6:22 PM Thursday18 - June 2026
ಬ್ರೇಕಿಂಗ್ ನ್ಯೂಸ್
ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು

ಇತ್ತೀಚಿನ ಸುದ್ದಿ

ಐಶ್ವರ್ಯವಿದ್ದರೆ ಸಾಲದು ಅದರ ಸದ್ಬಳಕೆಯಾಗಬೇಕು, ಜನಸೇವೆ ಜನ ಮಾನಸದಲ್ಲಿ ಉಳಿಯಬೇಕು: ರಾಜೇಶ್ ಶೆಣೈ

12/11/2021, 07:50

ಕಾರ್ಕಳ(reporterkarnataka.com): ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮನುಷ್ಯನಿಗೆ ಇರಬೇಕೇ ಹೊರತು ಆತನಲ್ಲಿ ಐಶ್ವರ್ಯ ಮಾತ್ರ ಇದ್ದರೇ ಪ್ರಯೋಜನ ಇಲ್ಲ. ಅದರ ಸದ್ಬಳಕೆ ಆಗಬೇಕು. ಆಗ ಮಾತ್ರ ಆ ಐಶ್ವರ್ಯಕ್ಕೆ ಬೆಲೆ ಬರುತ್ತದೆ. ನಾವು ಮಾಡುವ ಸಮಾಜ ಸೇವೆ ಸಮಾಜ ಮುಖಿಯಾಗಿ ಜನ ಮಾನಸದಲ್ಲಿ ಉಳಿಯಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಹೇಳಿದರು.

ಇವರು ಕಾರ್ಕಳದ ಎಸ್ ವಿ ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಆಗುಹೋಗುಗಳ ಬಗ್ಗೆ ನಾವು ಸ್ಪಂದಿಸುವ ಗುಣಗಳನ್ನು ನಾವು ಹೊಂದಬೇಕು .ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುವುದರಲ್ಲಿ ನಮ್ಮ ಸಂತೋಷ ಕಾಣುವಂತಾಗಬೇಕು ಆಗ ಖಂಡಿತವಾಗಿಯೂ ನಮ್ಮ ಜೇವನ ಸಾರ್ಥಕವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್  ಮಿಥುನ್ ಹೆಗ್ಡೆ ಅವರು, ಕಳೆದ 4 ತಿಂಗಳಲ್ಲಿ  ಅಧ್ಯಕ್ಷ ರಾಜೇಶ್ ಶೆಣೈ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಘಟಕವು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕನ್ನಡ ನಾಡು ನುಡಿ ಜೊತೆಗೆ ಸಮಾಜದ ಬಡಜನತೆ ,ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗದ ಜನರಿಗೆ ಯಾವುದೇ ಪ್ರತಫಲಾಪೇಕ್ಷೆ ಇಲ್ಲದ  ನಿರಂತರ ಒಂದಲ್ಲ ಒಂದು ಸಹಾಯವನ್ನು ನೀಡುತ್ತಿರುವ ರಾಜೇಶ್ ಶೆಣೈ ನಿಜವಾಗಿಯೂ ಅಭಿನಂದನಾರ್ಹರು ಎಂದರು

ಈ ಸಂಧರ್ಭದಲ್ಲಿ ಎಸ್ ವಿ ಟಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜೇಶ್ ಶೆಣೈ ಯವರು ಲಯನ್ಸ್ ಕ್ಲಬ್ ಮುಖಾಂತರ ಕಂಪ್ಯೂಟರ್, ಪ್ರಿಂಟರ್, ಯೂಪಿಎಸ್ ಹಾಗೂ ಸುಮಾರು 300 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.


ವೇದಿಕೆಯಲ್ಲಿ ಎಸ್‌ ವಿ ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಂಡಳಿ ಕಾರ್ಯದರ್ಶಿ ಕೆ ಪಿ ಶೆಣೈ, ಟ್ರಸ್ಟಿ ರವೀಂದ್ರ ಪೈ  ಲಯನ್ಸ್ ವಲಯಾಧ್ಯಕ್ಷ ಸುಭಾಸ್ ಸುವರ್ಣ,ಕೋಶಾಧಿಕಾರಿ ಪ್ರಕಾಶ್ ಪಿಂಟೋ ಡಾ.ರಾಬರ್ಟ್ ಡಿಮೆಲ್ಲೊ ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು