಶಿವರಾಯ ಪ್ರಭು , ಬಿ . ಗಣೇಶ್ ಮಲ್ಯ , ಬಿ . ಮಹೇಶ್ ಬಾಳಿಗಾ , ಬಿ . ರಿತೇಶ್ ಬಾಳಿಗಾ , ಬಿ ವಿಜಯಾನಂದ ಶೆಣೈ . ತಿರುಮಲ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಬಿ . ಪುರುಷೋತ್ತಮ್   ಶೆಣೈ , ಏ . ಗೋವಿಂದ ಪ್ರಭು , ಪಿ . ಪ್ರವೀಣ್ ಕಿಣಿ , ಸೂರ್ಯನಾರಾಯಣ ಬಾಳಿಗಾ ಹಾಗೂ ಸಹಸ್ರಾರು ಭಜಕರು ಉಪಸ್ಥಿತರಿದ್ದರು . 

ಇತ್ತೀಚಿನ ಸುದ್ದಿ

ಜಾಹೀರಾತು