ಇತ್ತೀಚಿನ ಸುದ್ದಿ
ಬಂಟ್ವಾಳ | ಇರ್ವತ್ತೂರಿನಲ್ಲಿ “ದಶಾರದ ಸಾಂಸ್ಕ್ರತಿಕ ಸಂಭ್ರಮ” ಸಂಪನ್ನ
14/10/2026, 15:57
ಬಂಟ್ವಾಳ(reporterkarnataka.com): ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಟ್ಟ್ ಮತ್ತು ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅಕ್ಟೋಬರ್ 18 ಮತ್ತು 19 ರಂದು ನಡೆಯುವ ಶ್ರೀ ಶಾರದಾ ಪೂಜಾ ದಶಮಾನೋತ್ಸವ “ದಶಾರದ ಸಂಭ್ರಮ-2026” ಅಂಗವಾಗಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ “ದಶಾರದ ಸಾಂಸ್ಕ್ರತಿಕ ಸಂಭ್ರಮ” ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ಕೆ.ಲಕ್ಷ್ಮೀನಾರಾಯಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅರಳ ಜನಹಿತಾಯ ಶಾಲಾ ಸಂಚಾಲಕ ರಂಜನ್ ಶೆಟ್ಟಿ ಉದ್ಘಾಟಿಸಿದರು. ಸಿದ್ಧಕಟ್ಟೆ ಪಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷೆ ಟೀನಾ ಡಿಕೋಸ್ತ, ಪ್ರಗತಿಪರ ಕೃಷಿಕ ಗೋಪಾಲ ಕೃಷ್ಣ ಜೋಶಿ ಮುಳ್ಳುಂಜ, ಚೆನ್ನೈತ್ತೋಡಿ ಕ್ಲಸ್ಟರ್ ಸಿಆರ್ ಪಿ ಸುನೀಲ್ ಸಿಕ್ವೇರಾ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗಿರೀಶ್ ಸಾಲ್ಯಾನ್ ಹೆಗ್ಗಡೆಬೆಟ್ಟು ಗುತ್ತು, ವಾಮದಪದವು ಸರಕಾರಿ ಪ್ರೌಢಶಾಲಾ ಶಿಕ್ಷಕ ಹರೀಪ್ರಸಾದ್ ಆರ್., ಎಸ್ ಡಿಎಂಸಿ ಅಧ್ಯಕ್ಷೆ ಶಾಲಿನಿ ಯತೀಶ್ ಪೂಜಾರಿ, ಬಂಟ್ವಾಳ ಬಾಲಗೋಕುಲ ಪ್ರಮುಖ ಹರೀಶ್ ಕುಲಾಲ್ ಜಾರಬೆಟ್ಟು, ಉದ್ಯಮಿಗಳಾದ ನೆಲ್ವಿಸ್ಟರ್ ಪಿಂಟೋ, ಸಿಲ್ವೆಸ್ಟರ್ ಲಸ್ರಾದೋ, ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ, ಮುರಲೀಕೃಷ್ಣ ರಾವ್, ಮುರಲೀಧರ ಆಚಾರ್ಯ, ಸಂಸ್ಕ್ರತ ಶಿಕ್ಷಕ ಮುರಲೀಧರ ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದರು. ಸಮಿತಿ ಪ್ರಮುಖರಾದ ಟಿ.ಹರೀಂದ್ರ ಪೈ, ಮೋಹನ್ ಶೆಟ್ಟಿ ನರ್ವಲ್ದಡ್ಡ, ಸುಧೀಂದ್ರ ಶೆಟ್ಟಿ ಎರ್ಮೆನಾಡು, ಸತೀಶ್ ಪೂಜಾರಿ ಬೆನಕ, ಶೇಖರ ಪೂಜಾರಿ ಅಗಲ್ದೋಡಿ, ಶಂಕರ ಶೆಟ್ಟಿ ಬೆದ್ರಮಾರು ಮೊದಲಾದವರು ಉಪಸ್ಥಿತರಿದ್ದರು.ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ ಚಿತ್ರಕಲೆ, ಆಶುಭಾಷಣ, ಛದ್ಮವೇಷ, ರಂಗೋಲಿ, ರಸಪ್ರಶ್ನೆ ಮೊದಲಾದ ವೈವಿದ್ಯಮಯ ಸ್ಪರ್ಧೆಗಳು ನಡೆಯಿತು. ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್ ವಂದಿಸಿದರು.












