3:24 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಆತ್ಮನಿರ್ಭರತೆ: ಭಾರತದಲ್ಲಿ ವರ್ಷಕ್ಕೆ 5 ಮಿಲಿಯನ್‌ ಎಲೆಕ್ಟ್ರಿಕ್‌ ಬೈಕ್ ಉತ್ಪಾದನೆ ಮಾಡಲಿದೆ ಹೀರೋ ಎಲೆಕ್ಟ್ರಿಕ್‌ !

14/03/2022, 11:52

ಹೊಸದಿಲ್ಲಿ(reporterkarnataka.com): ದೇಶದಲ್ಲಿ ವಿದ್ಯತ್‌ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾದ ಹಾಗೆ ವಾಹನಾ ತಯಾರಿಕಾ ಸಂಸ್ಥೆಗಳು ಕೂಡ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ.

ಕೇಂದ್ರ ಸರ್ಕಾರ ಕೂಡ ದೇಶದಲ್ಲಿ ಆತ್ಮನಿರ್ಭರತೆ ಹೆಚ್ಚಿಸಲು ಮೇಡ್‌ ಇನ್‌ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಎರಡೂ ಯೋಜನೆಗಳಿಗೆ ಸಾಥ್‌ ನೀಡುವಂತೆ ಇದೆ ಹೀರೋ ಎಲೆಕ್ಟ್ರಿಕ್‌ ನ ಕಾರ್ಯವೈಕರಿ. ಇದೀಗ ಹೀರೋ ಎಲೆಕ್ಟ್ರಿಕ್‌ ಭಾರತದಲ್ಲಿ ವಾರ್ಷಿಕವಾಗಿ 5 ಮಿಲಿಯನ್‌ ಎಲೆಕ್ಟ್ರಿಕ್‌ ಬೈಕ್‌ ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು ತೀರ್ಮಾನಿಸಿದೆ.

ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಸಂಸ್ಥೆಗೆ ಬರೋಬ್ಬರಿ 1,500 ಕೋಟಿ ರೂ. 2,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಎರಡು ಗ್ರೀನ್‌ ಫೀಲ್ಡ್‌ ಕಾರ್ಖಾನೆಗಳನ್ನು ಸ್ಥಾಪಿಸಲಿದೆ. 2025 ರ ವೇಳೆಗೆ ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯ ಶೇ.30ರಷ್ಟು ಕೇವಲ ವಿದ್ಯುತ್‌ ಚಾಲಿತ ವಾಹನಗಳಿಂದ ಕೂಡಿರುತ್ತದೆ ಎಂದು ಹೀರೋ ಎಲೆಕ್ಟ್ರಿಕ್‌ ನ ಎಂಡಿ ನವೀನ್‌ ಮುಂಜಾಲ್‌ ತಿಳಿಸಿದ್ದಾರೆ.

ಮುಂದಿನ ಹಲವು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ವಿಶ್ವಾಸವಿದೆ ಎಂದು ಮುಂಜಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು