9:23 AM Tuesday25 - August 2026
ಬ್ರೇಕಿಂಗ್ ನ್ಯೂಸ್
ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು

ಇತ್ತೀಚಿನ ಸುದ್ದಿ

Mangaluru | ರೋಶನಿ ನಿಲಯಲ್ಲಿ ಅಮರ ಮಿಯಾವಾಕಿ ವನ ಉದ್ಘಾಟನೆ

06/08/2025, 23:38

ಮಂಗಳೂರು(reporterkarnataka.com): ಡಾ.ಒಲಿಂಡಾ ಪೆರೇರ ಅವರ ಶತಮಾನೋತ್ಸವ ಅಂಗವಾಗಿ ರೋಶನಿ ನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಆಶ್ರಯದಲ್ಲಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಇನ್‌ಸ್ಟಿಟ್ಯೂಷನ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ರೋಶನಿ ನಿಲಯ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಂಗಳವಾರ ಮಿಯಾವಾಕಿ ವನವನ್ನು ಲೋಕಾರ್ಪಣೆಗೊಳಿಸಲಾಯಿತು.
ಮುಖ್ಯ ಅತಿಥಿ, ಸಿಎಫ್‌ಎಎಲ್‌ನ ಸಂಶೋಧನಾ ನಿರ್ದೇಶಕಿ ಮತ್ತು ಎಎಂಎಆರ್‌ಆರ್‌ ಅಭಿಯಾನದ ಸಂಚಾಲಕಿ ಡಾ.ಸ್ಮಿತಾ ಹೆಗ್ಡೆ ಮಾತನಾಡಿ, ಇಂದು ಪರಿಸರದಲ್ಲಿ ಆಗುತ್ತಿರುವ ಪಲ್ಲಟಗಳು ಹಾಗೂ ಸುಸ್ಥಿರತೆಯನ್ನು ಸಾಧಿಸುವಲ್ಲಿ ನಮ್ಮೆಲ್ಲರ ವೈಯಕ್ತಿಕ ಹಾಗೂ ಸಾಮೂಹಿಕ ಪರಿಸರ ಪೂರಕ ಚಟುವಟಿಕೆಗಳ ಅಗತ್ಯದ ಕುರಿತು ಪ್ರತಿಪಾದಿಸಿ, ನಗರ ಪ್ರದೇಶಗಳಲ್ಲಿ ಹಸಿರು ಸ್ಥಳಗಳನ್ನು ಪುನರುತ್ಪಾದಿಸುವಲ್ಲಿ ಮಿಯಾವಾಕಿ ಅರಣ್ಯಗಳ ಪರಿಣಾಮಕಾರಿ ಅನುಷ್ಠಾನಗಳ ಅಗತ್ಯವನ್ನು ವಿವರಿಸಿದರು. ಪರಿಸರವಾದಿ ಜೀತ್ ಮಿಲನ್ ರೋಶ್‌ ಮಾತನಾಡಿ, ಮಿಯಾವಾಕಿ ಕಾಡುಗಳೆಂಬ ದಟ್ಟವಾದ ಮತ್ತು ವೇಗವಾಗಿ ಬೆಳೆಯುತ್ತಿರುವ ತೋಟಗಾರಿಕೆ ತಂತ್ರವು ನಗರ ಪ್ರದೇಶಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು, ಜೀವವೈವಿಧ್ಯತೆಯನ್ನು ಸುಧಾರಿಸಲು ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳನ್ನು ರಚಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ರೋಶನಿ ನಿಲಯ ನಿವೃತ್ತ ಪ್ರಾಂಶುಪಾಲೆ ಡಾ.ಜಸಿಂತಾ ಡಿಸೋಜ, ಅಮರ ಅಭಿಯಾನದ ಸಹ-ಸಂಚಾಲಕಿ ಅಶ್ವಿನಿ ಭಟ್, ಆರ್‌ಎಎ ಅಧ್ಯಕ್ಷ ಆನಂದ್ ಡಿಸಿಲ್ವ ಮತ್ತು ಹಳೇ ವಿದ್ಯಾರ್ಥಿ ಕಿಶೋರ್ ಅತ್ತಾವರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರೊ.ಸಿಸಿಲಿಯಾ ಫರಿದಾ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು. ರೋಶನಿ ನಿಲಯದ ವಿಸ್ತರಣಾ ಸೇವಾ ಅಧಿಕಾರಿ ಡಾ.ಅನುಸೂಯಾ ಕಾಮತ್ ಸ್ವಾಗತಿಸಿದರು. ಎನ್ನೆಸ್ಸೆಸ್‌ ಕಾರ್ಯಕ್ರಮ ಅಧಿಕಾರಿ ಡಾ.ಪ್ರಶಾಂತ್ ಭಟ್‌ ವಂದಿಸಿದರು. ಬ್ರಿನೆಲ್ಲೆ ಡಿಯೋಲಾ ಫರ್ನಾಂಡಿಸ್ ಕಾರ್ಯ್ರಕಮ ನಿರ್ವಹಿಸಿದರು. ಅತಿಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಮಿಯಾವಾಕಿ ಅರಣ್ಯ ವಿಧಾನ ಬಳಸಿಕೊಂಡು ಸಸಿಗಳನ್ನು ನೆಟ್ಟು ಅಭಿಯಾನದಲ್ಲಿ ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು