6:49 AM Thursday23 - April 2026
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ…

ಇತ್ತೀಚಿನ ಸುದ್ದಿ

ಯುವಕರನ್ನು ಜಾಗತಿಕ ಮಟ್ಟದಲ್ಲಿ ಉದ್ಯೋಗಯೋಗ್ಯ ಮಾಡುವುದೇ ಗುರಿ: ಕೈಗಾರಿಕೋದ್ಯಮಗಳೊಂದಿಗಿನ ಸಭೆಯಲ್ಲಿ ಸಚಿವ ಶರಣ್ ಪ್ರಕಾಶ್ ಪಾಟೀಲ್

24/01/2025, 10:26

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗ ಯೋಗ್ಯರನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸ್ಥಳೀಯ ಕೌಶಲ್ಯ, ಜಾಗತಿಕವಾಗಿ ಕೆಲಸ ಮಾಡಲು ನಮ್ಮ ಯುವಕರನ್ನು ಸಜ್ಜು ಮಾಡುವುದೇ ನಮ್ಮ ಮುಖ್ಯ ಗುರಿ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ನಡೆಸಿದ ಸಂವಾದದಲ್ಲಿ ಸಚಿವರು ಈ ವಿಷಯ ತಿಳಿಸಿದರು.
ನಮ್ಮ ಯುವಕರು, ಯುವತಿಯರು ಥಿಯರಿಯಲ್ಲಿ ಸಾಕಷ್ಟು ಶಿಕ್ಷಣ ಪಡೆದಿರುತ್ತಾರೆ. ಆದರೆ ಅವರಿಗೆ ಪ್ರಾಕ್ಟ್ರಿಕಲ್ ತರಬೇತಿ ನೀಡುವ ಕುರಿತು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರಿಂದ ಕೆಲಸಕ್ಕೆ ಅಗತ್ಯವಿರುವಂಥ ಕೌಶಲ್ಯ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
*ಸರ್ಕಾರದಿಂದ ಅನುದಾನ;*
ಒಂದು ವೇಳೆ ಅಗತ್ಯವಿರುವಂಥ ಯುವ ಸಮೂಹಕ್ಕೆ ಕೌಶಲ್ಯ ತರಬೇತಿಯನ್ನು ಉದ್ದಿಮೆಗಳು ನೀಡಿದರೆ ಇದಕ್ಕೆ ಅಗತ್ಯವಿರುವಂಥ ಅನುದಾನವನ್ನು ಸರ್ಕಾರವೇ ಭರಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಉದ್ದಿಮೆಗಳಿಂದ, ಉದ್ಯಮಿಗಳು ಅಗತ್ಯವಿದ್ದರೆ ತರಬೇತಿ ಪಡೆದವರಿಗೆ ಉದ್ಯೋಗ ನೀಡುವ ಬದ್ಧತೆ ತೋರಬೇಕು ಎಂದು ತಿಳಿಸಿದರು.


ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪೂರಕವಾಗಿರುವಂತೆ ಕೌಶಲ್ಯ ತರಬೇತಿಯನ್ನು ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಈಗಾಗಲೇ ಕಲಬುರಗಿ, ಕೊಪ್ಪಳದ ತಳಕಲ್ ಮತ್ತು ಮೈಸೂರಿನ ವರುಣಾದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ. ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ ಎಂಬುದು ನಮ್ಮ ಮೂಲಮಂತ್ರವಾಗಿದೆ ಎಂದು ಶರಣ್ ಪ್ರಕಾಶ್ ತಿಳಿಸಿದರು.

*“ನನ್ನ ವೃತ್ತಿ ನನ್ನ ಆಯ್ಕೆ” ಪುಸ್ತಕ ಬಿಡುಗಡೆ:*
ಇದೇ ವೇಳೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯ್ಕ್ ಅವರ ಕಚೇರಿಯನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟಿಸಿದರು ಹಾಗೂ ಇಲಾಖೆ ವತಿಯಿಂದ ಹೊರತರಲಾಗಿರುವ “ನನ್ನ ವೃತ್ತಿ ನನ್ನ ಆಯ್ಕೆ” ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸಚಿವರು, ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಕಂಪನಿಯನ್ನಾಗಿ ಪರಿವರ್ತನೆ ಮಾಡಲಾಗಿದ್ದು, ಅಗತ್ಯ ನೋಂದಣಿಯನ್ನೂ ಮಾಡಿದ್ದೇವೆ. ಇದರಿಂದ ದೊಡ್ಡಮಟ್ಟದ ಸಾಧನೆಯನ್ನು ಮಾಡಲು ಈ ರೀತಿಯ ಕ್ರಮ ಕೈಗೊಂಡಿದ್ದೇವೆ. ದೇಶದಲ್ಲಿ ಕೆಲವೇ ಕೆಲವು ರಾಜ್ಯದಲ್ಲಿ ಈ ರೀತಿ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿ ಕರ್ನಾಟಕ ಕೂಡ ಒಂದು ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಕಲಿಯುವುದು ಅಡಿಪಾಯವಾಗುತ್ತದೆ, ಆದರೆ ಜಾಗತಿಕಮಟ್ಟದಲ್ಲಿ ಉದ್ಯೋಗ ಪಡೆದು ಉನ್ನತಿಗೆ ಏರಬೇಕಾದರೆ ಹೆಚ್ಚಿನ ಕೌಶಲ್ಯ ಅಗತ್ಯವಿರುತ್ತದೆ. ಇದನ್ನು ನಮ್ಮ ಸರ್ಕಾರ ನೀಡುತ್ತದೆ. ಯುವ ನಿಧಿ ಮೂಲಕ ಆರ್ಥಿಕ ನೆರವು ಒದಗಿಸುತ್ತಿರುವುದು ಇದೇ ಕಾರಣಕ್ಕೆ. ಕೇವಲ ಹಣ ನೀಡಿ ಯುವಕರನ್ನು ಕೈಬಿಡುತ್ತಿಲ್ಲ. ಹೆಚ್ಚಿನ ಕೌಶಲ್ಯ ಕೂಡ ನೀಡಿ ಉದ್ಯೋಗ ಕೊಡಿಸುತ್ತೇವೆ ಎಂದು ಸಚಿವರು ತಿಳಿಸಿದರು.

*ಯುವಕರಿಗೆ ಉದ್ಯೋಗ ಸೃಷ್ಟಿಯೇ ಸರ್ಕಾರದ ಗುರಿ: ಎಚ್‌ಸಿಎಂ:* ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಆದರೆ ಕರ್ನಾಟಕದಲ್ಲಿ ನಮ್ಮ ಸರ್ಕಾರ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಲು ಮುಂದಾಗಿದೆ. ಯುವಕರಿಗೆ ಉದ್ಯೋಗ ಕೊಡಿಸುವುದೇ ನಮ್ಮ ಧ್ಯೇಯ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕರ್ನಾಟಕ ಸ್ಕಿಲ್ ಡೆವಲಪ್ಮೆಂಟ್ ಅಥಾರಿಟಿ ಅಧ್ಯಕ್ಷರಾದ ರಮಣಾರೆಡ್ಡಿ, ಹಿರಿಯ ಅಧಿಕಾರಿಗಳಾದ ಏಕ್ರೂಪ್ ಕೌರ್, ದಿನೇಶ್ ಕುಮಾರ್, ರಾಗಪ್ರಿಯಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರಕಾಶ್ ರಾಥೋಡ್ ಹಾಗೂ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು