8:19 PM Sunday2 - August 2026
ಬ್ರೇಕಿಂಗ್ ನ್ಯೂಸ್
ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ…

ಇತ್ತೀಚಿನ ಸುದ್ದಿ

ಅನಾವಶ್ಯಕ ಓಡಾಡಿದರೆ ಅರೆಸ್ಟ್ ಗ್ಯಾರಂಟಿ:ರಾಜ್ಯದಲ್ಲಿ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ವಾಹನಗಳ ಸೀಜ್ 

23/05/2021, 15:16

ಬೆಂಗಳೂರು(reporterkarnataka news): ಕೊರೊನಾ ನಿಯಂತ್ರಣಕ್ಕೆ ಎರಡನೇ ಲಾಕ್ ಡೌನ್ ನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ರಾಜ್ಯ ಸರಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅನಾವಶ್ಯಕ ಓಡಾಟ ನಡೆಸಿದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಇಷ್ಟೇ ಅಲ್ಲ ಕಾರು ಮಾಲೀಕರ ಬಂಧನ ಕೂಡ ನಡೆಸಲಾಗುತ್ತಿದೆ. ಇದೀಗ ಒಂದೇ ದಿನ ರಾಜ್ಯದಲ್ಲಿ 2000ಕ್ಕೂ ಹೆಚ್ಚು ವಾಹನ ಸೀಜ್ ಮಾಡಿ 100ಕ್ಕೂ ಹೆಚ್ಚು ಮಂದಿ ಬಂಧಿಸಲಾಗಿದೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಭಾನುವಾರ ಸಮಯ ಮೀರಿ ಬೆಂನ್ಜ್ ಕಾರಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರು ಕಾರು ಸೀಜ್ ಮಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ತಾನು ಮಹಿಳಾ ಆಯೋಗದ ಅಧ್ಯಕ್ಷೆಗೆ ಕರೆ ಮಾಡುವುದಾಗಿ ಹೇಳಿ, ಕರೆಯನ್ನು ಪೊಲೀಸರಿಗೂ ನೀಡಿದರು. ಮಹಿಳಾ ಆಯೋಗದ ಅಧ್ಯಕ್ಷೆ ಎಂದು ಹೇಳಿಕೊಂಡು ಮಾತನಾಡಿದರು ಕಾರು ಬಿಡುವಂತೆ ಪೊಲೀಸರಿಗೆ ಸೂಚಿಸಿದರು. ಆದರೆ ಪೊಲೀಸರು ಇದಕ್ಕೆ ಕ್ಯಾರೇ ಮಾಡದೆ ಇದು ಸರಕಾರದ ನಿಯಮ ಎಂದು ಕಾರನ್ನು ಸೀಜ್ ಮಾಡಿಯೇ ಬಿಟ್ಟಿತು. ಇನ್ನೊಂದು ಪ್ರಕರಣದಲ್ಲಿ ತಿಥಿ ಪೂಜೆಗೆ ತೆರಳಿದ್ದ ಅರ್ಚಕರನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಅರ್ಚಕರು ತಾವು ತಿಥಿ ಪೂಜೆ ಮುಗಿಸಿಕೊಂಡು ಬರುತ್ತಿರುವುದಾಗಿ ಹೇಳಿದರೆ,  ಕೊರೊನಾದಿಂದ ಜನರು ಸಾಯುತ್ತಿದ್ದಾರೆ. ನಿಮ್ಮದ್ದೇನು ತಿಥಿ ಪೂಜೆ ಎಂದು ಪ್ರಶ್ನಿಸಿ ಪೊಲೀಸರು ವಾಹನ ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ

ಕೊರೊನಾ ಪಾಸಿಟಿವ್ ಬಂದವರು ಹೊರಗೆ ಓಡಾಡಿದರೆ ಪೊಲೀಸರು ಅವರ ಮೇಲೆ ಕೇಸು ಹಾಕುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೆಲ್ಲ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು