6:05 AM Sunday7 - June 2026
ಬ್ರೇಕಿಂಗ್ ನ್ಯೂಸ್
Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ…

ಇತ್ತೀಚಿನ ಸುದ್ದಿ

ಅಂತರಗಂಗೆಯಲ್ಲಿ ಊಟಕನೂರ ಶ್ರೀಗಳ ಜಾತ್ರಾ ಮಹೋತ್ಸವ; ಮಹಿಳೆಯರಿಂದ ಮಂಗಳಾರತಿ

26/10/2021, 12:17

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಹಿರೇ ಅಂತರಗಂಗಿ ಗ್ರಾಮದ ಪ್ರತಿವರ್ಷದಂತೆ ಈ ವರ್ಷ ಉಟಕನೂರು ದೇಶಿಕೇಂದ್ರ ಮರಿ ಬಸವಲಿಂಗ ಶಿವಾಚಾರ್ಯರ ಆಶೀರ್ವಾದ ಮತ್ತು ನೇತೃತ್ವದಲ್ಲಿ ಮಸ್ಕಿ ಗಚ್ಚಿನ ಹಿರೇಮಠ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಆಶೀರ್ವಾದದಿಂದ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಪೂಜೆ ಅಭಿಷೇಕದೊಂದಿಗೆ ಜಾತ್ರಾ ಮಹೋತ್ಸವ ನಡೆಯಿತು.

ಈ ವರ್ಷವೂ ಪೂಜ್ಯರ ಸಮ್ಮುಖದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಭಕ್ತರು ತಮ್ಮ ಹರಕೆಗಳು ತೀರಿಸುತ್ತಾ ಉರುಳುಸೇವೆ, ಭಜನೆ ಮುಂತಾದವುಗಳನ್ನು ನೆರವೇರಿಸಿದರು.

ಸಂಜೆ ಜಂಗಮ ಸ್ವಾಮೀಜಿಗಳಿಂದ ಕಳಸ ಕನ್ನಡಿ ವಾದ್ಯಗಳೊಂದಿಗೆ ಜೈಕಾರ ಘೋಷ ಕೂಗುತ್ತಾ ಶ್ರೀಗಳ ಉತ್ಸವ ಅತಿ ಸರಳ ರೀತಿಯಲ್ಲಿ ಜರುಗಿತು. ಯಾವುದೇ ಕಿರಿಕಿರಿಯಿಲ್ಲದೆ ಭಜನೆ ಮೂಲಕ ತಾತನ ಜಾತ್ರಾ ಮಹೋತ್ಸವ ನಡೆಯಿತು. ರಾತ್ರಿ ಮಹಿಳೆಯರಿಂದ ಕಳಸ ಕನ್ನಡ ಮಂಗಳಾರತಿ ಜರುಗಿತು. ಈ ಕಾರ್ಯಕ್ರಮಕ್ಕೆ ಮ್ಯಾದರಾಳ ನಾಗರಬೆಂಚಿ ಮೆದಿಕಿನಾಳ ತಾಂಡ ಚೆನ್ನಮ್ಮನ ಹಟ್ಟಿ ಗೊಲ್ಲರಹಟ್ಟಿ ಗ್ರಾಮದಿಂದ ಭಕ್ತರು ಆಗಮಿಸಿದ್ದರು. ತಾತನ ಕೃಪೆಗೆ ಪಾತ್ರರಾಗಿ ಪುನೀತರಾದರು. 

ಇತ್ತೀಚಿನ ಸುದ್ದಿ

ಜಾಹೀರಾತು