9:02 PM Tuesday13 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ ಸರ್ವಜ್ಞ ಪೀಠ ಆಲಂಕಾರ

16/01/2026, 00:49

ಉಡುಪಿ(reporterkarnatata.com): ಶ್ರೀ ಶೀರೂರು ಮಠ ಪರ್ಯಾಯ ಮಹೋತ್ಸವದ ಶೋಭಾ ಯಾತ್ರೆ ಜನವರಿ 18 ಭಾನುವಾರ ಬೆಳಿಗ್ಗೆ 2 ಗಂಟೆಯಿಂದ ಆರಂಭವಾಗಲಿದ್ದು, ಕಲ್ಪನಾ ಜಂಕ್ಷನ್ ಮೂಲಕ ರಥ ಬೀದಿಗೆ ಸಾಗಲಿದೆ. ಸುಮಾರು 2 ತಾಸು ಮೆರವಣಿಗೆ ಸಂಚರಿಸಲಿದೆ. ಪರ್ಯಾಯ ಮೆರವಣಿಗೆಯಲ್ಲಿ ಸುಮಾರು 2ರಿಂದ 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ. ಇದರಲ್ಲಿ ಶ್ರೀ ಮಧ್ವ ವಾದಿರಾಜ ಗುರುವರ್ಯರು ಶಿರೂರು ಮಠದ ಯತಿವರ್ಯರ ಪರಂಪರೆ ಪೌರಾಣಿಕ ಚಿತ್ರಗಳು ಎದ್ದು ಕಾಣಲಿದ್ದು, ರಾಷ್ಟ್ರಾದ್ಯಂತ ಬಂದಂತಹ ಸಾಂಸ್ಕೃತಿಕ ತಂಡದಿಂದ ಪ್ರದರ್ಶನವನ್ನು ನೀಡಲಿದೆ. ಸ್ಥಳೀಯ ಕಲಾತಂಡಗಳು ಭಜನಾ ತಂಡಗಳು ಖಾಲಿಯೇನು ತಂಡಗಳು ಈ ಶೋಭಾ ಯಾತ್ರೆಯಲ್ಲಿ ಕಾಣಬಹುದಾಗಿದೆ. ಮುಂದೆ ಶ್ರೀ ಕೃಷ್ಣ ಮಠದಲ್ಲಿ ದೇವತಾ ಕಾರ್ಯಗಳು ನಡೆದು ಶ್ರೀಗಳವರು ಸರ್ವಜ್ಞ ಪೀಠವನ್ನು ಆಲಂಕರಿಸಲಿದ್ದಾರೆ.
ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳು ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ.
ಪರ್ಯಾಯ ಮಹೋತ್ಸವದ ಪ್ರಯುಕ್ತ ನಗರದಲ್ಲಿ ದೀಪಾಲಂಕಾರ ಉದ್ಘಾಟನೆ ಹಾಗೂ ಶ್ರೀ ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ ಸಮಾರಂಭ ನಡೆದಿದೆ. ವಿದ್ಯುತ್ ದೀಪ ಅಲಂಕಾರಕ್ಕೆ 50 ಲಕ್ಷ ಬಿಡುಗಡೆಯಾಗಿದ್ದು ಈಗಾಗಲೇ ದೀಪಾಲಂಕಾರ ಕಾರ್ಯ ಪೂರ್ಣಗೊಂಡಿದೆ.
ಅನ್ನ ಸಂತರ್ಪಣೆ ಪರ್ಯಾಯ ಮುನ್ನಾ ದಿನ ಅಂದರೆ 17ರಂದು ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ ನಿತ್ಯಾನಂದ ಮಂದಿರ ಬಸ್ಸು ನಿಲ್ದಾಣ ಸಮೀಪ ಬೋರ್ಡ್ ಹೈಸ್ಕೂಲ್ ಮೂರು ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾ ತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ ಸುಮಾರು ಒಂದು ಲಕ್ಷದಷ್ಟು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ದಿನಾಂಕ ಜನವರಿ 17 ರಿಂದ 22 ರವರೆಗೆ ಪ್ರತಿದಿನ ವಿಶೇಷ ಅನ್ನ ಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ದರ್ಬಾರ್ ಸಭೆ ನೂತನವಾಗಿ ನಿರ್ಮಾಣಗೊಂಡಿರುವ ರಾಜಾಂಗಣದ ವೇದಿಕೆಯನ್ನು ಹೂ ಸಿಂಗಾರಗಳಿಂದ ಎಲ್ಲಾ ಮಠದ ಮಠಾಧೀಶರೊಂದಿಗೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ ಮುಂಜಾನೆ 5:30ಕ್ಕೆ ಆರಂಭವಾಗಲಿರುವ ದರ್ಬಾರ್ ಸಭೆ ಸುಮಾರು 9 ಗಂಟೆಯವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀ ಶ್ರೀ ವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ ನಾಡಿನ ಗಣ್ಯರು ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ವೇದ ವಿದ್ವಾಂಸರಿಂದ ಪ್ರವಚನ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯದ ಸಚಿವರು ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ಭಾಗವಹಿಸಲಿದ್ದು, ದಿನಾಂಕ 18ರಿಂದ ಪ್ರತಿದಿನ ಸಂಜೆ ಹತ್ತು ದಿನಗಳ ಕಾಲ ಸಭಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಈ ಸಭೆಯಲ್ಲಿ ಕೂಡ ಅನೇಕ ಗಣ್ಯರಿಗೆ ಶ್ರೀ ಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮಠ ಶ್ರೀ ಕೃಷ್ಣ ಮಠ ಮಠದ ರಾಜಾಂಗಣ ಮತ್ತು ರಥ ಬೀದಿ ಸುತ್ತಮುತ್ತ ಹೂ ಮತ್ತು ವಿದ್ಯುತ್ ದೀಪದಿಂದ ಅಲಂಕರಿಸಲಾಗುವುದು. ಶಿರೂರು ಮಠದ ಪರ್ಯಾಯ ಮಹೋತ್ಸವದ ಈ ಸಂದರ್ಭದಲ್ಲಿ ರಾಯಚೂರು ಭಕ್ತ ವೃಂದದವರಿಂದ 250 ಕ್ವಿಂಟಲ್ ಅಕ್ಕಿ ಸುಮಾರು 12 ಲಕ್ಷದ ಮೊತ್ತದ ಅಕ್ಕಿಯನ್ನು ಪರ್ಯಾಯದ ಅನ್ನಸಂತರ್ಪಣೆಗಾಗಿ ಸಮರ್ಪಣೆಯಾಗಿದೆ.


ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪೂರ್ಣವಾಗಿ ಸಜ್ಜುಗೊಂಡಿದೆ. ಶ್ರೀಗಳ ಪುರ ಪ್ರವೇಶ ಆದ್ದೂರಿಯಾಗಿ ನಡೆದು ಚರಿತ್ರೆ ನಿರ್ಮಾಣವಾಗಿದ್ದು ದಿನಾಂಕ 10 ಜನವರಿಯಿಂದ ಆರಂಭವಾದ ಹಸಿರು ಹೊರೆ ಕಾಣಿಕೆ ಮಠಕ್ಕೆ ಹರಿದು ಬರುತ್ತಿದ್ದು, ಜನವರಿ 17ರ ವರೆಗೂ ಹೊರೆ ಕಾಣಿಕೆ ಹರಿದು ಬರಲಿದೆ.
ಈ ಬಾರಿಯ ಹಸಿರು ಹೊರೆ ಕಾಣಿಕೆಯಲ್ಲಿ ಸಂಗ್ರಹವಾದ ವಸ್ತುಗಳು ದಾಖಲೆ ನಿರ್ಮಾಣವಾಗಲಿದ್ದು ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಗೆ ಪೂರಕವಾಗಿ ಸಂಗ್ರಹ ನಡೆಯುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು