9:16 PM Saturday9 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

12/11/2025, 15:17

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ದೆಹಲಿಯ ಕೆಂಪು ಕೋಟೆ ಬಳಿ ನಿನ್ನೆ ನಡೆದ ಕಾರ್ ಬಾಂಬ್ ಪ್ರಕರಣ ಇಡೀ ದೇಶ ಆಲೋಚನೆ ಮಾಡುವ ಪರಿಸ್ಥಿತಿ ಕಳೆದ 10ರಿಂದ 11 ವರ್ಷ ನಿಯಂತ್ರಣಕ್ಕೆ ಬಂದಿದ್ದಂತಹ ಈ ಭಯೋತ್ಪಾದಕ ಕೃತ್ಯಗಳು, ಇವರನ್ನು ಹೀಗೆ ಬಿಡಬಾರದು ಎಂದು ಭಯೋತ್ಪಾದಕರು ಮನಸ್ಸು ಮಾಡಿ ಕೆಂಪು ಕೋಟೆ ಬಳಿ ಬಾಂಬ್ ಪ್ರಯತ್ನ ನಡೆದಿದೆ ಎನಿಸುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು ಇಡೀ ದೇಶವೇ ಇದನ್ನ ಖಂಡಿಸಬೇಕಿದೆ ಮತ್ತು ಇದರ ವಿರುದ್ಧ ಜನಜಾಗೃತಿ ನಿರ್ಮಾಣ ಆಗಬೇಕಿದೆ. ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂದು ಬಹಳಷ್ಟು ಜನ ಮೊಂಡುವಾದ ಮಾಡುತ್ತಿದ್ದಾರೆ. ಆದರೆ ಭಯೋತ್ಪಾದಕರಾದವರೆಲ್ಲರೂ ಸಹ ಒಂದೇ ಧರ್ಮದವರು ಎನ್ನುವುದು ಚರ್ಚೆಯಾಗಬೇಕು. ಎಲ್ಲಾ ಧರ್ಮದವರು ಇದನ್ನ ಖಂಡಿಸುವ ಅವಶ್ಯಕತೆ ಇದೆ. ಮನುಕುಲದ ನಾಶಕ್ಕೆ ಹೊರಟವರೆ ಹೊರತು ಯಾವ ಧರ್ಮವನ್ನು ಉಳಿಸುವ ಹೋರಾಟ ಇವರದ್ದಲ್ಲ, ಜನರ ರಕ್ತ ಜನರ ಪ್ರಾಣ ಹಿಂಡುವ ದಂಧೆ ಇವರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಘಟನೆಯನ್ನು ರಾಜಕಾರಣದಿಂದ ಯಾವುದೇ ಕಾರಣಕ್ಕೂ ನೋಡಬಾರದು. ಸರಿಯಾದ ರೀತಿಯಲ್ಲಿ ವಿಚಾರಣೆ ನಡೆದು ಇಂತಹವರ ಮೂಲಬೇರನ್ನು ಕೆದಕಬೇಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಎಫ್ಐಆರ್ ಹಾಕಿ ಕೈ ತೊಳೆದುಕೊಳ್ಳುತ್ತಿದ್ದರು. ಮೋದಿಯವರು ಬಂದ ನಂತರ ಸ್ವಲ್ಪ ನಿಯಂತ್ರಣದಲ್ಲಿದೆ. ಪಾಕಿಸ್ತಾನದ ಪ್ರಯತ್ನ ಇದರಲ್ಲಿ ಏನಿದೆ ಎಂದು ಹೊರ ತಂದು ಇಡೀ ವಿಶ್ವಕ್ಕೆ ತೋರಿಸಬೇಕಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು