7:43 PM Monday27 - July 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಯಶಸ್ವಿ ಕಾರ್ಯಾಚರಣೆ ಮುಸ್ಲಿಮರು ಮಾತನಾಡಿದ್ರೆ ಟೆರರಿಸ್ಟ್, ಚಿಂತಕರು ಮಾತನಾಡಿದ್ರೆ ನಕ್ಸಲ್, ಹಾಗಾದ್ರೆ ದೇಶ ಭಕ್ತರು ಯಾರು?:… ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000… ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ… ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ: 3… ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ… ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ

ಇತ್ತೀಚಿನ ಸುದ್ದಿ

ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

14/12/2025, 18:38

ಹಾವೇರಿ(reporterkarnataka.com): ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡಿವುದು ಬೇಡ, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ 10% ಮಾತ್ರ ನೀರನ್ನು ಬಳಸಿಕೊಳ್ಳಲು ಯೋಜಿಸಿದ್ದು, ಒಟ್ಟು ನೀರಿನ ಹರಿವಿಗೆ ಯಾವುದೇ ತೊಂದರೆಯಿಲ್ಲ, ದಯವಿಟ್ಟು ಯೋಜನೆಗೆ ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಪರಮ ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೆಡ್ತಿ – ವರದಾ ಕುರಿತು ಚರ್ಚೆ ಮಾಡಿದ್ದಾರೆ. ಬೆಡ್ತಿ ಯೋಜನೆಗೆ ಆಕ್ಷೇಪ ವ್ಯಕ್ರ ಪಡಿಸಿದ್ದಾರೆ. ನಾವು ಆ ಭಾಗದ ಜನರ ಗುರುಗಳ ಭಾವನೆ ಗೌರವಿಸುತ್ತೇವೆ. ತಪ್ಪು ಕಲ್ಪನೆ ಮೇಲೆ ವಿರೋಧ ಮಾಡುವುದು ಬೇಡ ಅನ್ನುವ ಮನವಿಯನ್ನು ಆದರ ಪೂರಕವಾಗಿ ಮಾಡುತ್ತೇನೆ. ಈ ಯೋಜನೆ ಸುಮಾರು 30 ವರ್ಷದಿಂದ ಇದೆ. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಆಥಾರಿಟಿ ಯಿಂದ ಬಂದಿರುವ ಯೋಜನೆ. ದಕ್ಷಿಣ ಭಾರತದ ಪ್ರಮುಖ ಮೂರು ಯೋಜನೆಗಳಲ್ಲಿ ಇದು ಒಂದು. ಈಗಿರುವ ರಾಜಕಾರಣಿಗಳು ಆಗ ಯಾರೂ ರಾಜಕಾರಣದಲ್ಲಿ ಇರಲೇ ಇಲ್ಲ ಎಂದು ಹೇಳಿದರು.

*ಸದ್ಬಳಕೆಗೆ ಯೋಜನೆ:*
ಇದು ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ. ಈಗ ಯೋಜನೆ ಪರಿಷ್ಕರಿಣೆ ಆಗಿದೆ. ಸಣ್ಣ ಬ್ಯಾರೇಜ್ ಮಾಡಿ ಲಿಪ್ಟ್ ಮಾಡಲಾಗುತ್ತದೆ‌ ಯಾವುದೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ನದಿಯ ಕೇವಲ 10 % ರಷ್ಟು ನೀರು ಮಾತ್ರ ತೆಗೆದುಕೊಳ್ಳಬೇಕು ಅನ್ನುವ ಚಿಂತನೆ ಇದೆ. ಹೀಗಾಗಿ ನದಿ ಪಾತ್ರದ ನೀ ರಿನ ಹರಿವಿಗೆ ಯಾವುದೇ ತೊಂದರೆ ಇಲ್ಲ. ಈ ಯೋಜನೆಗೆ ಡಿ ಪಿ ಆರ್ ಆಗಬೇಕು ಪರಿಸರದ ಪರಿಣಾಮಗಳ ಅಧ್ಯಯನ ಆಗಬೇಕು. ಅದರ ಸಾಧಕ ಬಾಧಕ ನೋಡುತ್ತಾರೆ. ಇದೆಲ್ಲ ಪ್ರಕ್ರಿಯೆ ಇದೆ. ದಯವಿಟ್ಟು ಸಹಕಾರ ಮಾಡಬೇಕು. ಯೋಜನೆ ಸಂಪೂರ್ಣ ವಿವರ ಬಂದಾಗ ಪರಿಣಿತರು ತೀರ್ಮಾನ ಮಾಡುತ್ತಾರೆ. ನೀರಿನ ಸಂಪತ್ತು ಸದ್ಬಳಕೆ ಆಗಬೇಕು. ನೀರೇ ಇಲ್ಲದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಇದೆ. ನಾವು ಮಳೆಗಾಲದಲ್ಲಿ ನೀರು ಹಿಡಿದಿಟ್ಟು ಬೇಸಿಗೆಯಲ್ಲಿ ನೀರು ಉಪಯೋಗಿಸ್ತೇವೆ‌ ಬರ ಪ್ರದೇಶಕ್ಕೆ ಈ ನೀರು ಅನುಕೂಲ ಅಗುತ್ತದೆ. ಒಬ್ಬರಿಗೊಬ್ಬರು ಸಹಕಾರ ಕೊಡಬೇಕು. ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಬರ ಪೀಡಿತ ಹಾವೇರಿ ಮತ್ತು ಇತರ ಜಿಲ್ಲೆಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು