9:43 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ರೋಟರ‌್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಪದಗ್ರಹಣ ; ರೋ.ಬಿದ್ದಪ್ಪ ನೂತನ ಅಧ್ಯಕ್ಷ

03/08/2024, 10:05

ಮಂಗಳೂರು(reporterKarnataka.com)

ರೋಟರ‌್ಯಾಕ್ಟ್ ಸಂಸ್ಥೆಯ ಯುವ ಸದಸ್ಯರು ಕ್ರಿಯಾಶೀಲರಾಗಿ ಜನಪರ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಯಕತ್ವ ಗುಣ ಬೆಳೆಸಿ ಯಶಸ್ಸು ಸಾಧಿಸಬೇಕು ಎಂದು ರೋಟರ‌್ಯಾಕ್ಟ್ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ಸಲಹೆ ನೀಡಿದ್ದಾರೆ.

ಅವರು ರೋಟರ‌್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ಬ್ರಿಯಾನ್ ಪಿಂಟೋ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಪದಗ್ರಹಣದ ವಿಧಿವಿಧಾನ ನೆರವೇರಿಸಿ ತಂಡಕ್ಕೆ ಶುಭಕೋರಿದರು.

ನಿರ್ಗಮನ ಅಧ್ಯಕ್ಷ ಅವಿನಾಶ್ ಕುಲಾಲ್ ಸ್ವಾಗತಿಸಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಬಿದ್ದಪ್ಪ ಎಂ.ಎ. ಪ್ರಸ್ತುತ ಸಾಲಿನಲ್ಲಿ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಅನುಷ್ಠಾನಗೊಳಿಸಲು ಸರ್ವಸದಸ್ಯರ ಪ್ರೋತ್ಸಾಹ ಮತ್ತು ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಡಾ.ಅಗ್ರಜ್, ಡೊಮಿನಿಕ್, ರೋಶನ್, ರಕ್ಷಣ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಗಣೇಶ್ ಮತ್ತು ಡೇರಿಲ್ ಡಿ’ಸೋಜ ಅವರನ್ನು ಸನ್ಮಾನಿಸಲಾಯಿತು. ನೂತನ ಕಾರ್ಯದರ್ಶಿ ಅಕ್ಷಯ್ ರೈ ವಾರ್ಷಿಕ ವರದಿ ಮಂಡಿಸಿ, ವಂದಿಸಿದರು. ಪೂಜಾ ನಿರೂಪಿಸಿದರು.

ಪದಾಧಿಕಾರಿಗಳ ವಿವರ : ಅರವಿನ್ ಡಿ’ಸೋಜ (ದಂಡಾಧಿಕಾರಿ), ಹಾರ್ದಿಕ್ (ಕೋಶಾಧಿಕಾರಿ). ಪ್ಲೋಯ್ದ ಮೋರಸ್ (ಸಾರ್ವಜನಿಕ ಸಂಪರ್ಕ ಅಧಿಕಾರಿ), ನಿರ್ದೇಶಕರು : ಕಾವ್ಯ (ಸಮಾಜ ಸೇವೆ), ಅಭಿಜಿತ್ (ವೃತ್ತಿಪರ ಸೇವೆ), ಶ್ರದ್ಧಾ ಕೇಶವ್ (ಸಂಸ್ಥೆ ಸೇವೆ), ವರುಣ್ ರೈ (ಅಂತರಾಷ್ಟ್ರೀಯ ಸೇವೆ)

ಇತ್ತೀಚಿನ ಸುದ್ದಿ

ಜಾಹೀರಾತು