6:54 PM Saturday18 - April 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ… ಪುತ್ರನ ಮೇಲಿನ ಹಲ್ಲೆ ಕೇಸ್ ಕೈಬಿಡಿ: ಅನಂತ ಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ… ಕೋಡಪದವಿನಲ್ಲಿ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದ ವ್ಯಕ್ತಿಗೂ… Chikkamagaluru | ಬಣಕಲ್: ಚಾಲಕನ ನಿಯಂತ್ರಣ ತಪ್ಪಿ ಐಟ್ವೆಂಟಿ ಕಾರು ವಿದ್ಯುತ್ ಕಂಬಕ್ಕೆ… ಕೊಟ್ಟಿಗೆಹಾರ-ಹೊರನಾಡು–ಶೃಂಗೇರಿ ರಸ್ತೆಯಲ್ಲಿ ಟ್ಯಾಕ್ಟರ್ ಪಲ್ಟಿ: ಅರ್ಧ ಗಂಟೆ ಸಂಚಾರ ಸ್ಥಗಿತ ಮಂಗಳೂರು-ಚೆನ್ನೈ ಎಗ್ಮೋರ್ ವಿಶೇಷ ರೈಲು ಓಡಾಟ ವಿಸ್ತರಣೆ: ಎಲ್ಲೆಲ್ಲಿ ನಿಲುಗಡೆ ಇದೆ?

ಇತ್ತೀಚಿನ ಸುದ್ದಿ

ಬಜ್ಜೋಡಿ ಇನ್‌ಫೆಂಟ್‌ ಮೇರಿ ಚರ್ಚ್‌ನ ವಾರ್ಷಿಕ ಮಹಾ ಉತ್ಸವ: ಸಂಭ್ರಮದ ಬಲಿ ಪೂಜೆ, ದಾನಿಗಳಿಗೆ ಗೌರವ

13/02/2026, 14:36

ಮಂಗಳೂರು(reporterkarnataka.com): ನಗರದ ಬಜ್ಜೋಡಿಯ ಇನ್‌ಫೆಂಟ್‌ ಮೇರಿ ಚರ್ಚ್‌ನ ವಾರ್ಷಿಕ ಮಹಾ ಉತ್ಸವವನ್ನು ಫೆಬ್ರವರಿ 8 ರಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಬೆಳಿಗ್ಗೆ ಭಕ್ತ ಜನರು ಒಎಸ್ಎಸ್ ಕಾನ್ವೆಂಟ್‌ನಲ್ಲಿ ಒಟ್ಟುಸೇರಿ ಇನ್ಫೆಂಟ್ ಮೇರಿಯ ಪ್ರತಿಮೆಯನ್ನು ಆಶೀರ್ವದಿಸಿ ಪ್ರಾರ್ಥನಾ ಸೇವೆ ನಡೆಯಿತು. ಬಳಿಕ ಪ್ರತಿಮೆಯನ್ನು ಬ್ಯಾಂಡ್‌ ವಾದ್ಯದೊಂದಿಗೆ ಚರ್ಚ್‌ಗೆ ಭವ್ಯ ಮೆರವಣಿಗೆ ಕೊಂಡೊಯ್ಯಲಾಯಿತು.
ಚರ್ಚ್‌ನಲ್ಲಿ ಮೊದಲಿಗೆ ದಾನಿಗಳನ್ನು ಮೊಂಬತ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾ. ಡಾ. ಪ್ರವೀಣ್ ಲಿಯೋ ಲಸ್ರಾದೊ ನೇತೃತ್ವದಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಿತು. ವಂದನೀಯ ಫಾ. ಡಾ. ಪ್ರವೀಣ್ ಲಿಯೋ ಲಸ್ರಾದೊ ಅವರು ತಮ್ಮ ಧರ್ಮೋಪದೇಶದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ನೀಡ ಬೇಕು ಮತ್ತು ಹೇಗೆ ಬೆಳೆಸ ಬೇಕು ಎಂಬುದನ್ನು ವಿವರಿಸಿದರು. ಮಕ್ಕಳನ್ನು ನಾವು ಪ್ರೀತಿಸ ಬೇಕು, ಆದರೆ ಅವರನ್ನು ಮುದ್ದಿಸ ಬಾರದು. ಅಗತ್ಯವಿದ್ದಾಗ ನಾವು ಅವರನ್ನು ತಿದ್ದ ಬೇಕು. ಹಾಗೆಯೇ ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸ ಬೇಕು ಮತ್ತು ವಿಧೇಯರಾಗಿ ನಡೆಯ ಬೇಕು. ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳ ಬೇಕು. ಇದರಿಂದ ಅವರು ಭಗವಂತನಿಂದ ಹೇರಳವಾದ ಅನುಗ್ರಹ ಮತ್ತು ಆಶೀರ್ವಾದಗಳನ್ನು ಪಡೆಯುತ್ತಾರೆ ಎಂದು ಹೇಳಿದರು.
ಬಲಿ ಪೂಜೆಯಲ್ಲಿ 20 ಮಂದಿ ಧರ್ಮಗುರುಗಳು ಮತ್ತು ಅಪಾರ ಭಕ್ತಾದಿಗಳು ಭಾಗವಹಿಸಿದ್ದರು. ಕೊಡುಗೆ ನೀಡಿದವರನ್ನು ಸನ್ಮಾನಿಸಲಾಯಿತು.
ಬಲಿ ಪೂಜೆಯ ಬಳಿಕ ವಿವಿಧ ಮಳಿಗೆಗಳಲ್ಲಿ ಆಹಾರ ಪದಾರ್ಥಗಳೊಂದಿಗೆ ಫೆನ್ಸಿ ಉತ್ಸವ ನಡೆಯಿತು. ವಿವಿಧ ಆಟಗಳನ್ನು ನಡೆಸಲಾಯಿತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮತ್ತು ಬೆಂಗಳೂರಿನ ಅಲ್ಪಸಂಖ್ಯಾತ ನಿಗಮದ ನಿರ್ದೇಶಕ ಮೆಲ್ವಿನ್ ಲಸ್ರಾದೊ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೃತ್ಯ, ಕಿರುನಾಟಕ ಮತ್ತು ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಕಳೆದ ವರ್ಷಗಳಲ್ಲಿ ಸೇವೆ ಸಲ್ಲಿಸಿದ ವಾರ್ಡ್ ಗಳ ಗುರಿಕಾರರನ್ನು ಮತ್ತು ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಚರ್ಚ್ ನ ಮಾಜಿ ಉಪಾಧ್ಯಕ್ಷ ಪ್ರಕಾಶ್ ಸಲ್ದಾನ್ಹಾ ಮತ್ತು ಕಾರ್ಯದರ್ಶಿ ಎಲಿಜಬೆತ್ ಪಿರೇರಾ ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು. ಚರ್ಚ್‌ನ ಪೋಷಕಿ ಇನ್‌ ಫೆಂಟ್ ಮೇರಿ ಅವರಿಗೆ ಇಡೀ ದಿನ ಗೌರವ ಸಲ್ಲಿಸಲಾಯಿತು. ಚರ್ಚ್ ಧರ್ಮ ಗುರು ವಂದನೀಯ ಫಾ. ಡೊಮಿನಿಕ್ ವಾಸ್ ವಂದನಾರ್ಪಣೆ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು