2:51 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಬಲಿಗಾಗಿ ಕಾಯುತ್ತಿವೆ ಮೃತ್ಯುಕೂಪಗಳು!: ಸ್ಮಾರ್ಟ್ ಸಿಟಿಯಲ್ಲಿ ಖಾಸಗಿ ಟೆಲಿಕಾಂ ಕಂಪನಿಯ ಹೊಂಡಕ್ಕೆ ಬಿದ್ದ ಮಹಿಳೆ!

20/12/2022, 13:57

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@,gmail.com

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವರ್ಷದ 365 ದಿವಸವೂ ಅಗೆಯುವ ಮತ್ತು ಮುಚ್ಚುವ ಕಾಮಗಾರಿ ನಡೆಯುತ್ತಲೇ ಇರುವುದರಿಂದ ಜನರಿಗೆ ಕಿರಿಕಿರಿ ತಪ್ಪಿದ್ದೇ ಇಲ್ಲ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಫೋನ್ ಕಂಪನಿ ತನ್ನ ಕೇಬಲ್ ಗೆ ತೋಡಿಟ್ಟ ಹೊಂಡಕ್ಕೆ ಮಹಿಳೆಯೊಬ್ಬರು ಬಿದ್ದು ತೀವ್ರ ಗಾಯಗೊಂಡಿದ್ದಾರೆ.


ನಗರದ ಜ್ಯೋತಿ ವೃತ್ತದ ಸೋಜ ಆರ್ಕೇಡ್‌ ಬಳಿ ಈ ಘಟನೆ ನಡೆದಿದೆ. ಕೆಎಂಸಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್‌ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 50ರ ಹರೆಯದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದಿದ್ದಾರೆ. ಸುಮಾರು 6 ಅಡಿ ಆಳದ ಗುಂಡಿಗೆ ಮಹಿಳೆ ಬಿದ್ದಿದ್ದರು. ತೀವ್ರವಾದ ಏಟು ತಗಲಿದ ಮಹಿಳೆ ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ. ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಹೊಂಡದಿಂದ ಮೇಲೆತ್ತಿದ್ದಾರೆ.


ಪೈಪ್, ಕೇಬಲ್ ಮುಂತಾದ ಕಾಮಗಾರಿಯ ನೆಪದಲ್ಲಿ ಹೊಂಡ ತೋಡಿಟ್ಟು ಅದಕ್ಕೆ ಯಾವುದೇ ಗಾರ್ಡ್ ಹಾಕದೆ ತಿಂಗಳುಗಟ್ಟಲೆ ಇಡುವುದು ಇದು ಮೊದಲ ಬಾರಿಯೇನಲ್ಲ. ಪಾಲಿಕೆಯ 60 ವಾರ್ಡ್ ಗಳ ಪೈಕಿ ಯಾವುದಾದರೊಂದು ವಾರ್ಡ್ ನಲ್ಲಿ ಇಂತಹ ಮೃತ್ಯುಕೂಪ ಇದ್ದೇ ಇರುತ್ತದೆ. ಇದೀಗ ಏರ್ ಟೆಲ್ ಕಂಪನಿಯು ತನ್ನ ಕೇಬಲ್‌ ಕಾಮಗಾರಿಗೆ ಪಾಲಿಕೆಯ ಪರ್ಮಿಷನ್ ಇಲ್ಲದೆ ಸೋಜ ಆರ್ಕೇಡ್‌ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಅಗೆಯುವ ಕೆಲಸ ಮಾಡುತ್ತಿದೆ.

ತೋಡಿಟ್ಡ ಹೊಂಡವನ್ನು ಮುಚ್ಚದೇ ಹಾಗೇ ಬಿಟ್ಟಿರುವುದರಿಂದ ಮಹಿಳೆ ಯೊಬ್ಬರು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ.
ಮಹಿಳೆ ಕವುಚಿಕೊಂಡು ಬಿದ್ದಿದ್ದು,ತಲೆಯ ಭಾಗದ ಗುಂಡಿಯ ಒಳಗೆ ಬಿದ್ದಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳುತ್ತಾರೆ. ಮಹಿಳೆಯ
ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರೊಬ್ಬರನ್ನು ರಿಪೋರ್ಟರ್ ಕರ್ನಾಟಕ ಸಂಪರ್ಕಿಸಿದಾಗ, ಏರ್ ಟೆಲ್ ಕಂಪನಿಯವರು ಈ ಹೊಂಡ ತೋಡಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದೀಗ ಹೊಂಡವನ್ನು ಮುಚ್ಚಲಾಗಿದೆ. ಸಂತ್ರಸ್ತ ಮಹಿಳೆ ಈ ಕುರಿತು ದೂರು ನೀಡಿದರೆ, ಅವರಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು