6:23 PM Thursday25 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ರಿಲ್ಯಾಕ್ಸ್​ ಮೂಡ್​​ನಲ್ಲಿ ದಸರಾ ಗಜಪಡೆ: ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಆಗಸ್ಟ್ 9ಕ್ಕೆ ಮೈಸೂರು ಅರಮನೆ ಎಂಟ್ರಿ

05/08/2025, 20:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಸೋಮವಾರ ಸಂಜೆ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿವೆ.
*ರಿಲ್ಯಾಕ್ಸ್​ ಮೂಡ್​​ನಲ್ಲಿ ಗಜಪಡೆ:* ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದು, ದಸರಾ ಆನೆಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇನ್ನು ಆಗಸ್ಟ್​ 10ರ ಸಂಜೆ ಗಜಪಡೆ ಅರಮನೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಮಾಹಿತಿ ನೀಡಿದ್ದಾರೆ.
*ಮೊದಲ ಬಾರಿಗೆ ಸಂಜೆ ವೇಳೆ ಗಜಪಡೆಗೆ ಅರಮನೆಗೆ ಸ್ವಾಗತ:* ಸೋಮವಾರ ನಾಗರಹೊಳೆ ಸಮೀಪದ ವೀರನಹೊಸಹಳ್ಳಿಯಿಂದ ಗಜಯಪಣದ ಮೂಲಕ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಮೂದಲ ತಂಡ ಮೈಸೂರಿಗೆ ಆಗಮಿಸಿದ್ದು, ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ತಂಗಿವೆ. ಈ ಆನೆಗಳಿಗೆ ದಸರಾದಲ್ಲಿ ಭಾಗವಹಿಸಿರುವ ಅನುಭವ ಇರುವ ಕಾರಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ.
ಮೊದಲ ಬಾರಿಗೆ ಸಂಜೆ ವೇಳೆ ಅರಮನೆಗೆ ಸ್ವಾಗತ: ಆಗಸ್ಟ್​ 10ರಂದು ಸಂಜೆ 6:40 ರಿಂದ 7:20ರ ಶುಭ ಮಕರ ಗೋಧೋಳಿ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಗಜಪಡೆಯನ್ನು ಅರಮನೆಗೆ ಸಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನು ಅರಮನೆಗೆ ಸ್ವಾಗತ ಮಾಡುತ್ತಿರುವುದು ವಿಶೇಷ ಎನ್ನಲಾಗಿದೆ.
*ಗಜಪಡೆಗೆ ಸ್ನಾನ ಮಾಡಿಸಿದ ಮಾವುತರು, ಕಾವಾಡಿಗರು:* ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಗೆ ಮಾವುತರು ಹಾಗೂ ಕಾವಾಡಿಗರು ಸ್ನಾನ ಮಾಡಿಸಿದರು. ಆನೆಗಳಿಗೆ ಭತ್ತ, ಹಸಿ ಹುಲ್ಲನ್ನು ಮೇವಾಗಿ ನೀಡಲಾಗುತ್ತಿದೆ. ಸದ್ಯ ಗಜಪಡೆ ಹಾಗೂ ಮಾವುತರು, ಕಾವಾಡಿಗರು ಮತ್ತವರ ಕುಟುಂಬಸ್ಥರು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ.
*ದೂರದಿಂದಲೇ ಗಜಪಡೆ ನೋಡಲು ಜನರಿಗೆ ಅವಕಾಶ:* “ಕಾಡಿನಿಂದ ನಾಡಿಗೆ ಆಗಮಿಸಿದ ಗಜಪಡೆಗೆ ಆರೋಗ್ಯ‌ ತಪಾಸಣೆ ಮಾಡಲಾಗಿದ್ದು, ಅವುಗಳ ರಕ್ತ ಪರೀಕ್ಷೆಯನ್ನು ಸಹ ಮಾಡಲಾಗಿದೆ. ಎಲ್ಲ ಆನೆಗಳು ಈ ಹಿಂದೆ ದಸರಾದಲ್ಲಿ ಭಾಗವಹಿಸಿರುವ ಕಾರಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ದೂರದಿಂದಲೇ ಗಜಪಡೆಯನ್ನ ನೋಡಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ.
ಗಜಪಡೆಗೆ ಈ ಎಲ್ಲ ಆಹಾರ ನೀಡಲಾಗುತ್ತೆ: ಗಜಪಡೆಗೆ ಭತ್ತ, ಹುಲ್ಲು ಸೇರಿದಂತೆ ಸಾಮಾನ್ಯ ಆಹಾರವನ್ನ ನೀಡಲಾಗುತ್ತಿದೆ. ಆ.10 ರಂದು ಗಜಪಡೆ ಅರಮನೆ ಪ್ರವೇಶ ಮಾಡುವ ಸಾಧ್ಯತೆ ಇದೆ. ನಂತರ ತಾಲೀಮು ಆರಂಭಿಸಲಾಗುವುದು” ಎಂದು ಮೈಸೂರಿನ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು