12:04 AM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಗಣಪತಿ ಭಟ್ ನೆಲ್ಲಿತೀರ್ಥರಿಗೆ ವಿಪ್ರಭೂಷಣ ಪ್ರಶಸ್ತಿ: 27ರಂದು ಅಶ್ವತ್ಥಪುರದಲ್ಲಿ ಪ್ರದಾನ

25/07/2025, 20:54

ಮಂಗಳೂರು(reporterkarnataka.com): ಅಶ್ವತ್ಥಪುರ ನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್‌ ವತಿಯಿಂದ ನೀಡಲಾಗುವ ವಿಪ್ರಭೂಷಣ ಪ್ರಶಸ್ತಿಗೆ ಈ ಬಾರಿ ವೇ.ಮೂ.ಶ್ರೀ ಗಣಪತಿ ಭಟ್ ನೆಲ್ಲಿತೀರ್ಥ ಆಯ್ಕೆಯಾಗಿದ್ದಾರೆ.
ಶ್ರೀ ಗಣಪತಿ ಭಟ್ ಅವರು
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಸೋಮನಾಥೇಶ್ವರ ಗುಹಾಲಯ ನೆಲ್ಲಿತೀರ್ಥ ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜು. 27ರಂದು ಸಂಜೆ 4 ಗಂಟೆಗೆ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಾವಿತ್ರಿ ಸಭಾ ಸದನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿ ಕೆ.ವೈ.ಲಕ್ಷ್ಮೀ ತಿಳಿಸಿದ್ದಾರೆ.
ಅಶ್ವತ್ಥಪುರ ಕ್ಷೇತ್ರ ಆಡಳಿತ ಮೋಕ್ತೇಸರ ಕೃಷ್ಣಮೂರ್ತಿ ವಿ.ಎ., ಬೆಂಗಳೂರಿನ ಯುವ ಉದ್ಯಮಿ ಹಾಗೂ ಆರ್ಥಿಕ ಸಲಹೆಗಾರ ಶ್ರೀಕಾಂತ್ ಎಂ.ಜಿ., ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಎಲ್. ದಿನೇಶ್ ಕುಮಾರ್ ಭಾಗವಹಿಸುವರು.
*ಗೌರವ ಸನ್ಮಾನ:*
ಇದೇ ಸಂದರ್ಭ ವೇ.ಮೂ.ಪ್ರಭಾಕರ ಭಟ್ ಕಂಚಿಬೈಲು ,ಮಾಯಣ ಗೋಪಾಲಕೃಷ್ಣ ರಾವ್ ಉಡುಪಿ, ಶಂಕರ ರಾವ್ ವರ್ಕು, ಹಾಗೂ ಸದಾಶಿವ ರಾವ್ ನೆಲ್ಲಿಮಾರು ಇವರಿಗೆ ಗೌರವ ಸನ್ಮಾನ ನಡೆಯಲಿದೆ.
*ಯಕ್ಷಗಾನ ಪ್ರದರ್ಶನ:*
ಬಳಿಕ ಭರತ್ ರಾಜ್ ಪರ್ಕಳ ನಿರ್ದೇಶನದಲ್ಲಿ ಸೃಷ್ಟಿ ಕಲಾ ವಿದ್ಯಾಲಯ ಬೆಂಗಳೂರು ತಂಡದಿಂದ ‘ಅಭಿಮನ್ಯು ಕಾಳಗ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು