8:34 PM Friday25 - September 2026
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ

ಇತ್ತೀಚಿನ ಸುದ್ದಿ

Mangaluru | ಕೆ.ಪಿ. ರಾವ್, ಕುಡ್ದು ಕೊರಗ ಪಾಂಗಾಳ, ಉಷಾ ಭಂಡಾರಿ ಸಹಿತ 6 ಮಂದಿಗೆ ತುಳು ಅಕಾಡೆಮಿ ಪ್ರಶಸ್ತಿ

25/09/2026, 20:13

ಮಂಗಳೂರು(reporterkarnataka.com): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಭಾರತೀಯ ಭಾಷೆಯನ್ನು ಗಣಕಯಂತ್ರದಲ್ಲಿ ಅಳವಡಿಸುವಲ್ಲಿ ಮಹತ್ವದ ಭೂಮಿಕೆ ವಹಿಸಿದ ಕೆ.ಪಿ. ರಾವ್ , ತುಳು ಸಾಂಪ್ರದಾಯಿಕ ಡೋಲು ವಾದನ ಕಲಾವಿದರಾಗಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ ಕುಡ್ದು ಕೊರಗ ಪಾಂಗಳ ಸಹಿತ 6 ಮಂದಿಗೆ ನೀಡಲಾಗಿದೆ.

*ಪ್ರೊ. ಬಿ.ಶಿವರಾಮ ಶೆಟ್ಟಿ*
ಕ್ಷೇತ್ರ: ಸಾಹಿತ್ಯ / ಸಂಶೋಧನೆ
ತುಳುನಾಡಿನ ಪ್ರಮುಖ ವಿದ್ವಾಂಸರಲ್ಲಿ ಒಬ್ಬರೆನಿಸಿರುವ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 38 ವರ್ಷಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ನಿವೃತ್ತರಾದವರು. 1993 ರಲ್ಲಿ ‘ತುಳುನಾಡಿನ ಸಸ್ಯ ಜಾನಪದ’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿ.ವಿ.ಯಿಂದ ಪಿ.ಹೆಚ್.ಡಿ ಪದವಿ ಪಡೆದವರು. ಹಂಪಿ ವಿಶ್ವ ವಿದ್ಯಾನಿಲಯದಿಂದ ಈ ಕೃತಿ ಪ್ರಕಟಗೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯುಕ್ತ ಅಧ್ಯಕ್ಷರಾಗಿ ತುಳು ಪಠ್ಯ ಪುಸ್ತಕಗಳ ಹಾಗೂ ಪಠ್ಯಕ್ರಮ ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ವಿಭಾಗದ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
ತುಳು ಮತ್ತು ಕನ್ನಡ ಭಾಷೆ, ಸಾಹಿತ್ಯ, ಜಾನಪದ ಮೌಖಿಕ ಚರಿತ್ರೆ, ಸ್ಥಳೀಯ ಚರಿತ್ರೆಗೆ ಸಂಬಂಧಿಸಿದಂತೆ 130 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ , ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ. 15 ಕ್ಕೂ ಹೆಚ್ಚು ತುಳು ಕನ್ನಡ ಕೃತಿಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ತುಳು ಅಧ್ಯಯನ ಕ್ಷೇತ್ರದ ಸಾಧನೆಗಾಗಿ ‘ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ’ ಪ್ರಶಸ್ತಿ ,ಪೊಳಲಿ ಶೀನಪ್ಪ ಹೆಗ್ಡೆ ಹಾಗೂ ಎಸ್ ಆರ್ ಹೆಗ್ಡೆ ಪ್ರಶಸ್ತಿ ಪುರಸ್ಕ್ರತರಾಗಿದ್ದಾರೆ.

*ಕುಡ್ಡು ಕೊರಗ ಪಾಂಗಾಳ*
ಕ್ಷೇತ್ರ : ಜಾನಪದ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಪಾಂಗಾಳ ಕುಡ್ಡು ಕೊರಗ ಇವರು ಕಳೆದ 4 ದಶಕಗಳಿಗಿಂತಲೂ ಹೆಚ್ಚು ಕಾಲ ತುಳುನಾಡಿನ ಸಾಂಪ್ರಾದಾಯಿಕ ಡೋಲು ವಾದನ ಕಲಾವಿದರಾಗಿ ಸೇವೆ ಸಲ್ಲಿಸಿದವರು.
ಕುಲ ಕಸುಬನ್ನು ನಿರ್ವಹಿಸಿಕೊಂಡು ಬಂದ ಕುಡ್ಡು ಕೊರಗ ಅವರು ಬುಟ್ಟಿ ಹೆಣೆಯುವುದರಲ್ಲೂ ಪರಿಣಿತರಾಗಿದ್ದರು. ಡೋಲು ವಾದನ ಹಾಗೂ ಬಿರ್ದುದ ಪಾಟ್ ಹೇಳುವುದರಲ್ಲಿ ಅನುಭವಿಗಳು.
ಇನ್ನಂಜೆ , ಪಾಂಗಾಳ ಪ್ರದೇಶ ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ಗುರಿಕಾರನಾಗಿ ಸೇವೆ ಸಲ್ಲಿಸಿದ ಇವರು ಕೊರಗ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಜಲು ಪದ್ಧತಿಯ ನಿಷೇಧಕ್ಕಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡವರು. ಸಮುದಾಯದ ಆರಾಧನೆ, ಆಚರಣೆ, ಕಟ್ಟುಕಟ್ಟಳೆಗಳ ಬಗ್ಗೆ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

*ಉಷಾ ಭಂಡಾರಿ* ಬೆಂಗಳೂರು
ಕ್ಷೇತ್ರ: ಸಿನಿಮಾ/ ನಾಟಕ
ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕಳೆದ ಮೂರುವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಉಷಾ ಭಂಡಾರಿ ಅವರು ನಟಿ, ನಿರ್ದೇಶಕಿ ಹಾಗೂ ನಟನಾ ಕೌಶಲ್ಯ ತರಬೇತುದಾರೆಯಾಗಿ ಖ್ಯಾತರು.
ನಿನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಉಷಾ ಭಂಡಾರಿ ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ನಾಟಕ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪುರಸ್ಕ್ರತರು .
ಅನೇಕ ತುಳು ನಾಟಕ, ತುಳು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಉಷಾ ಭಂಡಾರಿ ಅವರು ಕನ್ನಡ ನಾಟಕ, ಸಿನಿಮಾ, ಧಾರವಾಹಿಗಳಲ್ಲಿಯೂ ಮಿಂಚಿದವರು.
ನಟನೆಗಾಗಿ ಅನೇಕ ಸಿನಿಮಾ ಉತ್ಸವಗಳಲ್ಲಿ ಪ್ರಶಸ್ತಿ ಪುರಸ್ಕ್ರತರು. ಅನೇಕ ನಾಟಕ ಹಾಗೂ ಸಿನಿಮಾಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಮೂಲತ ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನವರಾಗಿರುವ ಉಷಾ ಭಂಡಾರಿ ಅವರು ಬೆಂಗಳೂರಿನಲ್ಲಿ ನಟನಾ ಕೌಶಲ್ಯ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ, ಆ ಮೂಲಕ ಹಲವಾರು ಕಲಾವಿದರು, ನಿರ್ದೇಶಕರನ್ನು ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

*ಕೆ.ಪಿ.ರಾವ್*
ಕ್ಷೇತ್ರ : ಸಾಹಿತ್ಯ /ಸಂಶೋಧನೆ
ಕಿನ್ನಿಕಂಬಳ ಪದ್ಮನಾಭ ರಾವ್‌ ಅವರು ಕೆ. ಪಿ. ರಾವ್‌ ಎಂದೇ ಜನಪ್ರಿಯರು. ಭಾರತೀಯ ಭಾಷೆಗಳನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲಿ ಆದ್ಯ ಪ್ರಯತ್ನ ಮಾಡಿದವರು. 90 ದಶಕದಲ್ಲಿ ತುಳುವಿನ ಲಿಪಿಯ ಕುರಿತ ತಂತ್ರಾಂಶ ಸಿದ್ಧಪಡಿಸುವ ಕುರಿತ ಸಂಶೋಧನೆಯನ್ನು ಕೈಗೊಂಡವರು
ಕೆ. ಪಿ. ರಾಯರು ರಚಿಸಿದ ಕಂಪ್ಯೂಟರ್ ಪ್ರೋಗ್ರಾಂ ಬಳಸಿಯೇ ಉಡುಪಿಯ ಆರ್.ಆರ್.ಸಿ ವತಿಯಿಂದ ಐತಿಹಾಸಿಕ ತುಳು ನಿಘಂಟುವಿನ ಆರು ಸಂಪುಟ ಮುದ್ರಿತವಾಯಿತು. ತುಳು ಭಾಷೆಗೆ ಸಂಬಂಧಿಸಿದಂತೆ ಕಂಪ್ಯೂಟರ್‌ ಪ್ರೋಗ್ರಾಂನಲ್ಲಿ ಪ್ರಾಯೋಗಿಕ ಬಳಕೆಯ ನೆಲೆಯಲ್ಲಿ ಹಲವು ಪರಿಷ್ಕರಣೆಗಳನ್ನು ಮಾಡಿದ್ದಾರೆ.
ತುಳುವಿನ ‘ಧ್ವನಿವಿಜ್ಞಾನ’ವನ್ನು ತಾರ್ಕಿಕವಾಗಿ ಯೋಚಿಸಿ ಅದಕ್ಕೆ ಅನುಗುಣವಾಗಿ ಟೈಪಿಂಗ್‌ ಪ್ರೋಗ್ರಾಂ ರೂಪಿಸಿದವರಲ್ಲಿ ಕೆ. ಪಿ. ರಾವ್‌ ಮೊದಲಿಗರು.
ಆರಂಭದ ದಿನಗಳಲ್ಲಿ ಕನ್ನಡ ವಿಕಿಪೀಡಿಯಾದಲ್ಲಿ ಕೆಲಸ ಮಾಡಿದ ಕೆ. ಪಿ. ರಾವ್‌ ಮುಂದೆ, ತುಳುವಿಕಿಪೀಡಿಯಾಕ್ಕೆ ಸಂಬಂಧಿಸಿಯೂ ಮಹತ್ತ್ವದ ಸಲಹೆಗಳನ್ನು ನೀಡಿದ್ದಾರೆ. ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ತುಳುಭಾಷೆಯ ಬೆಳವಣಿಗೆಗೆ ಕೆ. ಪಿ. ರಾಯರ ಕೊಡುಗೆ ಮಹತ್ತ್ವದ್ದಾಗಿದೆ.

*ನೇಮು ಪರವ*
ಕ್ಷೇತ್ರ: ಜಾನಪದ
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇವು ಪರವ ಹಾಗೂ ಕೊರಪ್ಪೊಳು ದಂಪತಿಗಳ ಮಗನಾದ ಶ್ರೀ ನೇಮು ಪರವ ಇವರು ತನ್ನ 16 ನೇ ವಯಸ್ಸಿನಿಂದಲೇ ದೈವ ನರ್ತನದ ಸೇವೆ ಸಲ್ಲಿಸಲು ಪ್ರಾರಂಭಿಸಿದವರು.
ಪುತ್ತೂರು, ಕೊಡಗು, ಸುಳ್ಯ, ಬಂಟ್ವಾಳದಲ್ಲಿನ ಪ್ರಮುಖ ದೈವಸ್ಥಾನಗಳಲ್ಲಿ ವರ್ಣರ ಪಂಜುರ್ಲಿ, ಸತ್ಯದೇವತೆ, ಪಿಲಿಚಾಮುಂಡಿ, ರುದ್ರಚಾಮುಂಡಿ, ರಕ್ತೇಶ್ವರಿ, ಮಲರಾಯ, ಅಣ್ಣಪ್ಪ ಪಂಜುರ್ಲಿ ಹಾಗೂ ಮಾಯಾಂದಾಳ್ ಮೊದಲಾದ ದೈವಗಳಿಗೆ ದೈವ ನರ್ತನದ ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು 18 ಬ್ರಹ್ಮ ಬೈದರ್ಕಳ ಗರಡಿಗಳಲ್ಲಿ, ಪುತ್ತೂರು, ಸುಳ್ಯ ವ್ಯಾಪ್ತಿಯ 25ಕ್ಕೂ ಹೆಚ್ಚು ಪುರಾತನ ಭೂತಾರಾದನೆಯ ಕ್ಷೇತ್ರಗಳಲ್ಲಿ ದೈವ ನರ್ತನದ ಸೇವೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು ಇವರ ಸೇವೆಯನ್ನು ಪುರಸ್ಕರಿಸಿ ಗೌರವಿಸಿದ್ದಾರೆ.

*ಸುಧಾಕರ ಬನ್ನಂಜೆ* ಬೆಂಗಳೂರು
ಕ್ಷೇತ್ರ : ಸಿನಿಮಾ/ನಾಟಕ
ನಾಟಕ, ಸಿನಿಮಾ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸುಧಾಕರ ಬನ್ನಂಜೆ ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಾಟಕ ರಚನೆಗಾರರಾಗಿ. ಚಿತ್ರ ಸಂಭಾಷಣೆಗಾರರಾಗಿ, ಗೀತಾ ಸಾಹಿತ್ಯ ರಚನೆಗಾರರಾಗಿ ಪ್ರಸಿದ್ಧರು.
ಸುಧಾಕರ ಬನ್ನಂಜೆ ಅವರು 64 ತುಳು ನಾಟಕಗಳನ್ನು , 24 ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ನೂರಾರು ನಾಟಕ ಹಾಗೂ ಸಿನಿಮಾಗಳಲ್ಲಿ ನಟನಾಗಿ ಮಿಂಚಿದ್ದಾರೆ. ತುಳು ಸಿನಿಮಾ ನಿರ್ದೇಶನ ನಿರ್ಮಾಪಕರಾಗಿಯು ಕಾರ್ಯನಿರ್ವಹಿಸಿದ್ದಾರೆ.
ದೂರದರ್ಶನ ಸೇರಿದಂತೆ ಖಾಸಗಿ ಟಿ.ವಿ ವಾಹಿನಿಗಳಿಗೆ ಅನೇಕ ತುಳು ಧಾರವಾಹಿ, ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿಯೂ ಹಲವು ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯ ಬನ್ನಂಜೆ ಮೂಲದವರಾದ ಸುಧಾಕರ ಬನ್ನಂಜೆ ಅವರು ಬೆಂಗಳೂರಿನಲ್ಲಿ ನೆಲೆಸಿ ನಾಟಕ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು