6:58 PM Sunday4 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಅಥಣಿ: ಗೃಹ ಸಚಿವ ಡಾ. ಪರಮೇಶ್ವರ್, ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

02/06/2024, 22:18

ಸಂತೋಷ್ ಹನಮಂತ ಹೊಸಟ್ಟಿ ಬೆಳಗಾವಿ

info.reporterkarnataka@gmail.com

ವಾಲ್ಮೀಕಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಹಾಗೂ ಚನ್ನಗಿರಿ ಪೋಲೀಸ್ ಠಾಣೆಯ ಮೇಲೆ ಸಮಾಜಘಾತುಕರು ಕಲ್ಲು ತೂರಾಟ ನಡೆಸಿದ ಘಟನೆಯು ರಾಜ್ಯ ಸರಕಾರದ ವೈಫಲ್ಯದ ಫಲ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಅಥಣಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವಾಲ್ಮೀಕಿ ನಿಗಮದ ಅಧೀಕ್ಷಕ ಶಿವಮೊಗ್ಗದ ಪಿ. ಚಂದ್ರಶೇಖರನ್ ಇತ್ತೀಚೆಗೆ ನೇಣಿಗೆ ಶರಣಾಗಿದ್ದಾರೆ. ವಾಲ್ಮೀಕ ನಿಗಮದ ವ್ಯವಸ್ಥಾಪಕ ಮತ್ತು ಹಿರಿಯ ಅಧಿಕಾರಿಗಳು ಅವರಿಗೆ ಕಿರುಕುಳ ಕೊಟ್ಟು ಸುಮಾರು 184 ಕೋಟಿ ರೂಪಾಯಿಗಳನ್ನು ಕಾನೂನು ಬಾಹೀರವಾಗಿ ಪರಭಾರೆ ಮಾಡಿದ್ದರಿಂದ ಅವರುಗಳ ಹೆಸರುಗಳನ್ನು ಡೆತ್‌ನೋಟನಲ್ಲಿ ಬರೆದಿಟ್ಟು ಅವರು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಹಾಗೆ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಪೋಲೀಸ್ ಠಾಣೆಯ ಮೇಲೆ ಸಮಾಜ ಘಾತುಕರು ಕಲ್ಲು ತೂರಾಟ ಮಾಡಿದ್ದಾರೆ. ಒಬ್ಬ ಮಟ್ಕಾ ಬುಕ್ಕಿಯು ಹೃದಯಾಘಾತದಿಂದ ಪೋಲೀಸ ಠಾಣೆಯಲ್ಲಿ ಮೃತಪಟ್ಟಿದ್ದನೆನ್ನಲಾಗಿದೆ. ಈ ಎರಡೂ ಘಟನೆಗಳು ಕಾಂಗ್ರೆಸ್ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದನ್ನು ತೋರಿಸುತ್ತದೆ. ಕಾರಣ ಗೃಹ ಸಚಿವರು ಮತ್ತು ವಾಲ್ಮೀಕಿ ನಿಗಮದ ಹೊಣೆ ಹೊತ್ತ ನಾಗೇಂದ್ರ‌ ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣಗಳನ್ನು ಕಾನೂನಿನ ಅನ್ವಯ ತನಿಖೆ ನಡೆಸಬೇಕು.ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಡಾ.ರವಿ ಸಂಕ, ಶಿವ ಪ್ರಸನ್ನ (ಪುಟ್ಟು) ಹಿರೇಮಠ್,ಪ್ರಧಾನ ಕಾರ್ಯದರ್ಶಿ ಸರಸ್ವತಿ ಮ. ನೇಮಗೌಡ.ತಾಲೂಕಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶಕುಂತಲಾ ಘರ್ಗೆ,ಶಿವಲೀಲಾ ಪಟ್ಟಣಶೆಟ್ಟಿ,ಸಿದ್ದಪ್ಪ ಮುದುಕನ್ನವರ್,ಗಿರೀಶ್ ಬಂದೋಲಿ ಬುಟಾಳಿ,ಉಮೇಶ್ ಬಂಟೊಡ್ಕರ್,ರವಿ ಪೂಜಾರಿ,ಸಿದ್ದು ಮಾಳಿ,ಸಂಪತ್ ಕುಮಾರ್ ಶೆಟ್ಟಿ ರಾಜೇಂದ್ರ ಐಹೊಳೆ,ಅನಿಲ್ ಭಜಂತ್ರಿ, ವಿನಾಯಕ ಪಾಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು